ಪ್ರಧಾನಿಯ ಏಕ ದೇಶ, ಏಕ ಚುನಾವಣೆಯ ಹಿಂದಿರುವ ಗುರಿಗಳು

0
1368

ಅರಫಾ ಮಂಚಿ

ಪ್ರತಿಪಕ್ಷಗಳು ಎಷ್ಟೇ ವಿರೋಧಿಸಿದರೂ ಒಂದು ದೇಶ, ಒಂದು ಚುನಾವಣೆ ಎಂಬ ನಿಲುವನ್ನು ಪ್ರಧಾನಿ ಮೋದಿಯವರು ಅಷ್ಟು ಸುಲಭದಲ್ಲಿ ಬಿಟ್ಟುಕೊಡುತ್ತಾರೆ ಎಂದನಿಸುವುದಿಲ್ಲ. ಪಾರ್ಲಿಮೆಂಟಿನಲ್ಲಿ ಮತ್ತೆ ಮತ್ತೆ ತ್ರಿವಳಿ ತಲಾಕ್ ಮಂಡ ನೆಯಾಗುತ್ತಿರುವುದನ್ನು ನಾವು ಕಾಣುತ್ತಿ ದ್ದೇವೆ. ಅಂದರೆ ಮೋದಿ ಕೈಹಾಕಿದ ಕೆಲಸವನ್ನು ಯಾವ ಬೆಲೆ ತೆತ್ತಾದರೂ ಮಾಡಿ ಮುಗಿಸುವ ಛಾತಿ ಹೊಂದಿದವರು ಅಂತಾಯಿತು. ಹಾಗೆ ನೋಡಿದರೆ, ಮುತ್ತಲಾಕಿನಂತೆ ಒಂದು ದೇಶ, ಒಂದು ಚು ನಾವಣೆಯಲ್ಲಿ ಕೂಡ ಆರೆಸ್ಸೆಸ್ ಪ್ರೇರಿತ ಹಿಂದುತ್ವ ಅಜೆಂಡಾವೇ ಇದೆ ಅನ್ನಬಹುದು.

ಈಗ ಪ್ರತಿಪಕ್ಷಗಳು ಒಂದು ದೇಶ, ಒಂದು ಚುನಾ ವಣೆ ಪ್ಲಾನನ್ನು ವಿರೋಧಿಸಿ ಅದಕ್ಕೆ ವ್ಯಾಪಕ ಪ್ರಚಾರ ಕೊಟ್ಟಿದ್ದಾಯಿತು! ಜೊತೆಗೆ ಸಂಸತ್ತಿನಲ್ಲಿ ತ್ರಿವಳಿ ತಲಾಕನ್ನು ಗಟ್ಟಿಯಾಗಿ ವಿರೋಧಿಸಿ ಗದ್ದಲ ಮಾಡಿದ್ದೂ ನಡೆದುಹೊಯಿತು. ಆದರೆ ಇವುಗಳು ಯಾವ ಗದ್ದಲ ಎಬ್ಬಿಸಿದರೂ ತ್ರಿವಳಿ ತಲಾಕ್ ಅನ್ನು ಪಾರ್ಲಿಮೆಂಟಿನಲ್ಲಿ ಪಾಸಾಗದಂತೆ ತಡೆಯುವ ಶಕ್ತಿ ಇವಕ್ಕಿವೆಯಾ? ಆದ್ದರಿಂದ ಒಂದು ದೇಶ, ಒಂದು ಚುನಾವಣೆ ಸಂಕಲ್ಪವನ್ನು ಎದುರಿಸಿ ನಿಲ್ಲುವ ಶಕ್ತಿಯೂ ಅವುಗಳಿಲ್ಲ ಎನ್ನಬಹುದು. ಇವಿಎಂ ಬಹುದೊಡ್ಡ ಹಗರಣ. ಆದರೆ, ಪ್ರತಿಪಕ್ಷಗಳು ಎಲ್ಲಿ ಹೋಗಿವೆ? ಸಾಮಾಜಿಕ ಮಾಧ್ಯಮಗಳು ಇವಿಎಂ ಬಗ್ಗೆ ಬೊಬ್ಬಿರಿಯು ತ್ತಿದ್ದರೂ ಪ್ರತಿಪಕ್ಷಗಳಾಗಲಿ, ಇಲ್ಲಿನ ಮುಖ್ಯ ಮಾಧ್ಯಮಗಳಾಗಲಿ ಏನೂ ಮಾಡುತ್ತಿಲ್ಲ. ಇವರ ನಡುವೆ ಪ್ರಜಾಪ್ರಭುತ್ವ ಮೌಲ್ಯರಹಿತ ವಾಗುತ್ತಿದೆ. ಮೋದಿ ಶಾ ಕೂಟ ತಾವಂದು ಕೊಂಡದ್ದನ್ನು ಎಂತಹ ಬೆಲೆತೆತ್ತಾದರೂ ಮಾಡಿ ಮುಗಿಸುವ ಛಾತಿ ಹೊಂದಿದೆ. ಮೋದಿ ಪ್ಲಾನ್ ಅಷ್ಟು ಸೂತ್ರಬದ್ಧವಾದುದು. ಹೀಗಿರುವಾಗ ಪ್ರಜಾಪ್ರಭುತ್ವ, ಮೌಲ್ಯಗಳ ಮಾತೇನು ಬಂತು?

ಅಲ್ಲ, ತಮಿಳ್ನಾಡು ಕುಡಿಯುವ ನೀರಿಲ್ಲದೆ ತತ್ತ ರಿಸುತ್ತಿದೆ. ಮುಖ್ಯವಾಗಿ ಚೆನ್ನೈಯಲ್ಲಿ ಕುಡಿಯುವ ನೀರು ಅಲಭ್ಯವಾಗಿ ಜನರು ನಗರದಿಂದ ವಲಸೆ ಹೋಗುತ್ತಿದ್ದಾರೆ. ಅಲ್ಲಿ ಪಬ್ಲಿಕ್ ಟ್ಯಾಪ್‍ನಲ್ಲಿ ನೀರು ಬಂದರೂ ಎರಡು ವಾರಕ್ಕೊಮ್ಮೆ ಬರುತ್ತಿದೆ. ನೀರನ್ನು ಪ್ಲಾಸ್ಟಿಕ್ ಕೊಡಗಳಲ್ಲಿ ಸಂಗ್ರಹಿಸಲು ಮಹಿಳೆಯರು ಪಡುವ ಪಾಡು ಹೇಳತೀರದು. ಟ್ಯಾಂಕರ್ ನೀರು ದುಬಾರಿ, ಈಗ ಅದು ಕೂಡ ಸಿಗದ ಪರಿಸ್ಥಿತಿಯಿದೆ. ಚೆನ್ನೈಯಲ್ಲಿ ಮಾತ್ರವಲ್ಲ ತಮಿಳ್ನಾಡಿನ ಗ್ರಾಮಗಳಲ್ಲೂ ಕುಡಿಯುವ ನೀರು ಇಲ್ಲ. ತಮಿಳ್ನಾಡು ಸರಕಾರ ಸಾವಿರ ಕೋಟಿ ಪ್ಯಾಕೇಜ್‍ನ ಬೇಡಿಕೆಯನ್ನು ಕೇಂದ್ರ ಸರಕಾರದ ಮುಂದಿಟ್ಟಿದೆ. ದೇಶದಲ್ಲಿ ಬಹಳ ಕಡೆ ಬರ, ಕುಡಿಯುವ ನೀರಿನ ಕೊರತೆಯ ಪರಿಸ್ಥಿತಿ ಗಂಭೀರವಾಗಿ ಇದೆ.
ಇವೆಲ್ಲ ಈ ದೇಶಕ್ಕೆ ಇವೆಲ್ಲ ಮುಖ್ಯ ವಿಷಯವಾಗಿತ್ತು. ರಾಜಕಾರಣಿಗಳು ಇಂತಹದ್ದನ್ನೆಲ್ಲ ಮುಖ್ಯವಾದದ್ದೆಂದು ಅಂದುಕೊಂಡಿದ್ದಾರೆಯೇ? ಇಲ್ಲ. ಈಗ ನೀತಿ ಅಯೋಗದ ವರದಿ ನೋಡಿ. ನೀರು ಇದ್ದರೂ ಶುದ್ಧ ನೀರು ಇಲ್ಲ. 60 ಕೋಟಿ ಜನರು ಗಂಭೀರ ನೀರಿನ ಸಂಕಟದಲ್ಲಿದ್ದಾರೆ. ಇದು ಈ ದೇಶದ ಮುಂದಿರುವ ಬಹುದೊಡ್ಡ ಸಂಕಟ ಅಲ್ಲವೇ? ದೇಶದಲ್ಲಿ ಪ್ರತಿದಿನ ಶುದ್ಧ ನೀರಿಲ್ಲದೆ 547 ಮಂದಿ ಸಾಯುತ್ತಿದ್ದಾರೆ ಎನ್ನುತ್ತಿವೆ ವರದಿಗಳು. ಬಿಹಾರದಲ್ಲಿ ಮೆದುಳು ಜ್ವರ ಹದಿ ಮೂರು ಜಿಲ್ಲೆಗೆ ವ್ಯಾಪಿಸಿದೆ ಎಂಬುದು ಸುದ್ದಿಯಾಯಿತು. ನೂರ ಮೂವತ್ತು ಮಂದಿ ಈ ರೋಗಕ್ಕೆ ಬಲಿಯಾಗಿದ್ದಾರೆ. ಆದರೆ ನಮ್ಮ ಪಾರ್ಲಿಮೆಂಟು ಏನು ಮಾಡಿತು? ಆತುರಾತುರವಾಗಿ ತ್ರಿವಳಿ ತಲಾಕ್ ಕಾಶ್ಮೀರದ ವಿಶೇಷಾಧಿಕಾರ ರದ್ದು ಕುರಿತ ಮಸೂದೆ ಮಂಡಿಸಿತು. ದೇಶದ ನೀರಿನ ಸಮಸ್ಯೆ, ಬರ ಪರಿ ಹಾರಕ್ಕಿಂತ ಇವೆಲ್ಲ ಮಿಗಿಲಾದ ವಿಷಯ ಗಳೇ? ಹೀಗೆ, ಜನರ ಅಸ್ತಿತ್ವಕ್ಕೆ ಸವಾ ಲಾದ ವಿಷಯಗಳು ಕಡೆಗಣಿಸಲ್ಪಟ್ಟು ಹಿಂದುತ್ವ ಅಜೆಂಡಾಕ್ಕೆ ಸಂಬಂಧಿಸಿದ್ದು ಮೇಲೆದ್ದು ಬರುತ್ತಿವೆ.

ನಮ್ಮ ರಾಜಕಾರಣಿಗಳ ಉದಾ ಹರಣೆ ನೋಡಿ. ಹದಿನೇಳನೆ ಪಾರ್ಲಿ ಮೆಂಟ್ ಆರಂಭದ ದಿವಸ ಅಸದುದ್ದೀನ್ ಉವೈಸಿ ಹೊಸ ಸಂಸತ್ ಭವನದ ಬೇಡಿಕೆಯಿರಿಸಿದರು. ಪ್ರಧಾನಿ ಪರಿಶೀಲಿಸುವ ಭರವಸೆಯನ್ನೂ ನೀಡಿ ದ್ದಾರೆ. ಈಗಿರುವ ಪಾ ರ್ಲಿಮೆಂಟು ಕಟ್ಟಡ ಗಟ್ಟಿಮುಟ್ಟಾಗಿ ಇರುವಾಗ ಇವೆ ಲ್ಲವೂ ನಡೆಯುತ್ತಿದೆ. ಹೊರಗೆ ತೋರಿಸಿ ಕೊಂಡಷ್ಟು ಜನರ ವಿಷಯಗಳಲ್ಲಿ ರಾಜಕಾರಣಿಗಳು ಗಂಭೀರ ಅಲ್ಲ. ಹಾಗಂತ, ಇಂತಹ ವಿಷಯಗಳು ದೇಶದ ಮುಖ್ಯ ಸಮಸ್ಯೆಗಳಿಂದ ಗಮನ ವನ್ನು ಬೇರೆಡೆಗೆ ಸರಿಸಲು ಸಮರ್ಥ ವಾಗುತ್ತವೆ. ಆದ್ದರಿಂದ ಇವು ಮೋದಿ ಅಜೆಂಡಾಕ್ಕೆ ಸಂಬಂಧಿಸಿದ್ದಾಗುತ್ತದೆ. ಪಶ್ಚಿಮ ದಿಲ್ಲಿಯ ಸಂಸದ ಪ್ರವೇಶ್ ಸಾಹಿಬ್ ಸಿಂಗ್ ದಿಲ್ಲಿಯಲ್ಲಿ ಮಸೀದಿ ಗಳು ಹೆಚ್ಚುತ್ತಿವೆ ಎಂದು ದಿಲ್ಲಿಯ ಉಪ ರಾಜ್ಯಪಾಲರಿಗೆ ಪತ್ರ ಬರೆದು ತಡೆಯಲು ಹೇಳಿದರು. ಸಂಸದರ ಬೇಡಿಕೆಯನ್ನು ಉಪ ರಾಜ್ಯಪಾಲರು ಪರಿಶೀಲಿಸಬಹುದು. ಹೌದು, ಮೋದಿ ಸರಕಾರ ನೀಡುವ ಪರಿಶೀಲನೆ, ಭರವಸೆಗಳೆಲ್ಲವೂ ಮೋದಿ ಪ್ಲಾನ್‍ಗೆ ಪೂರಕವಾಗಿದ್ದರೆ ಈಡೇರುತ್ತವೆ. ಆದರೆ ಜನರನ್ನು ಕಾಡುತ್ತಿರುವ ಸಮಸ್ಯೆಗಳಾ ದರೋ? ಕಳೆದ ಮೂರು ವರ್ಷಗಳಲ್ಲಿ ಮಹಾರಾಷ್ಟ್ರವೊಂದರಲ್ಲಿ 12,000 ರೈತರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ಅಸೆಂಬ್ಲಿಯಲ್ಲಿ ಸಚಿವರು ಲೆಕ್ಕ ಮಂಡಿಸಿದ್ದಾರೆ. ದೇಶ ಎಷ್ಟು ಗಂಭೀರ ಸಮಸ್ಯೆಗಳಿಂದ ತೊಳಲಾಡುತ್ತಿದೆ ಎನ್ನುವುದಕ್ಕೆ ನಮಗೆ ಇನ್ನೆಷ್ಟು ಉದಾಹರಣೆಗಳು ಬೇಕು? ಇಂತಹ ಪರಿಸ್ಥಿತಿಯಲ್ಲಿಯೂ ಪ್ರಧಾನಿಗೆ ಒಂದು ದೇಶ ಒಂದು ಚುನಾವಣೆ ಬಹಳ ಮುಖ್ಯವಾಯಿತು ಅಂತಾದರೆ ಏನು ಹೇಳೋಣ. ನಮ್ಮನ್ನು ನಾವೇ ಹಳಿದು ಕೊಳ್ಳಬೇಕು. ಯಾಕೆಂದರೆ ಇಂತಹ ವರನ್ನೆಲ್ಲ ನಾವೇ ಪಾರ್ಲಿಮೆಂಟಿಗೆ ಕಳುಹಿಸಿಕೊಟ್ಟಿದ್ದು.

ಸಾರ್ವಜನಿಕರ ಸುರಕ್ಷೆಗಿಂತ ತಮ್ಮ ರಾಜಕೀಯ ಅಸ್ತಿತ್ವ ಇವರಿಗೆಲ್ಲ ಮುಖ್ಯವಾಗಿದೆ. ಇನ್ನು ಮೋದಿಯವರ ಒಂದು ದೇಶ ಒಂದು ಚುನಾವಣೆಯ ವಿಷಯವನ್ನೇ ಎತ್ತಿಕೊಳ್ಳೋಣ. ದೇಶದ ಫೆಡರಲ್ ವ್ಯವಸ್ಥೆಯಲ್ಲಿ ಇದು ಪ್ರಸ್ತುತವೇ? ದೇಶ ಈ ಪ್ರಯೋಗಕ್ಕೆ ಈಗ ಸಜ್ಜಾಗಿಲ್ಲ ಎಂದು ಚುನಾವಣಾ ಆಯೋಗದ ಮೂಲಗಳು ಹೇಳುತ್ತಿವೆ. ಇವಿಎಂ ವಿವಾದ ಕಾವೇರುವ ವೇಳೆ ಇಂತಹದ್ದೊಂದು ಸಂಕಲ್ಪ ಮೋದಿ ಯವರಲ್ಲಿ ಯಾಕೆ ಹುಟ್ಟಿಕೊಂಡಿತು? ಹೌದು, ಇವಿಎಂ ಕಾವೇರದಂತೆ ತಡೆ ಯುವ ಶಕ್ತಿ ಒಂದು ದೇಶ ಒಂದು ಚುನಾವಣೆಗೆ ಇದೆ. ಕ್ರಮೇಣ ಇವಿಎಂ ತಣ್ಣಗಾಗಿ ಮೋದಿಯ ಈ ವಿವಾದ ಕಾವನ್ನು ಪಡೆದುಕೊಳ್ಳಬಹುದು. ಹಾಗಿದ್ದರೆ ಇದು ಸುಸೂತ್ರವಾದ ಪ್ಲಾನ್. ಅಜೆಂಡಾಕ್ಕೆ ತಕ್ಕಂತೆ ಇದನ್ನು ಸಮಾಜದ ಮುಂದೆ ಎರಚಲಾಯಿತು. ನೀವೂ ಗಮನಿಸಿರಬಹುದು. ತೆಲುಗು ದೇಶಂನ ರಾಜ್ಯಸಭಾ ಸದಸ್ಯರು ಬಿಜೆಪಿಗೆ ಹೋಗಿ ದ್ದನ್ನು ಅಥವಾ ಖರೀದಿಸಲ್ಪಟ್ಟದ್ದನ್ನು. ರಾಜ್ಯಸಭೆಯಲ್ಲಿ ಬಹುಮತ ಇದ್ದರೆ ಮಾತ್ರ ಮೋದಿ ಪ್ಲಾನ್ ಅರ್ಥಾತ್ ಅವರ ಮಸೂದೆಗಳು ಜಾರಿಗೊಳ್ಳುತ್ತವೆ. ಅವೇ ತ್ರಿವಳಿ ತಲಾಕ್, ಕಾಶ್ಮೀರ, ಏಕರೂಪ ಕಾನೂನು ಸಂಹಿತೆಯಂತಹ ಬಿಜೆಪಿಯ ಮಹತ್ವಾಕಾಂಕ್ಷೆಯ ಮಸೂದೆ ಗಳು ರಾಜ್ಯಸಭೆಯಲ್ಲಿ ಬಹುಮತವಿದ್ದಾಗ ಪಾಸು ಆಗುವುದು. ಬಿಜೆಪಿಗೆ ಬಹುಮತದ ಅಗತ್ಯವಿದ್ದು. ಮುಂದಕ್ಕೆ ಟಿಎಂಸಿ, ಕಾಂಗ್ರೆಸ್‍ಗಳ ರಾಜ್ಯಸಭಾ ಸದಸ್ಯರಲ್ಲಿ ಅರ್ಧಾಂಶ ಬಿಜೆಪಿಗೆ ಬಂದರೆ ಎಲ್ಲವೂ ಸುಗಮವಾಗುತ್ತದೆ. ಹೌದು ಸುಸೂತ್ರವಾಗಿ ಮತ್ತು ಸುಸಜ್ಜಿತ ವಾಗಿ ಪ್ಲಾನ್ ಮಾಡುವ ಮೋದಿ ಶಾ ಕೂಟ ತಮ್ಮ ಪಟ್ಟನ್ನು, ತಮ್ಮ ಮಹತ್ವಾ ಕಾಂಕ್ಷೆಗಳನ್ನು ಅಷ್ಟು ಸುಲಭವಾಗಿ ಬಿಟ್ಟುಕೊಡುವವರಲ್ಲ. ಇನ್ನು ಇವಿಎಂ ಕೂಡ ಅವರ ಪರ ಇದ್ದರೆ ಜನರೂ ಏನು ಮಾಡುವಂತಿಲ್ಲ. ಒಂದು ದೇಶ ಒಂದು ಚುನಾವಣೆಯಲ್ಲಿ ಕೂಡ ಇದೇ ತಂತ್ರದ್ದು. ಒಮ್ಮೆಗೆ ವಿಧಾನಸಭೆ, ಲೋಕಸಭೆಗೆ ಚುನಾವಣೆ ನಡೆದು ಇವಿಎಂ ಸಹಕರಿಸಿದರೆ ಒಂದೇ ಪಕ್ಷದ ಮಂದಿಯನ್ನು ಅಜೆಂಡಾಕ್ಕೆ ಅಗತ್ಯ ವಿರುವಷ್ಟು ಗೆಲ್ಲಿಸಬಹುದು. ಒಂದು ವೇಳೆ ಹೀಗೆಯೇ ನಡೆಯಿತೆಂದಾದರೆ ಒಂದು ದೇಶ ಒಂದೇ ಚುನಾವಣೆ ಎಷ್ಟು ಅರ್ಥಗರ್ಭಿತ ಮತ್ತು ಬಲಿಷ್ಠ. ಇನ್ನು ಮಾಜಿ ಮುಖ್ಯ ಚುನಾವಣಾ ಆಯುಕ್ತ ಟಿಎಸ್ ಕೃಷ್ಣಮೂರ್ತಿ ಹೇಳುವ ಪ್ರಕಾರ, ಸಂವಿಧಾನ ತಿದ್ದುಪಡಿ ಮಾಡದೆ ಒಂದು ದೇಶ ಒಂದು ಚುನಾವಣೆ ಪ್ಲಾನ್ ಜಾರಿಗೆ ತರುವುದು ಸಾಧ್ಯವಿಲ್ಲ. ಆದ್ದರಿಂದ ಸಂವಿಧಾನ ತಿದ್ದುಪಡಿಗೆ ಸದ್ಯ ಪ್ರತಿ ಪಕ್ಷಗಳು ಸಹಕರಿಸುವುದು ಮುಖ್ಯವಾಗು ತ್ತದೆ. ಅದಕ್ಕಾಗಿಯೇ ದಿಲ್ಲಿಯಲ್ಲಿ ಮೋದಿ ಪ್ರತಿಪಕ್ಷಗಳ ಪದಾಧಿಕಾರಿಗಳ ಸಭೆ ಕರೆದದ್ದು. ಇದನ್ನು ಬೆಲೆಯೇರಿಕೆ, ನಿರುದ್ಯೋಗ, ದೇಶದಲ್ಲಿ ಹೆಚ್ಚುತ್ತಿರುವ ಹಿಂಸೆ, ಅತ್ಯಾಚಾರ ಇತ್ಯಾದಿ ಗಂಭೀರ ವಿಷಯಗಳಿಂದ ದೇಶದ ಗಮನವನ್ನು ಬೇರೆಡೆಗೆ ಹರಿಸುವ (ಕು)ತಂತ್ರ ಎಂದು ಬಿಎಸ್ಪಿ ನಾಯಕಿ ಮಾಯಾವತಿ ಹೇಳಿ ದ್ದಾರೆ. ಆದರೆ ಇಷ್ಟು ಚಿಕ್ಕ ಉದ್ದೇಶಕ್ಕೆ ಮೋದಿ ಈಗಾಗಲೇ ಅಗತ್ಯವಿರುವು ದನ್ನು ಮಾಡಿ ಇಟ್ಟಿದ್ದಾರೆ. ಆದರೆ, ಕಮ್ಯೂನಿಸ್ಟ್ ಪಕ್ಷದ ಪ್ರಧಾನ ಕಾರ್ಯ ದರ್ಶಿ ಎಸ್. ಸುಧಾಕರ್ ರೆಡ್ಡಿ ಒಂದು ದೇಶ ಒಂದು ಚುನಾವಣೆ ಫ್ಯಾಶಿಸ್ಟ್ ಐಡಿಯ ಎಂದು ಕರೆದಿದ್ದಾರೆ. ಹೌದು, ಮೋದಿ ಮಾಯಾವತಿ ಹೇಳು ವುದಕ್ಕಿಂತ ದೊಡ್ಡ ಅಜೆಂಡಾದೊಂದಿಗೆ ಪ್ರಧಾನಿಯಾಗಿದ್ದಾರೆ ಎಂಬುದು ಎಲ್ಲ ರಿಗೂ ಗೊತ್ತು. ದೇಶದ ಮೂಲಭೂತ ಸಮಸ್ಯೆಗಳನ್ನು ಸಂಸತ್ತಿನಲ್ಲಿ ಮತ್ತು ಹೊರಗೂ ಎತ್ತಲಾಗದಷ್ಟು ಸರಕುಗಳನ್ನು ಮೋದಿ ಪರಿವಾರ ಕೊಟ್ಟಾಗಿದೆ. ಈಗ ಒಮ್ಮೆಗೆ ಪಾರ್ಲಿಮೆಂಟು, ವಿಧಾನ ಸಭೆಗಳಿಗೆ ಚುನಾವಣೆ ಎಂಬ ಸಂಕಲ್ಪದ ಹಿಂದೆ ನಮ್ಮ ದೇಶದ ಸಂವಿಧಾನ ಮತ್ತು ಪ್ರಜಾಪ್ರಭುತ್ವವನ್ನೇ ಬದಲಾಯಿ ಸುವಷ್ಟು ನಿಗೂಢ ಜಾಲವಿದೆ. ಅಂದರೆ ಸಂವಿಧಾನ ರಚನಾಕಾರರ ಪರಿಕಲ್ಪನೆ
ಯನ್ನು ಮೀರಿದ್ದು. ಯಾಕೆಂದರೆ ಅಂಬೇಡ್ಕರ್ ನೇತೃತ್ವದ ಸಂವಿಧಾನ ರಚನಾ ಮಂಡಳಿ ಭಾರತಕ್ಕೆ ಅಮೆರಿಕ ರೀತಿಯ ಚುನಾವಣೆ ಒಪ್ಪುವುದಿಲ್ಲ ಮತ್ತು ಬ್ರಿಟನ್ ರೀತಿಯ ಚುನಾವಣಾ ರೀತಿ ಯನ್ನು ಮುಂದಿಟ್ಟರು.

ಕೊನೆಯ ಮಾತು, ಕುಡಿಯುವ ನೀರು, ಜನರ ಸುರಕ್ಷೆ, ಸೌಲಭ್ಯ ಮುಂತಾದ ಮೂಲಭೂತ ಆವಶ್ಯಕತೆ ಗಳೆಲ್ಲ ಮುಖ್ಯ ಅಲ್ಲ ಅನ್ನುವಂತಾದದ್ದು ಯಾಕೆ? ಇವಿಎಂ ಮೋಸ ಸಾಬೀತಾ ಗದಿದ್ದರೆ ಐದು ವರ್ಷ ಜೈಲಿಗೆ ಹೋಗಬೇಕೆಂದು ಚುನಾವಣಾ ಆಯೋಗ ಹೆದರಿಸುವುದು ಯಾಕೆ? ಇದು ಯಾವ ಪ್ರಜಾಪ್ರಭುತ್ವ? ಅಯ್ಯೋ, ಇವನ್ನೆಲ್ಲ ವಿರೋಧಿಸಿ ಧ್ವನಿಯೆತ್ತಬೇಕಾದವರು ತ್ರಿವಳಿ ತಲಾಕ್, ರಾಮಮಂದಿರ, ಸಂಸತ್ ಕಟ್ಟಡದ ಕುರಿತೇ ಮಾತಾಡು ವಂತಾದ ಮ್ಯಾಜಿಕ್ ಯಾವುದು? ಅಲ್ಲ, ಹಿಂದುತ್ವ ರಾಷ್ಟ್ರ ವಾದ ಎಷ್ಟು ಬಲಿಷ್ಠ! ಜನಪ್ರತಿನಿಧಿಗಳು, ಪ್ರಜಾಪ್ರಭುತ್ವ ವಾದಿಗಳು ಇಂದಿನ ಟಿವಿ ಮಾಧ್ಯಮಗಳಂತೆ ಅಗತ್ಯವಿಲ್ಲದ್ದನ್ನು ಹೇಳುವಂತೆ ಮಾಡುವುದಾದರೆ ಇಂತಹ ಅಜೆಂಡಾ ರೂಪಿಸುವವರು ಅಪಾರ ಬಲಿಷ್ಠರು ಎಂದು ಒಪ್ಪಿಕೊಳ್ಳಬೇಕಾಗು ತ್ತದೆ. ಆದ್ದರಿಂದ ಒಂದು ದೇಶ ಒಂದು ಚುನಾವಣೆ ಈ ರೀತಿ ಪರಿಗಣಿಸಬಹುದಾಗಿದೆ.