ಅಯೋಧ್ಯೆ: ವಿವಾದಿತ 2.77 ಎಕರೆ ಜಾಗದಲ್ಲಿ ಮಂದಿರ ನಿರ್ಮಾಣ: ಮುಸ್ಲಿಮರಿಗೆ ಅಯೋಧ್ಯೆಯಲ್ಲೇ 5 ಎಕರೆ ಭೂಮಿ: ಸುಪ್ರೀಂ ತೀರ್ಪು

0
2641

ಹೊಸದಿಲ್ಲಿ, ಅ.9: ಬಾಬರಿ ಮಸೀದಿ ತೀರ್ಪು ಪ್ರಕಟವಾಗುತ್ತಿದ್ದು ಅಯೋಧ್ಯೆಯ 2.77 ಎಕರೆ ವಿವಾದಿತ ಭೂಮಿಯನ್ನು ಹಿಂದೂ ಪಕ್ಷಕ್ಕೆ ನೀಡಬೆಂದು ಹೇಳಿದೆ. ಮುಂದಿನ ಮೂರು ತಿಂಗಳೊಳಗೆ ಕೇಂದ್ರ ಸರಕಾರ ಟ್ರಸ್ಟ್ ಒಂದನ್ನು ರಚಿಸಿ ಮಂದಿರ ನಿರ್ಮಾಣದ ಹೊಣೆಯನ್ನು ಅದಕ್ಕೆ ವಹಿಸಿಕೊಡಬೇಕೆಂದು ಅದು ಹೇಳಿದೆ. ಅದೇ ವೇಳೆ, ಅಯೋಧ್ಯೆಯಲ್ಲೇ ಮುಸ್ಲಿಮರಿಗೆ ಐದು ಎಕರೆ ಭೂಮಿ ಕೊಡಬೇಕೆಂದು ಅದು ಹೇಳಿದ್ದು, ಮಸೀದಿ ಕಟ್ಟುವ ಅಥ ಬಿಡುವ ಸಂಗತಿ ಮುಸ್ಲಿಂ ಪಕ್ಷಕ್ಕೆ ಸೇರಿದ್ದು ಎಂದು ತೀರ್ಪಿತ್ತಿದೆ. ಬಾಬರಿ ಮಸೀದಿಯನ್ನು ಖಾಲಿ ಜಾಗದಲ್ಲಿ ಕಟ್ಟಿರಲಿಲ್ಲ ಎಂದು ತೀರ್ಪಿನಲ್ಲಿ ಸೂಚಿಸಿದ್ದು, ಉತ್ಖನನದಲ್ಲಿ ಮಸೀದಿಯ ಕೆಳಗಡೆ ಮಂದಿರ ರಚನೆ ಸಿಕ್ಕಿರುವುದಾಗಿ ಹೇಳಿದೆ.

ಮಸೀದಿಯ ಜಾಗ ತಮ್ಮದೆಂದು ಸುನ್ನಿವಕ್ಫ್ ಬೋರ್ಡು ಸಾಬೀತುಪಡಿಸಿಲ್ಲ. ಏಎಸ್‍ಐ ಪುರಾವೆಗಳನ್ನು ಸಲ್ಲಿಸಿದೆ. 1856-57ರ ಮೊದಲು ಹಿಂದೂಗಳಿಗೆ ಅಲ್ಲಿ ನಿಷೇಧ ಇರಲಿಲ್ಲ. ಮಸೀದಿ ಯಾವಾಗ ಆಗಿತ್ತು ಎಂಬುದು ಸ್ಪಷ್ಟವಾಗಿಲ್ಲ. ಎಎಸ್‍ಐ ಪುರಾವೆ ಪ್ರಕಾರ ಉತ್ಖನನ ಪ್ರದೇಶದಲ್ಲಿ ಮಂದಿರ ಇತ್ತು. ವಿವಾದಿತ ಕಟ್ಟಡ ಭೂಮಿ ಹಿಂದೂಗಳಿಗೆ ಕೊಡಲಾಗುವುದು ಎಂದು ಸುಪ್ರೀಂಕೋರ್ಟು ತೀರ್ಪು ನೀಡಿದೆ. ಮಸೀದಿಗೆ ಐದು ಎಕರೆ ಭೂಮಿ ಸರಕಾರ ಕೊಡಬೇಕಾಗಿದೆ ಸರ್ವಾನುಮತದ ತೀರ್ಪಿನಲ್ಲಿ ಹೇಳಲಾಗಿದೆ.