ಕಾಶ್ಮೀರ: ಶೆಹ್ಲಾ ರಶೀದ್‍‌ ಆರೋಪವನ್ನು ತಳ್ಳಿಹಾಕಿದ ಸೇನೆ

0
487

ಸನ್ಮಾರ್ಗ ವಾರ್ತೆ
ಹೊಸದಿಲ್ಲಿ,ಆ.19: ಕಾಶ್ಮೀರದಲ್ಲಿ ಎಲ್ಲವೂ ಸೈನ್ಯದ ಅಧೀನದಲ್ಲಿದೆ ಎಂದು ಜಮ್ಮು-ಕಾಶ್ಮೀರ ಪೀಪಲ್ಸ್ ಮೂವ್‍ಮೆಂಟ್ ನಾಯಕಿ ಶೆಹ್ಲಾ ರಶೀದ್‍ರ ಆರೋಪವನ್ನು ಭಾರತ ಸೇನೆ ತಳ್ಳಿಹಾಕಿದೆ. ಇಂತಹ ಅನಧಿಕೃತ ಸುದ್ದಿ ಹರಡುವುದರಿಂದ ಹಾನಿಯಾಬಹುದು ಎಂದು ಸೇನೆ ಹೇಳಿದೆ.

ನಿರಂತರ ಟ್ವೀಟ್ ಮೂಲಕ ಶೆಹ್ಲಾ ಸೇನೆಯ ವಿರುದ್ಧ, ಕಾಶ್ಮೀರದ ನಿಯಂತ್ರಣಗಳ ವಿರುದ್ಧ ಟೀಕಾ ಪ್ರಹಾರ ಹರಿಸಿದ್ದರು. ಜಮ್ಮು-ಕಾಶ್ಮೀರದ ಶಾಂತಿ ಕಾಪಾಡಲು ಪೊಲೀಸರಿಗೆ ಏನೂ ಮಾಡಲು ಆಗುತ್ತಿಲ್ಲ. ಎಲ್ಲವೂ ಸೇನೆಯ ಅಧಿಕಾರದಲ್ಲಿದೆ ಎಂದು ಜನರು ಹೇಳುತ್ತಿದ್ದಾರೆ ಎಂದು ಶೆಹ್ಲಾ ಟ್ವೀಟ್ ಮಾಡಿದ್ದರು.

ಇನ್ನೊಂದು ಟ್ವೀಟ್‍ನಲ್ಲಿ ಸಶಸ್ತ್ರ ಸೇನೆ ರಾತ್ರೆ ಮನೆಗಳಿಗೆ ನುಗ್ಗಿ ಪುರುಷರನ್ನು ಕೊಂಡು ಹೋಗುತ್ತಿದೆ. ಮನೆಯನ್ನು ಅಡಿಮೇಲುಗೊಳಿಸುತ್ತಿದೆ. ಆಹಾರ ವಸ್ತುಗಳನ್ನು ನಾಶಮಾಡುತ್ತಿದೆ ಎಂದು ಶೆಹ್ಲಾ ಆರೋಪಿಸಿದ್ದರು. ಶೋಪಿಯಾನ್ ವಲಯದಲ್ಲಿ ನಾಲ್ಕು ಮಂದಿಯನ್ನು ಸೇನೆ ಶಿಬಿರಕ್ಕೆ ಹಿಡಿದುಕೊಂಡು ಹೋಗಿದೆ. ಪ್ರದೇಶದ ನಿವಾಸಿಗಳು ಹೆದರಿಸಕ್ಕಾಗಿ ಹಿಡಿದುಕೊಂಡು ಹೋಗುವಾಗ ಅಳುತ್ತಿರುವುದು ಹೊರಗೆ ಕೇಳುವಂತೆ ಮೈಕ್ ಇರಿಸಲಾಗಿದೆ ಎಂದು ಇನ್ನೊಂದು ಟ್ವೀಟ್‍ನಲ್ಲಿ ಶೆಹ್ಲಾ ಆರೋಪಿಸಿದ್ದರು.