ಅಯೋಧ್ಯೆ: ಅರ್ಚಕ ಸೇರಿದಂತೆ 16 ಪೊಲೀಸರಿಗೆ ಕೊರೋನ; ಶಿಲಾನ್ಯಾಸಕ್ಕೆ ಬಾಧಕವಾಗುವ ಆತಂಕ

0
273

ಸನ್ಮಾರ್ಗ ವಾರ್ತೆ

ಅಯೋಧ್ಯೆ,ಜು.30: ಪೂಜಾರಿ (ಅರ್ಚಕರು) ಸಹಿತ ಹದಿನಾರು ಪೊಲೀಸರಿಗೆ ಕೊರೋನ ದೃಢಪಟ್ಟಿದ್ದು, ಆಗಸ್ಟ್ ಐದಕ್ಕೆ ಶಿಲಾನ್ಯಾಸ ಕಾರ್ಯಕ್ರಮವು ನಡೆಯಲಿದ್ದು ಇದೇ ವೇಳೆ ರೋಗ ಬಾಧೆಯು ಗೋಚರಿಸಿದೆ.

ಕಾರ್ಯಕ್ರಮದಲ್ಲಿ ಪ್ರಧಾನಿ ನರೇಂದ್ರ ಮೋದಿ ಭಾಗವಹಿಸಲಿದ್ದಾರೆ. ಆದರೆ, ರಾಮ ಮಂದಿರ ನಿರ್ಮಾಣದ ಪೂಜೆಗೆ ವಾರಣಾಸಿಯ ಹನ್ನೊಂದು ಮಂದಿ ಅರ್ಚಕರು ನೇತೃತ್ವವವನ್ನು ನೀಡುತ್ತಿದ್ದಾರೆ ಆದ್ದರಿಂದ ಕಾರ್ಯಕ್ರಮಕ್ಕೆ ಅಡ್ಡಿಯಿಲ್ಲ ಎಂದು ರಾಮಜನ್ಮಭೂಮಿ ಟ್ರಸ್ಟ್ ಅಧಿಕಾರಿಗಳು ಹೇಳಿದರು.

ಕೊರೋನಕ್ಕೆ ಆತಂಕ ಪಡಬೇಕಾಗಿಲ್ಲ. ದೇವಸ್ಥಾನದಲ್ಲಿ ನಿತ್ಯ ಪೂಜೆ ಮಾಡುವ ಒಬ್ಬರಿಗೆ ರೋಗ ಬಂದಿದೆ. ದೇವಸ್ಥಾನದ ಪರಿಸರ ದಿನಾಲು ಅಣು ಮುಕ್ತ ಗೊಳಿಸಲಾಗುತ್ತಿದೆ ಎಂದು ಟ್ರಸ್ಟ್‌ನ ಚೇರ್‍ಮೆನ್ ಕಮಲ್ ನಾರಾಯಣ್ ದಾಸ್ ಹೇಳಿದರು.

ಶಿಲಾನ್ಯಾಸ ಕಾರ್ಯಕ್ರಮಕ್ಕಾಗಿ 200 ವಿಶಿಷ್ಟ ಅತಿಥಿಗಳನ್ನು ಆಹ್ವಾನಿಸಲಾಗಿದೆ. ಮುಖ್ಯಂತ್ರಿಯೂ ಭಾಗವಹಿಸಲಿದ್ದಾರೆ. ಅಯೋಧ್ಯೆಯ ಸುರಕ್ಷಾ ಕೆಲಸದಲ್ಲಿದ್ದ ಪೊಲೀಸರಿಗೂ ಕೊರೋನ ದೃಢಪಟ್ಟಿದೆ.

ಓದುಗರೇ, ಸನ್ಮಾರ್ಗ ಫೇಸ್‌ಬುಕ್ ಪೇಜ್‌ನ್ನು ಲೈಕ್ ಮಾಡುವ ಮೂಲಕ ನಮ್ಮನ್ನು ಬೆಂಬಲಿಸಿ.

LEAVE A REPLY

Please enter your comment!
Please enter your name here