ಬಾತುಕೋಳಿಗಳು

0
914

ಒಂದು ದಿನ ಕೊಳದ ಬಳಿ ಆಟವಾಡಲು ತೆರಳಿದ ಮಹ್ದೀ ಹಾಗೂ ಅಲಿಗೆ ಕೊಳದಲ್ಲಿ ಬಾತುಕೋಳಿಗಳು ಈಜುವುದು ಕಂಡು ಬಂತು.
ಬಾತುಕೋಳಿಗಳು ತಮ್ಮ ತಲೆಯನ್ನು ನೀರಿನೊಳಗೆ ಮುಳುಗಿಸಿ ಎದ್ದಾಗಲೂ ಕೂಡ ಅವುಗಳ ತಲೆಯು ಒದ್ದೆಯಾಗಲಿಲ್ಲ. ಇದಕ್ಕೆ ಬದಲಾಗಿ ನೀರು ಅತ್ತಿತ್ತ ಸರಿದು ತೆರೆಗಳನ್ನು ರೂಪಿಸುತ್ತಿತ್ತು. ಬಾತು ಕೋಳಿಗಳ ಬೆನ್ನೂ ಒದ್ದೆ ಯಾಗಿರಲಿಲ್ಲ. ಅವು ಶುಭ್ರವಾಗಿ ಹೊಳೆಯುತ್ತಿದ್ದವು.
ಮಹ್ದೀಗೆ ಇದನ್ನು ಕಂಡು ಆಶ್ಚರ್ಯವಾಯ್ತು. ಯಾಕೆಂದರೆ ಗುಬ್ಬಚ್ಚಿಗಳು, ಕಾಗೆ ಹಾಗೂ ಇತರೆ ಹಕ್ಕಿಗಳು ನೀರಿನಲ್ಲಿ ಸ್ನಾನ ಮಾಡುವಾಗ ಅವುಗಳ ರೆಕ್ಕೆಗಳು ಸಂಪೂರ್ಣ ಒದ್ದೆಯಾಗುತ್ತಿದ್ದವು. ಆದರೆ ಬಾತುಕೋಳಿಗಳು ನೀರಿನಲ್ಲಿ ತಲೆಯನ್ನು ಅದ್ದಿ ತೆಗೆದಾಗಲೂ ಅವುಗಳ ರೆಕ್ಕೆಗಳು ಒದ್ದೆಯಾಗದೇ ಇರುವುದು ಅವನಿಗೆ ಅಚ್ಚರಿಯಾಯ್ತು.

ತದನಂತರ ಮಹ್ದೀ ಅಲಿಯತ್ತ ತಿರುಗಿ “ಅಲೀ… ಹಲವು ಬಾರಿ ನೀರಿನಲ್ಲಿ ಮುಳುಗಿ ಎದ್ದರೂ ಕೂಡ ಬಾತುಕೋಳಿಗಳು ಏಕೆ ಒದ್ದೆಯಾಗು ವುದಿಲ್ಲ?” ಎಂದು ಪ್ರಶ್ನಿಸಿದನು.

ಆಗ ಅಲಿ ಬಾತುಕೋಳಿಗಳನ್ನು ನೋಡಿ,
“ಹೌದು ಮಹ್ದೀ ನೀನು ಸರಿಯಾಗಿಯೇ ಹೇಳಿದೆ. ಆದರೆ ಇದಕ್ಕೆ ಕಾರಣವೇನೆಂಬುದು ನನಗೆ ತಿಳಿದಿಲ್ಲ” ಎಂದನು.

ತದನಂತರ ಅವರು ಹತ್ತಿರದಲ್ಲಿಯೇ ಕೆಲಸ ಮಾಡುತ್ತಿದ್ದ ರೈತನ ಬಳಿ ತೆರಳಿ ಅದೇ ಪ್ರಶ್ನೆಯನ್ನು ಕೇಳಿದರು.
ಆ ರೈತನು ಬುದ್ಧಿವಂತ ವ್ಯಕ್ತಿ ಯಾಗಿದ್ದನು.

ಅವರು ಅಲಿ ಮತ್ತು ಮಹ್ದೀ ಯೊಂದಿಗೆ ಕೊಳದ ಬಳಿ ಬಂದು ಬಾತುಕೋಳಿಗಳನ್ನು ವೀಕ್ಷಿಸಿದರು.
ತದನಂತರ ಅವರು “ನನಗೆ ಇದದ್ದಕ್ಕೆ ನಿಖರವಾದ ಕಾರಣ ಗೊತ್ತಿಲ್ಲವಾದರೂ ಅಲ್ಲಾಹನು ಪ್ರತಿಯೊಂದು ಜೀವಿಯನ್ನು ವಿಶಿಷ್ಟವಾಗಿ ಸೃಷ್ಟಿಸಿದ್ದನೆಂಬುದನು ಈ ಜಗದ ಸತ್ಯವೆಂಬುದು ತಿಳಿದಿದೆ. ನೀವು ನಿಖರವಾದ ಕಾರಣವನ್ನು ತಿಳಿದುಕೊಳ್ಳಲು ಬಯಸುತ್ತೀರೆಂದಾದರೆ ನಿಮ್ಮ ಅಧ್ಯಾಪಕರ ಬಳಿ ಈ ಪ್ರಶ್ನೆಯನ್ನು ಕೇಳಿ” ಎಂದರು.

ಆಗ ಅಲಿ ಮತ್ತು ಮಹ್ದೀಗೆ ಅವರ ಮಾತು ಹಿಡಿಸಿತು.
ಅವರು ಮರುದಿನ ಶಾಲೆಗೆ ತೆರಳಿ ಅಧ್ಯಾಪಕರ ಬಳಿ ಇದೇ ಪ್ರಶ್ನೆಯನ್ನು ಕೇಳಿದರು.
ಅಧ್ಯಾಪಕರಿಗೆ ಅವರಿಬ್ಬರ ಪ್ರಶ್ನೆಯಿಂದ ಸಂತೋಷವಾಯ್ತು.

ಅವರು ಕೂಡಲೇ “ಯಾಕೆಂದರೆ ಬಾತುಕೋಳಿಗಳ ರೆಕ್ಕೆಗಳು ಎಣ್ಣೆಯುಕ್ತವಾಗಿರುತ್ತವೆ. ಹಾಗಾಗಿ ಅವುಗಳ ರೆಕ್ಕೆಗಳು ನೀರಿನಲ್ಲಿ ಒದ್ದೆಯಾಗುವುದಿಲ್ಲ. ಇದಲ್ಲದೇ ಎಣ್ಣೆಯುಕ್ತ ರೆಕ್ಕೆಗಳನ್ನು ಹೊಂದಿದ ಇತರೆ ಹಕ್ಕಿಗಳೂ ಕೂಡ ನೀರಿನಲ್ಲಿ ಸರಾಗವಾಗಿ ಈಜುತ್ತವೆ. ಅವುಗಳ ರೆಕ್ಕೆಗಳೂ ಕೂಡ ಒದ್ದೆಯಾಗುವು ದಿಲ್ಲ. ನಾನು ನೋಡಿದಂತೆ ಗುಬ್ಬಚ್ಚಿಗಳ, ಕಾಗೆಗಳ ಹಾಗೂ ಕೆಲವು ಇತರೆ ಹಕ್ಕಿಗಳ ರೆಕ್ಕೆಗಳು ಮಳೆಯಲ್ಲಿ ಒದ್ದೆಯಾದಾಗ ಅವುಗಳು ಅತಿ ಕಷ್ಟಪಟ್ಟು ಹಾರುತ್ತವೆ” ಎಂದರು.

ಆಗ ಮಹ್ದೀಗೆ ಮತ್ತೊಂದು ಸಂಶಯವು ತಲೆದೋರಿತು.
“ಹಾಗಾದರೆ ಬಾತುಕೋಳಿಗಳ ರೆಕ್ಕೆಗಳಿಗೆ ಎಣ್ಣೆಯನ್ನು ಯಾರು ಸವರಿದರು?” ಎಂದು ಅವನು
ಪ್ರಶ್ನಿಸಿದನು.
ಆಗ ಅಧ್ಯಾಪಕರು ತರಗತಿಯತ್ತ ತಿರುಗಿ “ಮಹ್ದೀಯ ಪ್ರಶ್ನೆಗೆ ಯಾರು ಉತ್ತರಿಸುವಿರಿ?” ಎಂದರು.

ಆಗ ಮಕ್ಕಳು; “ಬಹುಶಃ ಬಾತುಕೋಳಿಗಳು ತಾವೇ ಸವರಿ ಕೊಂಡಿರಬಹುದು, ಅವುಗಳ ಮಾಲಿಕರು ಸವರಿರಬಹುದು…” ಹೀಗೆ ಹಲವು ಉತ್ತರಗಳು ಕೇಳಿ ಬಂದವು.

ಆಗ ಅಧ್ಯಾಪಕರು ” ಸಮುದ್ರದಲ್ಲಿ ಈಜುವ ಬಾತುಕೋಳಿ ಗಳಿಗೆ ಮಾಲಿಕರೂ ಇಲ್ಲ. ಅವು ಗಳಿಗೆ ಎಣ್ಣೆಯೂ ಸಿಗುವುದಿಲ್ಲ. ಹಾಗಿರುವಾಗ ಅವುಗಳು ಯಾಕೆ ಒದ್ದೆ ಯಾಗುವುದಿಲ್ಲ?” ಎಂದು ಕೇಳಿದರು.

ಆಗ ಮಕ್ಕಳು ಹೌದೆಂಬಂತೆ ತಲೆ ಅಲ್ಲಾಡಿಸಿದರಾದರೂ ಯಾರೂ ಉತ್ತರಿಸಲಿಲ್ಲ.

ಆಗ ಅಧ್ಯಾಪಕರು” ಅಲ್ಲಾಹನು ಪ್ರತಿಯೊಂದು ಜೀವಿಯನ್ನೂ ಕೂಡ ವಿಶಿಷ್ಟವಾಗಿ ಸೃಷ್ಟಿಸಿದ್ದಾನೆ. ಅದ ರಂತೆಯೇ ಬಾತುಕೋಳಿಗಳಿಗೆ ನೀರಿನಲ್ಲಿ ಸುಲಭವಾಗಿ ಈಜಲು ಮತ್ತು ಅಪಾಯವು ತಲೆದೋರಿದಾಗ ಕೂಡಲೇ ಅಲ್ಲಿಂದ ಹಾರಿ ದಡ ಸೇರಿಕೊಳ್ಳುವ ಸಾಮಥ್ರ್ಯವನ್ನು ನೀಡಿದ್ದಾನೆ. ಅವುಗಳ ಹುಟ್ಟಿ ನೊಂದಿಗೆ ಅಲ್ಲಾಹನು ಅವುಗಳ ರೆಕ್ಕೆಗಳನ್ನು ವಿಶಿಷ್ಟವಾಗಿ ರಚಿಸಿದ್ದಾನೆ.ಯಾವ ರೀತಿ ಮನುಷ್ಯನ ಚರ್ಮವು ಬಾಹ್ಯ ಆಘಾತಗಳಿಂದ ಒಳಗಿನ ಅಂಗಾಂಗಗಳನ್ನು ಸಂರಕ್ಷಿಸುತ್ತದೆಯೋ ಅದೇ ರೀತಿ ಬಾತುಕೋಳಿ ಗಳಿಗೆ ಅಲ್ಲಾಹನು ಎಣ್ಣೆಯುಕ್ತ ರೆಕ್ಕೆಗಳನ್ನು ನೀಡಿದ್ದಾನೆ” ಎಂದರು.

ಮಕ್ಕಳಿಗೆ ಈ ವಿಷಯವನ್ನು ಕೇಳಿ ಸಂತೋಷವಾಯ್ತು.
ಅವರು “ಅಲ್ ಹಮ್ದುಲಿಲ್ಲಾಹ್” (ಅಲ್ಲಾಹನಿಗೆ ಸರ್ವಸ್ತುತಿ) ಎಂದರು.

ಅನು: ಬಿಂತಿ ಯಾಸೀನ್