ಬಜ್ಪೆ ಬಾಂಬರ್ ಆದಿತ್ಯ ರಾವ್ ಬಂಧನ: ಸೋಶಿಯಲ್ ಮೀಡಿಯಾಗಳಲ್ಲಿ ಮಾಧ್ಯಮಗಳ ವಿರುದ್ಧ ತೀವ್ರ ಟೀಕೆ

0
4487

ಸನ್ಮಾರ್ಗ ವಾರ್ತೆ

ಮಂಗಳೂರು; ಜ. 22- ನಗರದ ಬಜಪೆಯಲ್ಲಿ ಇರುವ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಬಾಂಬ್ ಇಟ್ಟಿದ್ದ ಆದಿತ್ಯ ರಾವ್ ಇವತ್ತು ಬೆಳಿಗ್ಗೆ ಬೆಂಗಳೂರಿನಲ್ಲಿ ಪೊಲೀಸ್ ಮಹಾನಿರ್ದೇಶಕ ಡಿಜಿಪಿ ಐಜಿಪಿ ನೀಲಮಣಿ ಎನ್ ರಾಜು ಅವರ ಕಚೇರಿಗೆ ಬಂದು ಶರಣಾಗಿದ್ದಾನೆ ಎಂಬ ಮಾಹಿತಿಗಳು ಲಭ್ಯವಾಗಿದ್ದು ಈ ವರದಿಯನ್ನು ಗೃಹ ಸಚಿವ ಬಸವರಾಜ ಬೊಮ್ಮಾಯಿ ದೃಢೀಕರಿಸಿದ್ದಾರೆ. ವಿಮಾನನಿಲ್ದಾಣದಲ್ಲಿ ಬಾಂಬ್ ಇರಿಸಿದ ಬಳಿಕ ಆದಿತ್ಯ ರಾವ್ ಮಾರುವೇಷದಲ್ಲಿ ಮಂಗಳೂರಿನಿಂದ ಲಾರಿಯಲ್ಲಿ ಬೆಂಗಳೂರಿಗೆ ತೆರಳಿದ್ದ ಅನ್ನುವ ಮಾಹಿತಿಗಳು ಲಭ್ಯವಾಗಿದೆ.

ಈತ ನಗರದ ಚಿಲಿಂಬಿಯಲ್ಲಿ ವಾಸಿಸುತ್ತಿದ್ದ ಮತ್ತು ಕೆಲ ದಿನಗಳ ಹಿಂದೆ ಹೋಟೆಲ್ ನಲ್ಲಿ ಕೆಲಸಕ್ಕೆ ಸೇರಿದ್ದ ಅನ್ನುವ ಮಾಹಿತಿಯಿದ್ದು ಬಾಂಬು ತಯಾರಿಯೂ ಈ ಹೋಟೆಲ್ ನಲ್ಲಿಯೇ ನಡೆದಿದೆ ಎಂದು ಹೇಳಲಾಗಿದೆ. ಆನ್ಲೈನ್ ಮೂಲಕ ಬಾಂಬು ತಯಾರಿಸುವುದಕ್ಕಾಗಿ ಪೌಡರ್ ಆತ ತರಿಸಿದ್ದ. ಅಲ್ಲಿಯೇ ಬಾಂಬ್ ತಯಾರಿಕೆ ಪ್ರಯತ್ನ ನಡೆಸಿದ್ದ ಮತ್ತು ಈ ಪೌಡರ್ ರೂಮಲ್ಲಿ ಪತ್ತೆಯಾಗಿತ್ತು. ಇದಕ್ಕೆ ಪೂರಕ ಮಾಹಿತಿಗಳನ್ನು ಹೋಟೆಲ್ ಸಿಬ್ಬಂದಿಗಳು ನೀಡಿದ್ದಾರೆ ಎನ್ನುವ ಮಾಹಿತಿಯೂ ಲಭ್ಯವಾಗಿದೆ.

ಕಳೆದ ದಿನ ವಿಮಾನ ನಿಲ್ದಾಣದಲ್ಲಿ ಬಾಂಬ್ ಪಟಿಯಾದ ಕ್ಷಣದಿಂದ ಆದಿತ್ಯ ರಾವ್ ಬಂಧನವಾಗುವ ವರೆಗೆ ಕನ್ನಡದ ಖಾಸಗಿ ಟಿವಿ ಚಾನೆಲ್ ಗಳು ಆ ಇಡೀ ಘಟನೆಯನ್ನು ವೈಭವೀಕರಿಸಿದ್ದು, ಭಾರಿ ಸ್ಫೋಟಕ ಎಂದು ಬಿಂಬಿಸಿದ್ದು ಮತ್ತು ಕನ್ನಡ ಪತ್ರಿಕೆಗಳು ಕೂಡಪೌರತ್ವಕ್ಕೆ ಪ್ರತೀಕಾರ ತೀರಿಸಲು ಇಡಲಾದ ಬಾಂಬ್ ಎಂಬಂತೆ ಬಿಂಬಿಸಿದ್ದು ನಡೆದಿತ್ತು. ಆದರೆ, ಆದಿತ್ಯ ರಾವ್ ಬಂಧನದ ಬಳಿಕ ಇವುಗಳ ವರಸೆ ಬದಲಾಗಿರುವುದನ್ನು ನೋಡಿ ಸೋಶಿಯಲ್ ಮೀಡಿಯಾಗಳಲ್ಲಿ ತೀವ್ರ ಟೀಕೆ ವ್ಯಕ್ತವಾಗುತ್ತಿದೆ. ಮಾಧ್ಯಮಗಳನ್ನು ಪಕ್ಷಪಾತಿಯಾಗಿ ವರ್ತಿಸಿವೆ ಎಂದು ದೊಡ್ಡಮಟ್ಟದಲ್ಲಿ ಸೋಷಿಯಲ್ ಮೀಡಿಯಾದ ಬಳಕೆದಾರರು ಆರೋಪಿಸಿದ್ದಾರೆ.