ಬಹುಪತ್ನಿತ್ವಕ್ಕೆ ನಿಷೇಧ ಇರುವ ಟುನಿಷೀಯಾದಲ್ಲಿ ಬಹುಪತ್ನಿತ್ವದ ಪರವಾಗಿ ಮುಸ್ಲಿಂ ಮಹಿಳೆಯರ ಪ್ರತಿಭಟನೆ

0
672

ಟುನೀಶಿಯ: ಟುನಿಷಿಯಾದ ಮುಸ್ಲಿಂ ಮಹಿಳೆಯರು ಬಹುಪತ್ನಿತ್ವದ ಪರವಾಗಿ ಪ್ರತಿಭಟನೆ ನಡೆಸಿದ್ದಾರೆ. ದೇಶದಲ್ಲಿ ಅವಿವಾಹಿತ ಮಹಿಳೆಯರ ಸಂಖ್ಯೆ ಹೆಚ್ಚಿರುವುದು ಇದಕ್ಕೆ ಕಾರಣವೆಂದು ಹೇಳಲಾಗುತ್ತಿದ್ದರೂ ರಾಜಕೀಯ ಆಯಾಮವೂ ಇದೆ ಎಂದು ಹೇಳಲಾಗುತ್ತಿದೆ. ಟುನೀಶಿಯದಲ್ಲಿ ಬಹುಪತ್ನಿತ್ವವನ್ನು ಅಪರಾಧವಾಗಿ ಕಾಣಲಾಗುತ್ತಿದೆ.

ಇಸ್ಲಾಮಿ ಸಂಶೋಧಕ ಸಾಮಿ ಬಿರ್ಹಾನ್ ರ ಪ್ರಕಾರ, ಸಂಗಾತಿಯನ್ನು ಪಡೆಯಲು ವಿಫಲವಾದ ಮಹಿಳೆಯರಿಗೆ ಬಹುಪತ್ನಿತ್ವವು ಒಂದು ಅವಕಾಶವಾಗಿ ಒದಗುತ್ತದೆ. ಇದೇವೇಳೆ, ಟ್ಯುನೀಷಿಯನ್ ಪುರುಷರು ಯುವತಿಯರಿಗೆ ಆದ್ಯತೆ ನೀಡುತ್ತಿರುವುದು ಅವಿವಾಹಿತರ ಸಮಸ್ಯೆ ಬಿಗಡಾಯಿಸುವುದಕ್ಕೆ ಕಾರಣವಾಗಿದೆ.

ಬಹುಪತ್ನಿತ್ವದ ಬೇಡಿಕೆಯು ಅನ್ನಹದ ಪಾರ್ಟಿಯ ಜನಪ್ರಿಯತೆಯನ್ನು ಕುಗ್ಗಿಸುವ ಪ್ರಯತ್ನವಾಗಿದೆ ಎಂದು ದೇಶದ ಕೆಲವರು ಅಭಿಪ್ರಾಯಪಡುತ್ತಾರೆ. ಈ ಘೋಷಣೆಗೆ ಪ್ರಚೋದನೆಯನ್ನು ನೀಡುವ ಮೂಲಕ ಆಡಳಿತ ಪಕ್ಷವು ಲಾಭವನ್ನು ಪಡೆಯುವ ಹುನ್ನಾರ ನಡೆಸುತ್ತಿದೆ ಎನ್ನಲಾಗುತ್ತಿದೆ.

ಇತ್ತೀಚಿನ ವರದಿಯ ಪ್ರಕಾರ, ಟುನೀಶಿಯದಲ್ಲಿ 50 ಲಕ್ಷ ಮಹಿಳೆಯರಿದ್ದಾರೆ, ಇದರಲ್ಲಿ 50% ಅವಿವಾಹಿತರು. 25-34 ವರ್ಷ ವಯಸ್ಸಿನವರು.

ಕೃಪೆ: ದಿ ಸಿಯಾಸತ್ ಡೈಲಿ