ಆಟೋಮ್ಯಾಟಿಕ್ ಹ್ಯಾಂಡ್ ಸ್ಯಾನಿಟೈಸರ್ ಯಂತ್ರ ನಿರ್ಮಿಸಿದ 4ನೇ ತರಗತಿ ಬಾಲಕ ಮುಹಮ್ಮದ್ ಆಶಿಕ್

0
506

ಸನ್ಮಾರ್ಗ ವಾರ್ತೆ

ಕೇರಳ: ಆಟೋಮ್ಯಾಟಿಕ್ ಹ್ಯಾಂಡ್ ಸ್ಯಾನಿಟೈಸರ್ ಯಂತ್ರವನ್ನು ಸೇಂಟ್ ಜಾನ್ ದಿ ಬ್ಯಾಪ್ಟಿಸ್ಟ್ ಸಿಬಿಎಸ್‍ಇ ಶಾಲೆಯ ನಾಲ್ಕನೆಯ ವಿದ್ಯಾರ್ಥಿ ಕುಂಙಯ ಪತ್ತನಾಡ್ ಮುಹಮ್ಮದ್ ಸಜಿ ಎಂಬವರ ಪುತ್ರ ಮುಹಮ್ಮದ್ ಆಶಿಕ್ ತಯಾರಿಸಿ ಸುದ್ದಿ ಮಾಡಿದ್ದಾನೆ.

ಕೊರೋನ ಪ್ರತಿರೋಧಕ್ಕಾಗಿ ಆರೋಗ್ಯ ಇಲಾಖೆಯ ಮುನ್ನೆಚ್ಚರಿಕೆ ಸೂಚನೆಗಳನ್ನು ನೋಡಿದ್ದ ಮುಹಮ್ಮದ್ ಆಶಿಕ್‍ಗೆ ಸ್ವಂತ ಆಟೋಮ್ಯಾಟಿಕ್ ಹ್ಯಾಂಡ್ ಸ್ಯಾನಿಟೈಸರ್ ಮೆಶಿನ್ ತಯಾರಿಸುವ ಯೋಚನೆ ಬಂದಿತ್ತು. ಮನೆಯಲ್ಲಿ ಸಿಗುವ ವೇಸ್ಟ್ ವಸ್ತುಗಳನ್ನು ಸಂಗ್ರಹಿಸಿ. ಅದಕ್ಕೆ ಬೇಕಾದ ಇಲೆಕ್ಟ್ರಾನಿಕ್ ಸಾಮಾನುಗಳನ್ನು ಅಂಗಡಿಯಿಂದ ಖರೀದಿಸಿ. ಐದು ಗಂಟೆಯಲ್ಲಿ ಈ ಯಂತ್ರವನ್ನು ಸಿದ್ಧಪಡಿಸಿದ್ದು, ಒಟ್ಟು 300 ರೂಪಾಯಿ ವ್ಯಯಿಸಿದ್ದಾನೆ.

ಒಂದು ಲೀಟರ್ ಸ್ಯಾನಿಟೈಸ್‍ರ ತುಂಬಬಲ್ಲ ಮೂರು ವೋಲ್ಟಿನ ಮೆಶಿನ್ ಬ್ಯಾಟರಿಯಲ್ಲಿ ಇದು ಕೆಲಸ ಮಾಡುತ್ತದೆ. ಸ್ಯಾನಿಟೈಸರ್ ಯಂತ್ರದ ಅಡಿಯಲ್ಲಿ ಕೈಇಟ್ಟರೆ ಸೆನ್ಸಾರ್ ಕೆಲಸ ಮಾಡುತ್ತದೆ. ಕೈಯಲ್ಲಿ ಸ್ಯಾನಿಟೈಸರ್ ಹೊರ ಚೆಲ್ಲುತ್ತದೆ. ಇದನ್ನು ವ್ಯಾಪಾರಿ ಸಂಸ್ಥೆಗಳಲ್ಲಿ ಬಳಸಬಹುದಾಗಿದೆ. ತಂದೆ ಮುಹಮ್ಮದ್ ಸಜಿಯವರ ಗ್ಯಾಸ್ ಏಜೆನ್ಸಿಯ ಕಚೇರಿಯಲ್ಲಿ ಈ ಯಂತ್ರವನ್ನು ಇರಿಸುವುದು ಆಶಿಕ್‍ನ ತೀರ್ಮಾನವಾಗಿದೆ.

ಮೂರನೇ ತರಗತಿಯಲ್ಲಿ ಕಲಿಯುವಾಗ ಚಿಕ್ಕ ಫ್ಯಾನನ್ನು ಆಶಿಕ್ ತಯಾರಿಸಿ ಮೆಚ್ಚುಗೆ ಗಳಿಸಿದ್ದ. ಪೇಪರ್ ಕ್ರಾಪ್ಟ್, ಮಿನಿಯೇಚರ್ ಪ್ರತಿ ನಿರ್ಮಾಣ ಇತ್ಯಾದಿಯನ್ನು ಈತ ತಯಾರಿಸಿದ್ದಾನೆ. ಆಶಿಕ್ ಟೆಕ್ ಯುಟ್ಯೂಬ್ ಚ್ಯಾನೆಲ್ ಈತನಿಗೆ ಇದೆ. ಸಮೀನ ತಾಯಿ, ಅಲ್ಫಿಯಾ, ಫಿದಾ ಫಾತಿಮಾ ಈತನ ಸಹೋದರಿಯಾಗಿದ್ದಾರೆ.