ಪ್ರೀತಿಯನ್ನು ಪ್ರಕಟಿಸಿ, ಅದು ಬಚ್ಚಿಡುವಂಥದ್ದಲ್ಲ

0
440

ಸನ್ಮಾರ್ಗ ವಾರ್ತೆ

ಪಿ. ಎಂ. ಎ. ಗಫೂರ್

ಅನು: ಅಬೂ ಸಲ್ವಾನ್

ನೀವು ಜೇನು ನೊಣಗಳನ್ನು ಗಮನಿಸಿ ದ್ದೀರಾ? ಅದು ತನಗೆ ಕಾಣುವ ಎಲ್ಲಾ ಹೂ ಗಳನ್ನು ಸೇರುತ್ತದೆ. ಅದರಿಂದ ತನಗೆ ಸಿಗುವಷ್ಟು ಮಕರಂಧವನ್ನು ಹೀರುತ್ತದೆ. ಆದರೆ ಅದು ಯಾವುದೇ ಹೂವಿನಲ್ಲಿ ಸ್ಥಿರವಾಗಿ ನಿಲ್ಲದು. ಆದರೆ ಎಲ್ಲಾ ಹೂವಿನ ಬಳಿಗೂ ಅದು ತೆರಳುವುದು. ಹೂಗಳಲ್ಲಿರುವ ಮಕರಂಧವನ್ನು ಹೀರುತ್ತದೆಯೇ ಹೊರತು ಅದು ಮರಳಿ ನೀಡುವುದಿಲ್ಲ.

ನಮ್ಮ ಮಧ್ಯೆಯೂ ಇಂತಹವರು ಇದ್ದಾರೆ. ಅವರು ಜನರಿಂದ ಬಹಳಷ್ಟು ಬಯಸುತ್ತಾರೆ. ಆದರೆ ಅವರಿಂದ ಜನರಿಗೆ ಏನೂ ದೊರೆಯದು. ನಿಮ್ಮಲ್ಲಿ ಶ್ರೀಮಂತ ವ್ಯಕ್ತಿ ಯಾರು? ಎಂದು ಕೇಳಿದರೆ ನಾವು ಸಾಕಷ್ಟು ಹಣ ಇರುವ ವ್ಯಕ್ತಿ ಎಂದೇ ಉತ್ತರಿಸುತ್ತೇವೆ. ಹಣವನ್ನು ಸಂಪನ್ನತೆಯ ಶ್ರೀಮಂತಿಕೆಯ ಮಾನದಂಡವಾಗಿ ನಾವು ತಪ್ಪಾಗಿ ಅರ್ಥೈಸಿದ್ದೇವೆ. ವಾಸ್ತವದಲ್ಲಿ ಇದು ಸರಿಯೇ? ಜೇಬಲ್ಲಿ ಸಾಕಷ್ಟು ಹಣವಿದ್ದ ಕೂಡಲೇ ಓರ್ವ ಶ್ರೀಮಂತನಾಗುತ್ತಾನೆಯೇ? ಇಲ್ಲ ಶ್ರೀಮಂತಿಕೆ ಇರುವುದು ಹೃದಯದಲ್ಲಾಗಿದೆ. ಆ ಹೃದಯವು ಕೆಲವಾರು ವಿಷಯಗಳಿಂದ ತುಂಬಿ ತುಳುಕುವಾಗ ಜೇಬು ಬರಿದಾಗಬಹುದು. ಆದರೆ ವ್ಯಕ್ತಿ ಮಾತ್ರ ಸಂಪನ್ನನಾಗಿರುವನು, ಐಶ್ವರ್ಯವಂತನಾಗಿರುವನು. ಹಾಗಾದರೆ ಆ ಹೃದಯದಲ್ಲಿ ತುಂಬಿ ತುಳುಕಿದ ಐಶ್ವರ್ಯ, ಸಂಪತ್ತು ಏನಾಗಿರಬಹುದು? ಅದು ಬೇರೆ ಏನೂ ಅಲ್ಲ. ತುಂಬಿ ತುಳುಕುವ ಸ್ನೇಹ, ಪ್ರೀತಿ ಆಗಿದೆ. ಪರಸ್ಪರ ಅರಿತು ಬೆರೆತು ಆ ಸಂಪತ್ತು ತುಂಬಿ ತುಳುಕುವಂತಿರುವುದು. ಆ ವ್ಯಕ್ತಿಯ ಹೃದಯವು ಪ್ರಕಾಶಮಾನವಾಗಿರುವುದು.

ಅದು ಜೇನ್ನೊಣದಂತೆ ಸಂಗ್ರಹಿಸಲು ಇರುವುದಲ್ಲ. ಅದು ಪ್ರೀತಿ ಪ್ರೇಮವನ್ನು ಪರಸ್ಪರ ಹರಡುವುದಾಗಿದೆ. ಅಲ್ಲದಿದ್ದರೆ ಕಟ್ಟೆ ಕಟ್ಟಿ ಶೇಖರಿಸಿದ ನೀರು ಮಲಿನಗೊಂಡಂತೆ ಪ್ರೀತಿಯು ಮಲಿನವಾಗುವುದು. ಅದು ಭಾವನೆಯ ಸೌಂದರ್ಯವನ್ನು ಮಸುಕುಗೊಳಿಸುವುದು.
ಒಂದು ಮಹಾಗ್ರಂಥದ ಬಗ್ಗೆ ಕಲ್ಪಿಸಿಕೊಳ್ಳಿ. ಆ ಗ್ರಂಥದಲ್ಲಿ ಬಹಳಷ್ಟು ಜ್ಞಾನಭಂಢಾರವಿದೆ. ವಿಶ್ವವನ್ನೇ ಬದಲಿಸಬಲ್ಲಂತಹ ಆಶಯಗಳು. ಪ್ರತೀ ಪುಟದಲ್ಲಿಯೂ ಉತ್ತಮೋತ್ತಮ ಬಹಳಷ್ಟು ಉಪದೇಶಗಳಿವೆ. ಆದರೆ ಆ ಗ್ರಂಥವನ್ನು ಗಾಜಿನ ಕಪಾಟಿನಲ್ಲಿ ಭದ್ರವಾಗಿ ಇಡಲಾಗಿದೆ. ಅದನ್ನು ಯಾರೂ ತೆರೆದು ನೋಡುವುದಾಗಲಿ ಅದರ ಚಿಂತನೆಗಳಿಗೆ ಜೀವ ನೀಡುವುದಾಗಲೀ ಯಾರೂ ಮಾಡುತ್ತಿಲ್ಲ. ಆದರೆ ಆ ಗ್ರಂಥದಲ್ಲಿನ ಆಶಯಗಳು ಎಷ್ಟೇ ಪ್ರಭಾವಶಾಲಿಯಾಗಿದ್ದರೂ ಅದರಿಂದ ಯಾರಿಗಾದರೂ ಪ್ರಯೋಜನ ಸಿಗಲು ಸಾಧ್ಯವೇ? ಅದೇ ರೀತಿ ಹೃದಯದಲ್ಲಿ ಒಂದಷ್ಟು ಭಾವನೆಗಳನ್ನು ತುಂಬಿಕೊಂಡರೆ ಸಾಲದು. ಅದನ್ನು ಹರಡಿ ಪಸರಿಸಬೇಕು. ಅದಕ್ಕಾಗಿ ಕಾದು ಹಾತೊರೆ ದವರು ಎಷ್ಟೋ ಮಂದಿ ಇದ್ದಾರೆ. ಅವರಿಗೆ ಅದನ್ನು ಹಂಚಿ ನೋಡಿರಿ. ಆಗ ನಮ್ಮೊಳಗೆ ಹೊಸ ಚೈತನ್ಯವು ಉದ್ಭವವಾಗುವುದು. ಪ್ರೀತಿ ಎಂದರೇನು?

ಅಂತಹದ್ದೊಂದು ವಸ್ತು ಜಗತ್ತಿನಲ್ಲಿ ದೆಯೇ? ಇಲ್ಲ. ಅದು ಅವರು ಮಾಡುತ್ತಿರುವ ಚಟುವಟಿಕೆಗಳಲ್ಲಿ ಅವರ ಮಾತುಗಳಲ್ಲಿ ಅದು ಪ್ರಕಟವಾಗುತ್ತದೆ. ಪುಟ್ಟ ಮಕ್ಕಳು ನೋಡುತ್ತಿರುವಂತೆ ಮಾತಾಪಿತರು ಪರಸ್ಪರ ತುತ್ತು ಅನ್ನವನ್ನು ಬಾಯಿಗೆ ನೀಡುತ್ತಿರಬೇಕು ಎಂದು ಪ್ರವಾದಿ ವರ್ಯರು(ಸ) ಕಲಿಸಿರುವ ಉದ್ದೇಶವಾದರೂ ಏನು? “ಮಕ್ಕಳೇ ನೋಡಿ. ಇದು ಪ್ರೀತಿಯಾಗಿದೆ” ಎಂದು ತೋರಿಸಿಕೊಡಲು ಬೇರೆ ಏನೂ ಇಲ್ಲವಲ್ಲ. ಸ್ನೇಹ ಎಂಬ ಅಮೃತಧಾರೆಯನ್ನು ಮಕ್ಕಳು ತಂದೆ ಮತ್ತು ತಾಯಿಯಿಂದ ನೋಡಿ ಕಲಿಯುತ್ತಾರೆ. ಮಾತಿಗಿಂತಲೂ ಉಚ್ಚ ಸ್ವರದಲ್ಲಿ ಪ್ರೀತಿ ವಾತ್ಸಲ್ಯವೇನೆಂಬುದನ್ನು ಮಕ್ಕಳಿಗೆ ತಂದೆ-ತಾಯಂದಿರು ಕಲಿಸಿಕೊಡಬೇಕು.

“ಯಾರು ಅಲ್ಲಾಹನಿಗಾಗಿ ಪ್ರೀತಿಸಿ, ಅಲ್ಲಾಹನಿ ಗಾಗಿ ಕೋಪಿಸಿ, ಅಲ್ಲಾಹನಿಗಾಗಿ ಸ್ವೀಕರಿಸಿ, ಅಲ್ಲಾಹನಿಗಾಗಿ ತಿರಸ್ಕರಿಸುವರೋ ಅವರ ಈಮಾನ್ ಪರಿಪೂರ್ಣವಾಗಿರುತ್ತದೆ” ಎಂದು ಪ್ರವಾದಿವರ್ಯರು(ಸ) ಹೇಳಿರುತ್ತಾರೆ. ಅಲ್ಲಾಹನಿ ಗಾಗಿ ಪ್ರೀತಿಸುವುದು ಎಂದರೆ ಅದರಲ್ಲಿ ಎರಡು ವಿಚಾರಗಳಿವೆ. ಅಂದರೆ ಓರ್ವರನ್ನು ಪ್ರೀತಿಸುವುದು ದೇವ ಸಂಪ್ರೀತಿ ಬಯಸಿಯಾಗಿರುತ್ತದೆ ಎಂಬುದು ಮೊದಲನೆಯದ್ದು. ಇನ್ನೊಂದು ಓರ್ವನ ಪ್ರೀತಿ ಸ್ನೇಹದಲ್ಲಿ ಅಲ್ಲಾಹನಿಗೆ ಇಷ್ಟವಿಲ್ಲದಂತಹ ಕಾರ್ಯ ಬರದಂತೆ ತಡೆಯುವುದು. ನಮ್ಮ ಎಲ್ಲಾ ಇಷ್ಟ ಗಳು ಅಲ್ಲಾಹನಿಗಾಗಿ ಆಗಿರಬೇಕು.

ಇತರರಿಂದ ಪ್ರೀತಿ ಲಭಿಸಬೇಕೆಂದು ಎಲ್ಲರೂ ಬಯಸುತ್ತಾರೆ. ಹಾಗಂತ ಅದು ಎಲ್ಲರಿಗೂ ಲಭ್ಯವಾಗಬೇಕೆಂದಿಲ್ಲ. ಪರರ ಹೃದಯಕ್ಕೆ ಸದಾ ನೆನಪಿನಲ್ಲಿ ಉಳಿಯುವಂತಹ ಪ್ರೀತಿ ಸ್ನೇಹ ಹರಡಿದವರಿಗೆ ಅವರಿಗರಿವಿಲ್ಲದಂತೆ ಅವರ ಹೃದಯದಲ್ಲಿ ಸ್ನೆಹ ಪ್ರೀತ್ಯಾದರಗಳು ತುಂಬುವುದು. ಜನರ ಸ್ನೆಹ ಪ್ರೀತ್ಯಾದರಗಳು ಪ್ರಾರ್ಥನೆಗಳನ್ನು ಅವಳ ಬದುಕಿಗೆ ಉಜ್ವಲ ಪ್ರಕಾಶ ನೀಡುವುದು. ನಿಸ್ವಾರ್ಥ ಜೀವನ ನಡೆಸಿದವರಿಗೆ ಮಾತ್ರ ಅದು ವರ್ಧಿಸುವುದು. “ನಿಶ್ಚಯವಾಗಿಯೂ ಈ ಸತ್ಯ ವಿಶ್ವಾಸವಿರಿಸಿಕೊಂಡು ಸತ್ಕರ್ಮವೆಸಗುತ್ತಿರುವವರಿ ಗಾಗಿ (ಜನರ) ಹೃದಯಗಳಲ್ಲಿ ರಹ್ಮಾನನು ಸದ್ಯವೇ ಅನುರಾಗವನ್ನುಂಟು ಮಾಡುವನು.”(ಮರ್ಯಮ್: 96)

ಪ್ರೀತಿ ಸ್ನೇಹ ಒಲವಿಗೆ ಇರುವ ಶಕ್ತಿಯು ಅಪಾರವಾದುದು. ಅದನ್ನು ಒಳಗೊಂಡವರಿಗೆ ಮಾತ್ರ ಅದರ ಶಕ್ತಿಯ ಅರಿವಿರುವುದು. ಪ್ರೀತಿ ವಾತ್ಸಲ್ಯದ ಮುಂದೆ ಶರಣಾಗತವಾಗದ ಯಾವುದೇ ಕಠಿಣ ಹೃದಯವಿರದು. ಹೃದಯಂಗಮವಾದ ವರ್ತನೆಯಿಂದ ಆಗುವ ಕ್ರಾಂತಿ ಶಸ್ತ್ರಕ್ಕಿಂತ ಮಿಗಿ ಲಾದುದು. ಬಹಿರಂಗವಾಗಿ ಹೇಳದ ಪ್ರಕಟಿ ಸದ ಪ್ರೀತಿಯು ಗಾಜಿನ ಕಪಾಟಿನಲ್ಲಿರಿಸಿದ ಗ್ರಂಥದಂತೆ. ಅದರಿಂದ ಯಾವುದೇ ಪ್ರಯೋಜನವಿರದು. ಖಲೀಫ ಮಅïಮೂನ್‍ರವರ ಒಂದು ಗಮ ನಾರ್ಹವಾದ ಮಾತಿದೆ. ಅವರು ತಮ್ಮ ಸ್ನೇಹಿತರ ಕುರಿತು ಹೇಳುತ್ತಾರೆ. “ಸ್ನೇಹಿತರಲ್ಲಿ ಮೂರು ವಿಭಾಗವಿದೆ. ಅದರಲ್ಲಿ ಒಂದು ಆಹಾರದಂತೆ. ಅವರಿಗೆ ನಾವು ಯಾವಾಗಲೂ ಅಗತ್ಯವಿರುತ್ತವೆ. ಇನ್ನೊಂದು ಔಷಧದಂತೆ. ಅವರಿಗೆ ಅಸ್ವಸ್ಥತೆ ಉಂಟಾದಾಗ ಮಾತ್ರ ಬಳಸುತ್ತಾರೆ. ಮತ್ತೊಂದು ರೋಗದಂತೆ. ನಮಗೆ ಅಗತ್ಯವಿಲ್ಲದ್ದು. ಅದು ಬರುತ್ತದೆ ಎಂದು ತಿಳಿದಾಗ ಏನಾದರೂ ಮಾಡಿ ಕಳುಹಿಸಿಕೊಡುವಂತಹದ್ದು.

ಮಿತ್ರರೇ ನಮ್ಮೊಡಗಿನ ಗೆಳೆತನವು ಆಹಾರ ದಂತಿರಲಿ. ಬೆಳಿಗ್ಗೆ ಎಷ್ಟೇ ಆಹಾರ ಸೇವಿಸಿದರೂ ಅದು ಮಧ್ಯಾಹ್ನದ ವೇಳೆ ಬೇಕಾಗುವುದು. ಎಷ್ಟೇ ನೋಡಿದರೂ ಎಷ್ಟೇ ಹಂಚಿದರೂ, ಎಷ್ಟೇ ಸವಿದರೂ ಮುಗಿಯದ ಆತ್ಮಬಂಧನವಾಗಿ ಅರಳಿ ಮನೋಹರವಾಗಿರಲಿ. ಆಹಾರವು ನಮ್ಮ ದೇಹಕ್ಕೆ ಪೋಷಕಾಂಶಗಳನ್ನು ನೀಡುವಂತೆ ನಮ್ಮ ಸ್ನೇಹವೂ ಪೋಷಕಾಂಶಗಳನ್ನು ನೀಡ ಬೇಕು. ಅದನ್ನು ಸಾಕಷ್ಟು ಅರಗಿಸಿಕೊಳ್ಳುತ್ತಾ ಅದಕ್ಕಿಂತಲೂ ಹೆಚ್ಚಾಗಿ ಹಂಚುತ್ತಾ ಇರಬೇಕು. ಸ್ನೇಹ ಎಂದರೆ ಕೆಲವು ನೆನಪು ಮಾತ್ರವಾಗಿರ ಬಹುದು. ಕೆಲವೊಮ್ಮೆ ಸಣ್ಣ ಒಂದು ಮಾತು ಮೃದುಲವಾದ ಚುಂಬನ ಮತ್ತು ಅತ್ಯಪೂರ್ವ ವಾದ ಹಸ್ತಾಂತರ ಆಗಿರಬಹುದು. ಪ್ರೀತಿಗೆ ಬಹ ಳಷ್ಟು ಮಹತ್ವವಿದೆ. ಅನೇಕ ರೀತಿಯ ಚಿತ್ರಣಗಳಿವೆ. ಅದನ್ನೆಲ್ಲವನ್ನೂ ಬಿಡಿಸಿರುವುದು ಒಂದೇ ಬಣ್ಣ ದಲ್ಲಾಗಿದೆ. ಅದು ಅಲ್ಲಿಯೇ ನಿಲ್ಲುವಂತಹದ್ದಲ್ಲ. ಹರಿಯುತ್ತಿರುವಂತಹದ್ದಾಗಿರಬೆಕು.

ಓದುಗರೇ, sanmarga ಫೇಸ್ ಬುಕ್ ಪೇಜ್ ಅನ್ನು ಲೈಕ್ ಮಾಡುವ ಮೂಲಕ ನಮ್ಮನ್ನು ಬೆಂಬಲಿಸಿ.