ಬಾಬರಿ ಮಸೀದಿಯನ್ನು ದೇವಸ್ಥಾನವಲ್ಲ ಮಸೀದಿಯೆಂದು ಉತ್ತರ ಪ್ರದೇಶದ ಸರಕಾರವೇ ನ್ಯಾಯಾಲಯದಲ್ಲಿ ಒಪ್ಪಿಕೊಂಡಿದೆ: ನ್ಯಾಯವಾದಿ ಝಫರಿಯಾಬ್ ಜಿಲಾನಿ

0
4082

ಸಹರಾನ್ಪುರ್:  1949ರಲ್ಲಿ ಬಾಬರಿ ಮಸೀದಿಯಲ್ಲಿ  ವಿಗ್ರಹಗಳನ್ನು ಇಡಲಾಗಿದೆ ಮತ್ತು ಉತ್ತರ ಪ್ರದೇಶದ ಸರಕಾರವು ಬಾಬರಿ ಮಸೀದಿಯನ್ನು ದೇವಸ್ಥಾನವಲ್ಲ ಮಸೀದಿಯೆಂದು ಒಪ್ಪಿಕೊಂಡಿದೆ ಎಂದು ಬಾಬರಿ ಮಸೀದಿ ಕಾರ್ಯಕಾರಿ ಸಮಿತಿಯ ರಾಷ್ಟ್ರೀಯ ಅಧ್ಯಕ್ಷ,  ಮುಸ್ಲಿಂ ವೈಯುಕ್ತಿಕ ಕಾನೂನು ಮಂಡಲಿಯ ಕಾರ್ಯದರ್ಶಿ , ಬಾಬರಿ ಮಸೀದಿ ಕಾನೂನು ಸಮಿತಿಯ ವಕ್ತಾರ ಮತ್ತು ಸಂಸ್ಥಾಪಕ ಸದಸ್ಯ ಮತ್ತು ಮಿಲ್ಲಿ  ಕೌನ್ಸಿಲ್ ಮಂಡಳಿಯ ಸದಸ್ಯರಾದ ನ್ಯಾಯವಾದಿ ಝಫರಿಯಾಬ್ ಜಿಲಾನಿಯವರು ಹೇಳಿದ್ದಾರೆ.

ರೋಜ್ನಾಮಾ ರಾಷ್ಟ್ರೀಯ ಸಹಾರಾ ಪತ್ರಿಕೆಗಳ ಪ್ರಕಾರ, ಫೈಜಾಬಾದ್ ನ  ಆಗಿನ ಜಿಲ್ಲಾಧಿಕಾರಿ ಕೂಡಾ ಅದನ್ನು ಒಪ್ಪಿಕೊಂಡಿದ್ದಾರೆ  ಮತ್ತು ಪೋಲೀಸ್ ಎಫ್ಐಆರ್ ನಲ್ಲಿ ಹೀಗೆ  ಉಲ್ಲೇಖಿಸಲಾಗಿದೆ.  ಈಗಲೂ ನ್ಯಾಯಾಲಯದ ದಾಖಲೆಗಳಲ್ಲಿ ಹಾಗೆಯೇ  ಇದೆ.

1950 ರಲ್ಲಿ ಉತ್ತರ ಪ್ರದೇಶದಲ್ಲಿ ವಲ್ಲಭ ಭಾಯಿ ಪಟೇಲ್ ಸರಕಾರವಿದ್ದಾಗ, ಅವರು ಈ ವಿಚಾರದಲ್ಲಿ ನ್ಯಾಯಾಲಯಕ್ಕೆ ನೀಡಿದ  ಉತ್ತರದಲ್ಲಿ ಈ ಕಟ್ಟಡವು ಎಂದಿಗೂ ದೇವಸ್ಥಾನವಾಗಿರಲಿಲ್ಲ ಮತ್ತು  ಎಂದಿಗೂ ಪೂಜಾಕಾರ್ಯ ನಡೆದಿರಲಿಲ್ಲವೆಂದು ತಿಳಿಸಿದ್ದಾರೆ  ಇದಲ್ಲದೆ, ಪ್ರಕರಣದ ಕಕ್ಷಿಗಾರರಾಗಿರುವ  ನಿರ್ಮೋಹಿ ಅಖಾರಾವು, ಬಾಬರಿ ಮಸೀದಿ ಬಳಿಯ ಚಾಬೊತ್ರಾವನ್ನು ರಾಮ ಮಂದಿರ ಎಂದು ಪ್ರತಿಪಾದಿಸಿದ್ದಾರೆ. ಬಾಬರಿ ಮಸೀದಿ ಕಟ್ಟಡದ ಬಗ್ಗೆ ಯಾವುದೇ ಹೇಳಿಕೆಯನ್ನುಅದು ನೀಡಿಲ್ಲ. 2010 ರ ಉಚ್ಚನ್ಯಾಯಾಲಯದ ತೀರ್ಪಿನಲ್ಲಿ ಸಹ  ಇದೇ ರೀತಿ ಹೇಳಲಾಗಿದೆ ಎಂದು  ಜಿಲಾನಿ ಹೇಳಿದ್ದಾರೆ ಎಂದು ಸಿಯಾಸತ್ ಡೈಲಿ ವರದಿ ಮಾಡಿದೆ.