ಅಯೋಧ್ಯೆ: ನ್ಯಾಯಾಲಯವನ್ನು ಅಗೌರವಿಸುತ್ತಿರುವ ಸಂಘಪರಿವಾರ; ಜಲಾಲುದ್ದೀನ್ ಉಮರಿ

0
377

ಜಮಾಅತೆ ಇಸ್ಲಾಮಿ ಹಿಂದ್ ಸೇರಿದಂತೆ ಎಲ್ಲಾ ಮುಸ್ಲಿಂ ಸಂಘಟನೆಗಳು ತೀರ್ಪು ನಮ್ಮ ಪರವಾಗಿ ಅಥವಾ ವಿರುದ್ಧವಾಗಿ ಇದ್ದರೂ ನಾವು ನ್ಯಾಯಾಲಯದ ತೀರ್ಪನ್ನು ಅನುಸರಿಸುತ್ತೇವೆ ಎಂದು ಹೇಳುತ್ತಿವೆ. ಆದರೆ, ಸಂಘ ಪರಿವಾರ ಮತ್ತು ಬಿಜೆಪಿಯ ಕೆಲವು ನಾಯಕರು ಕೋರ್ಟ್ ತೀರ್ಪಿಗಾಗಿ ಕಾಯದೆ ದೇವಾಲಯವನ್ನು ನಿರ್ಮಿಸಬೇಕೆಂದು ಒತ್ತಾಯಿಸುತ್ತಿದ್ದಾರೆ. ಈ ನಿಲುವು ಪ್ರಜಾಪ್ರಭುತ್ವ ವಿರೋಧಿಯಾಗಿದ್ದು, ಸಮಾಜದ ಧ್ರುವೀಕರಣ ಮತ್ತು ಅದರೊಂದಿಗೆ ಕೋಮುಗಲಭೆಗಳಿಗೆ ದಾರಿ ಮಾಡಿಕೊಡುತ್ತದೆ.ಯಾರ ಮಸೀದಿ ಅಕ್ರಮವಾಗಿ ನಾಶಮಾಡಲ್ಪಟ್ಟಿದೆಯೋ ಆ ಅಲ್ಪಸಂಖ್ಯಾತ ಸಮುದಾಯವು ನ್ಯಾಯಾಲಯದ ತೀರ್ಪನ್ನು ಒಪ್ಪಿಕೊಳ್ಳಲು ಸಿದ್ಧವಾಗಿದೆ. ಆದರೆ ಇತರ ಅರ್ಜಿದಾರರು ಸರ್ಕಾರಕ್ಕೆ ಬಹಿರಂಗವಾಗಿ ಸವಾಲು ಹಾಕುವ ಮೂಲಕ ನ್ಯಾಯಾಲಯ ಮತ್ತು ಸಂವಿಧಾನಕ್ಕೆ ಸಂಪೂರ್ಣ ಅಗೌರವವನ್ನು ತೋರಿಸುತ್ತಿದ್ದಾರೆ ಎಂದು ಜಮಾಅತೆ ಇಸ್ಲಾಮಿ ಹಿಂದ್ ರಾಷ್ಟ್ರಾಧ್ಯಕ್ಷ ಜಲಾಲುದ್ದೀನ್ ಉಮ್ರಿ ಹೇಳಿದ್ದಾರೆ.