ಕನಿಷ್ಠ 50 ಟಿಎಂಸಿ ಶಾಸಕರು ಮುಂದಿನ ತಿಂಗಳು ಬಿಜೆಪಿಗೆ ಸೇರ್ಪಡೆಯಾಗಲಿದ್ದಾರೆ: ದಿಲೀಪ್ ಘೋಷ್

0
350

ಸನ್ಮಾರ್ಗ ವಾರ್ತೆ

ಬರ್ರಾಕ್ಪೋರ್: ಪಶ್ಚಿಮ ಬಂಗಾಳ ಭಾರತೀಯ ಜನತಾ ಪಕ್ಷದ ಮುಖ್ಯಸ್ಥ ದಿಲೀಪ್ ಘೋಷ್‌ರವರು ಪಶ್ಚಿಮ ಬಂಗಾಳ ಸಚಿವ ಜ್ಯೋತಿಪ್ರಿಯ ಮಲ್ಲಿಕ್‌‌ರಿಗೆ ಕನಿಷ್ಠ ಒಬ್ಬ ಬಿಜೆಪಿಯ ಬೂತ್ ಅಧ್ಯಕ್ಷರನ್ನಾದರೂ ತೃಣಮೂಲ ಕಾಂಗ್ರೆಸ್(ಟಿಎಂಸಿ)ಗೆ ಸೇರ್ಪಡೆಗೊಳಿಸಿ ತೋರಿಸುವಂತೆ ಸವಾಲೆಸೆದಿದ್ದಾರೆ.

ಮಲ್ಲಿಕ್‌ರವರು ಟಿಎಂಸಿಯನ್ನು ತೊರೆದ ಶಾಸಕರು ಮತ್ತೆ ಪಕ್ಷಕ್ಕೆ ಸೇರಲು ಸರದಿಯಲ್ಲಿದ್ದಾರೆ ಎಂದು ಹೇಳಿದ ಬೆನ್ನಿಗೆ ಇದನ್ನು ನಿರಾಕರಿಸಿದ ಘೋಷ್, ಕನಿಷ್ಠ ಒಬ್ಬ ಬಿಜೆಪಿಯ ಬೂತ್ ಅಧ್ಯಕ್ಷರನ್ನಾದರೂ ತೃಣಮೂಲ ಕಾಂಗ್ರೆಸ್(ಟಿಎಂಸಿ)ಗೆ ಸೇರ್ಪಡೆಗೊಳಿಸಿ ತೋರಿಸಿರಿ. ಮುಂದಿನ ತಿಂಗಳು ಕನಿಷ್ಠ 50 ಟಿಎಂಸಿ ಶಾಸಕರು ಬಿಜೆಪಿಗೆ ಸೇರ್ಪಡೆಗೊಳ್ಳಲಿದ್ದಾರೆ ಎಂದು ಸವಾಲು ಹಾಕಿದ್ದಾರೆ.