ನೀವು ಪಾಕಿಸ್ತಾನಿಗಳೇ?, ಕೇರಳ ವಿದ್ಯಾರ್ಥಿಗಳನ್ನು ಪ್ರಶ್ನಿಸಿದ ಬೆಂಗಳೂರು ಪೊಲೀಸರು

0
948

ಸನ್ಮಾರ್ಗ ವಾರ್ತೆ

ಬೆಂಗಳೂರು, ಜ. 16: ಕೇರಳದ ಮುಸ್ಲಿಂ ವಿದ್ಯಾರ್ಥಿಗಳನ್ನು ಬೆಂಗಳೂರು ಪೊಲೀಸರು ನೀವು ಪಾಕಿಸ್ತಾನಿಗಳೇ ಎಂದು ಕೇಳಿ ವಿವಾದ ಸೃಷ್ಟಿಸಿದ್ದಾರೆ ಎಂದು ವರದಿಯಾಗಿದೆ. ರಾತ್ರೆಯ ವೇಳೆ ವಿದ್ಯಾರ್ಥಿಗಳನ್ನು ಪೆಟ್ರೋಲಿಂಗ್ ನಡೆಸಿದ ಪೊಲೀಸರು ಹೀಗೆ ಕೇಳಿದ್ದಾರೆ. ನಮ್ಮನ್ನು ಹಿಡಿದು ಎರಡು ಗಂಟೆಗಳ ಕಾಲ ಪೊಲೀಸ್ ಠಾಣೆಯಲ್ಲಿ ಇರಿಸಿ ಲಾಠಿಯಿಂದ ಹೊಡೆದಿದ್ದಾರೆ ಎಂದು ವಿದ್ಯಾರ್ಥಿಗಳು ಹೇಳಿದರು. ಕೊನೆಗೆ ಕ್ಷಮೆಪತ್ರ ಬರೆಯಿಸಿ ದಂಡ ವಸೂಲು ಮಾಡಿ ವಿದ್ಯಾರ್ಥಿಗಳನ್ನು ಬಿಟ್ಟು ಬಿಡಲಾಗಿದೆ. ಕಳೆದ ದಿವಸ ರಾತ್ರೆ ಒಂದೂವರೆ ಗಂಟೆಗೆ ಬೆಂಗಳೂರು ಎಸ್‍ಜಿ ಪಾಳಯ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದೆ.

ವಿದ್ಯಾರ್ಥಿಗಳು ತಮ್ಮ ಅನುಭವಗಳನ್ನು ವೀಡಿಯೊ ಸಹಿತ ಸಾಮಾಜಿಕ ಮಾಧ್ಯಮಗಳಲ್ಲಿ ಪೋಸ್ಟ್ ಮಾಡಿದ ಬಳಿಕ ಘಟನೆ ಬಹಿರಂಗವಾಗಿದೆ. ವಿದ್ಯಾರ್ಥಿಗಳ ಸಂಬಂಧಿಕರು ಬಿಟಿಎಂ ಲೇಔಟ್ ಶಾಸಕ ರಾಮಲಿಂಗ ರೆಡ್ಡಿಯನ್ನು ಭೇಟಿಯಾಗಿದ್ದಾರೆ. ಶಾಸಕರು ನಂತರ ವೈಟ್ಫೀಲ್ಡ್ ಡಿಸಿಪಿಯಿಂದ ವರದಿ ಕೇಳಿದ್ದಾರೆ. ಪೊಲೀಸರು ವಿದ್ಯಾರ್ಥಿಗಳ ಮೇಲೆ ಏರಿ ಹೋಗುವುದು ವೀಡಿಯೊದಲ್ಲಿದೆ. ವೀಡಿಯೊವನ್ನು ತಡೆಯುವುದು ಕೂಡ ವೀಡಿಯೊ ದಲ್ಲಿದ್ದು ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಆಗಿದೆ. ಬೆಂಗಳೂರು ಸಾಫ್ಟ್ ವೇರ್ ವಿದ್ಯಾರ್ಥಿ ,ಆತನ ಸಹೋದರ ಮತ್ತು ಆತನ ಇನ್ನೊಬ್ಬ ಗೆಳೆಯನಿಗೆ ಇಂತಹ ಕೆಟ್ಟ ಅನುಭವವಾಗಿದೆ.