ಸ್ವಘೋಷಿತ ದೇಶಪ್ರೇಮಿ 40 ಸೈನಿಕರ ಸಾವನ್ನು ಸಂಭ್ರಮಿಸುತ್ತಾರೆ: ಅರ್ನಬ್ ವಿರುದ್ಧ ತನಿಖೆಗೆ ಆಗ್ರಹಿಸಿದ ಶಶಿ ತರೂರ್

0
1057

ಸನ್ಮಾರ್ಗ ವಾರ್ತೆ

ಮುಂಬೈ: ರಿಪಬ್ಲಿಕ್ ಟಿವಿ ಮುಖ್ಯಸ್ಥ ಅರ್ನಬ್ ಗೋಸ್ವಾಮಿ ಮತ್ತು ಟಿವಿ ರೇಟಿಂಗ್ ಕಂಪೆನಿ ಬಾರ್ಕ್ ಸಿಇಒ ಪಾರ್ಥ ದಾಸ್‍ಗುಪ್ತಾರವರ ವಾಟ್ಸಪ್ ಚ್ಯಾಟ್‍ಗಳು ಬಹಿರಂಗವಾಗಿದ್ದು ಕಾಂಗ್ರೆಸ್ ನಾಯಕ ಶಶಿ ತರೂರು ತನಿಖೆಗೆ ಆಗ್ರಹಸಿದ್ದಾರೆ. ಈ ವಿಷಯದಲ್ಲಿ ಸರಕಾರ ತನಿಖೆ ನಡೆಸದಿದ್ದರೆ ಯಾರು ತನಿಖೆ ನಡೆಸಬೇಕು ಎಂದು ತರೂತ್ ಫೇಸ್‍ಬುಕ್ ಪೋಸ್ಟಿನಲ್ಲಿ ಹೇಳಿದರು.

ಈಗ ವಿವಾದವಾಗಿರುವ ವಾಟ್ಸಪ್ ಚ್ಯಟ್‍ಲ್ಲಿ ಮೂರು ಖಂಡನೀಯ ವಿಷಯಗಳನ್ನು ಹೊರತಂದಿದೆ. 1) ದೇಶದ ಸುರಕ್ಷೆಗೆ ಸಂಬಂಧಿಸಿದ ರಹಸ್ಯಗಳನ್ನು ಒಂದು ಖಾಸಗಿ ಚ್ಯಾನೆಲ್‍ಗೆ ವಾಣಿಜ್ಯ ಉದ್ದೇಶಕ್ಕಾಗಿ ನೀಡಿದ್ದು, 2) ದೇಶಪ್ರೇಮಿ ಎಂದು ಸ್ವಯಂ ಘೋಷಿಸಿರುವ ಒಬ್ಬರು ನಮ್ಮ 40 ಸೈನಿಕರ ಮರಣವನ್ನು ನಮ್ಮ ವಿಜಯ ಎಂದು ಹೇಳಿಕೊಂಡದ್ದು, 3) ಟಿಆರ್‌ಪಿ ವಂಚನೆಯ ಕೃತ್ಯ. ಈ ವಿಷಯದಲ್ಲಿ ಸರಕಾರ ತನಿಖೆ ನಡೆಸದಿದ್ದರೆ, ಈ ವಿಷಯದಲ್ಲಿ ಸಂಕೀರ್ಣವಾದ ಮೋಸದ ಕಥೆಗಳನ್ನು ಕೇಳುವಾಗ ಸರಕಾರ ಇದರ ವಿರುದ್ಧ ತನಿಖೆ ನಡೆಸುವುದಿಲ್ಲ ಎಂದು ನಮಗೆ ಸಂದೇಹಿಸಬೇಕಾಗುತ್ತದೆ)ಮತ್ತೆ ಯಾರು ತನಿಖೆ ನಡೆಸುವುದು. ಇನ್ನು ಈ ವಿಷಯದಲ್ಲಿ ಸುಪ್ರೀಂ ಕೋರ್ಟಿನಲ್ಲಿ ಸಾರ್ವಜನಿಕ ಹಿತಾಸಕ್ತಿ ಅರ್ಜಿ ದಾಖಲಿಸಬೇಕಾಬಹುದೇ? ಎಂದು ತರೂರ್ ಪ್ರಶ್ನಿಸಿದರು.