ಮಾತೃ ದಿನದಂದು ಅವಳಿ ಮಕ್ಕಳಿಗೆ ಜನ್ಮ ನೀಡಿದ ಇರೊಂ ಶರ್ಮಿಳಾ

0
548

ಬೆಂಗಳೂರು,ಮೇ 13: ಪ್ರಮುಖ ಮಾನವಹಕ್ಕು ಹೋರಾಟಗಾರ್ತಿ ಇರೊಂ ಶರ್ಮಿಳಾ ಮಾತೃ ದಿನವಾದ ಮೇ 12ರಂದು ಅವಳಿ ಮಕ್ಕಳಿಗೆ ಜನ್ಮನೀಡಿದ್ದಾರೆ. ಬೆಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ 46 ವರ್ಷದ ಶರ್ಮಿಳಾ ಅವಳಿ ಹೆಣ್ಣುಮಕ್ಕಳಿಗೆ ಜನ್ಮ ನೀಡಿದರು. ನಿಕ್ಸ್ ಸಾಕ್ಷಿ, ಓಟ್ಟಂ ತಾರ ಎಂದು ಮಕ್ಕಳಿಗೆ ನಾಮಕರಣ ಮಾಡಲಾಗಿದೆ. ತಾಯಿ ಮಕ್ಕಳು ಆರೋಗ್ಯದಿಂದಿದ್ದಾರೆ ಎಂದು ಆಸ್ಪತ್ರೆಯ ಗೈನಾಲಜಿಸ್ಟ್ ಡಾ. ಶ್ರೀಪಾದ ವಿನೇಕರ್ ಹೇಳಿದರು. ಶರ್ಮಿಳಾರ ಜೊತೆ ಅವರ ಬ್ರಿಟಿಷ್ ಪ್ರಜೆ ಪತಿ ಡೆಸ್ಮಂಡ್ ಕೌಟಿನ್ಹೊ ಇದ್ದರು. ಮಾತೃ ದಿನದಲ್ಲಿ ಮಕ್ಕಳ ಜನನ ಆಕಸ್ಮಿಕವಾಗಿತ್ತು ಎಂದು ಶರ್ಮಿಳಾ ಮತ್ತು ಅವರ ಪತಿ ಹೇಳಿದರು. ಯಾವತ್ತೂ ಮಾತೃ ದಿನದಲ್ಲಿ ಹೆರಿಗೆ ಮಾಡಿಸಿದ ನೆನಪಿಲ್ಲ ಎಂದು ವೈದ್ಯರೂ ಕೂಡ ತಿಳಿಸಿದರು.