ಬೆಂಗಳೂರು: ವಿವಿಧ ಧಾರ್ಮಿಕ ಮುಖಂಡರಿಂದ ಪೊಲೀಸ್ ಕಮಿಷನರ್ ಭೇಟಿ

0
729

ಸನ್ಮಾರ್ಗ ವಾರ್ತೆ

ನಿನ್ನೆ ಬೆಂಗಳೂರಿನಲ್ಲಿ ನಡೆದ ಹಿಂಸಾಚಾರಕ್ಕೆ ಸಂಬಂಧಿಸಿದಂತೆ ಜಮಾಅತೆ ಇಸ್ಲಾಮೀ ಹಿಂದ್, ಜಮೀಅತ್ ಉಲಮಾ-ಏ- ಹಿಂದ್ ಹಾಗೂ ವಿವಿಧ ಎನ್‌ಜಿಓ ‌ಪ್ರತಿನಿಧಿಗಳನ್ನು ಒಳಗೊಂಡ ಧಾರ್ಮಿಕ ಮುಖಂಡರ ನಿಯೋಗವು ಬೆಂಗಳೂರು ಕಮಿಷನರ್‌ ಕಮಲ್ ಪಂಥ್‌ರವರನ್ನು ಭೇಟಿ ನೀಡಿತು.

ಪ್ರವಾದಿ ನಿಂದೆಯ ಫೇಸ್‌ಬುಕ್ ಪೋಸ್ಟ್‌ಗೆ ಸಂಬಂಧಿಸಿದಂತೆ ಎಫ್‌ಐಆರ್ ದಾಖಲಿಸಲು ಸಂಭವಿಸಿದ ವಿಳಂಬ ಹಾಗೂ ಗೋಲಿಬಾರ್‌‌ನಿಂದ ಮೂವರು ಹತರಾಗುವುದಕ್ಕೂ ಪೊಲೀಸರು ಸಾಮಾನ್ಯವಾಗಿ ಕೈಗೊಳ್ಳುವ ಯಾವೆಲ್ಲ ಕ್ರಮಗಳನ್ನು ಕೈಗೊಂಡಿದ್ದಾರೆ ಎಂಬ ಕುರಿತು ಪ್ರಶ್ನಿಸಲಾಯ್ತು.

ಈ ಕುರಿತು ವಿಡಿಯೋ ಸಂದೇಶ ನೀಡಿದ ಜಮಾಅತೆ ಇಸ್ಲಾಮೀ ಹಿಂದ್‌ನ ಕರ್ನಾಟಕ ರಾಜ್ಯ ಅಧ್ಯಕ್ಷರಾದ ಡಾ.ಬೆಳಗಾಮಿ ಮುಹಮ್ಮದ್ ಸಾದ್‌ರವರು, ಪ್ರವಾದಿ ಮುಹಮ್ಮದ್(ಸ) ಕುರಿತು ಫೇಸ್‌ಬುಕ್‌ನಲ್ಲಿ ನಿಂದೆಯನ್ನು ಮಾಡಿದ ನವೀನ್ ವಿರುದ್ಧ ತಕ್ಷಣ ಕ್ರಮ ಕೈಗೊಳ್ಳಬೇಕು, ಯಾರೆಲ್ಲ ಬಂಧನಕ್ಕೊಳಗಾಗಿದ್ದಾರೋ ಅವರಲ್ಲಿ ಬಂಧನಕ್ಕೊಳಗಾದ ಅಮಾಯಕರನ್ನು ಬಿಡುಗಡೆಗೊಳಿಸಬೇಕು.

ಶಾಂತಿ ಮತ್ತು ಸುರಕ್ಷತೆಯನ್ನು ಪುನ ಸ್ಥಾಪಿಸಲು ಮುಸ್ಲಿಂ ಹಾಗೂ ಹಿಂದೂ ಧಾರ್ಮಿಕ ಮುಖಂಡರು ಸೇರಿದಂತೆ ಸ್ಥಳೀಯ ನಾಯಕರನ್ನೊಳಗೊಂಡ ಶಾಂತಿ ಸಮಿತಿಯನ್ನು ರಚಿಸಬೇಕು ಎಂದು ಕಮಿಷನರ್ ಕಮಲ್ ಪಂಥ್ ರವರ ಮುಂದೆ ಬೇಡಿಕೆಯನ್ನು ಇರಿಸಿರುವುದಾಗಿ ತಿಳಿಸಿದರು.

ಅಲ್ಲದೇ, ಶಾಂತಿ ಪುನಃ ಸ್ಥಾಪಿಸಲು ಎಲ್ಲರೂ ಪೊಲೀಸರೊಂದಿಗೆ ಸಹಾಯ ಸಹಕಾರ ನೀಡಬೇಕೆಂದು ಅವರು ಹೇಳಿದರು‌.  ನಿಯೋಗದಲ್ಲಿ ಡಾ. ಮತೀನ್, ಮೌಲಾನ ಮಕ್ಸೂದ್ ಇಮ್ರಾನ್ ರಶ್ದಿ, ಶಬ್ಬೀರ್ ನದ್ವಿ ಯವರು ಉಪಸ್ಥಿತರಿದ್ದರು.

DJ Halli incident. Kannada statement of Dr. Belgami Muhammad Saad, State President, Jamaat e Islami Hind Karnataka.

Posted by Jamaat-e-Islami Hind Karnataka on Wednesday, August 12, 2020

ಓದುಗರೇ, ಸನ್ಮಾರ್ಗ ಫೇಸ್‌ಬುಕ್ ಪೇಜ್‌ನ್ನು ಲೈಕ್ ಮಾಡುವ ಮೂಲಕ ನಮ್ಮನ್ನು ಬೆಂಬಲಿಸಿ.