ಹಿಂದಿ, ಹಿಂದು, ಹಿಂದುಸ್ತಾನ್ ಸ್ಥಾಪನೆಗೆ ಬಿಜೆಪಿ ಶ್ರಮಿಸುತ್ತಿದೆ. ನಾವು ಈ ಪರೀಕ್ಷಾ ಕಾಲದಲ್ಲಿದ್ದೇವೆ- ಅರುಂಧತಿ ರಾಯ್

0
627

ಸನ್ಮಾರ್ಗ ವಾರ್ತೆ

ಹೊಸದಿಲ್ಲಿ,ಅ. 16: ಹಿಂದಿ, ಹಿಂದು, ಹಿಂದುಸ್ತಾನ್ ಸ್ಥಾಪನೆಗೆ ಬಿಜೆಪಿ ಶ್ರಮಿಸುತ್ತಿದೆ. ನಾವು ಈ ಪರೀಕ್ಷಾ ಕಾಲದಲ್ಲಿದ್ದೇವೆ ಎಂದು ಸಾಹಿತಿ ಸಾಮಾಜಿಕ ಕಾರ್ಯಕರ್ತೆ ಅರುಂಧತಿ ರಾಯ್ ಹೇಳಿದರು.

ಫ್ಯಾಶಿಸಂಗೆ ಯಶಸ್ಸು ಸಾಧ್ಯವಿಲ್ಲ. ಆದರೆ ಇಂದು ಅವರು ನ್ಯಾಯಾಂಗ, ತನಿಖಾಂಗ, ಮಾಧ್ಯಮಗಳನ್ನು ಧ್ವಂಸ ಮಾಡಿದ್ದಾರೆ. ಅಸ್ತಿತ್ವಕ್ಕೆ ಸ್ವಯಂ ಹೋರಾಡಬೇಕಾಗುತ್ತದೆ ಎಂದು ಅವರು ಹೇಳಿದರು. ನಜೀಬ್ ನಾಪತ್ತೆಯ ಮೂರನೆ ವರ್ಷದಲ್ಲಿ “ನಜೀಬ್ ಎಲ್ಲಿ” ಎಂಬ ಘೋಷದೊಂದಿಗೆ ದಿಲ್ಲಿಯ ಜಂತರ್‍ಮಂತರ್‍ನಲ್ಲಿ ಯುನೈಟೆಡೆ ಅಗೇನ್ಸ್ಟ್ ಹೇಟ್ ಸಂಘಟನೆಯ ಪ್ರತಿಭಟನಾ ಸಂಗಮದಲ್ಲಿ ಅವರು ಮಾತಾಡುತ್ತಿದ್ದರು.

ರಾಷ್ಟ್ರೀಯ ಪೌರತ್ವ ಪಟ್ಟಿಯ ಹೆಸರಿನಲ್ಲಿ ಇತಿಹಾಸದಲ್ಲೇ ಅತಿದೊಡ್ಡ ವಿಭಜನೆಗೆ ಶ್ರಮ ನಡೆಯುತ್ತಿದೆ. ದೇಶದ ಜಿಡಿಪಿ ಹಠಾತ್ ಕುಸಿದಿದೆ. ಇದೇ ವೇಳೆ ಬಿಜೆಪಿಯ ಜಿಡಿಪಿ ಒಂದು ಸಣ್ಣ ದೇಶದಷ್ಟಿದೆ. ಅವರಿಗೆ ಎಲ್ಲವನ್ನೂ ಖರೀದಿಸಲು ಸಾಧ್ಯವಾಗುತ್ತಿದೆ.

ದೇಶದಲ್ಲಿ ಗುಂಪು ಹತ್ಯೆ, ಕೊಲೆಗಳು ಗಂಭೀರ ರೋಗ ಲಕ್ಷಣಗಳಾಗಿವೆ. ಮಾಧ್ಯಮಗಳನ್ನು ಖರೀದಿಸಿ ದ್ವೇಷ ಪ್ರಚಾರಕ್ಕೆ ಉಪಯೋಗಿಸಲಾಗುತ್ತಿದೆ. ಭಾಷಣದಲ್ಲಿ ವಿದ್ವೇಷ, ವಿಭಜನಾ ವಾದನ್ನು ಪ್ರಚಾರಿಸಲಾಗುತ್ತಿದೆ. ಇವರ ವಿರುದ್ಧ ಕ್ರಮ ಜರಗಿಸಲು ಕೇಂದ್ರ ಸರಕಾರ ತಯಾರಾಗಬೇಕು ಎಂದು ಗೌರಿ ಲಂಕೇಶ್ ಸಹೋದರಿ ಕವಿತಾ ಲಂಕೇಶ್ ಹೇಳಿದರು.

ನನ್ನ ಮಗನನ್ನು ಪತ್ತೆಹಚ್ಚಬೇಕೆಂದು ನಾನು ಕಳೆದ ಮೂರು ವರ್ಷಗಳಿಂದ ಆಗ್ರಹಿಸುತ್ತಿದ್ದೇನೆ ಎಂದು ನಜೀಬ್ ತಾಯಿ ಫಾತಿಮಾ ನಫೀಸ್ ಹೇಳಿದರು.

ಜೈಶ್ರೀರಾಂ ಕೂಗಲು ಹೇಳಿ ಝಾರ್ಕಂಡಿನಲ್ಲಿ ಗುಂಪು ಹತ್ಯೆ ಮಾಡಿದ ತಬ್ರೀಸ್ ಅನ್ಸಾರಿಯ ಪತ್ನಿ ಶಾಹಿಸ್ತ ಪರ್ವೀನ್, ಬಿಎಸ್ಪಿ ಸಂಸದ ಡ್ಯಾನಿಶ್ ಅಲಿ, ಪ್ರಶಾಂತ್ ಭೂಷಣ್, ದಿಲ್ಲಿ ವಿಶ್ವವಿದ್ಯಾನಿಲಯದ ಪ್ರೊಫೆಸರ್‍ಗಳಾದ ಅಪೂರ್ವಾನಂದ, ನಂದಿತಾ ನರೇನ್, ಜೆಎನ್‍ಯು ವಿದ್ಯಾರ್ಥಿ ಯೂನಿಯನ್ ಅಧ್ಯಕ್ಷೆ ಐಶಾ ಘೋಷ್, ಯುನೈಟೆಡ್ ಅಗೈನ್ಸ್ಟ್ ಹೇಟ್ ಪದಾಧಿಕಾರಿಗಳಾದ ಉಮರ್ ಖಾಲಿದ್, ನದೀಂ ಖಾನ್ ಮುಂತಾದವರು ಮಾತಾಡಿದರು.