11 ವರ್ಷಗಳಲ್ಲಿ ದೇಶದಲ್ಲಿ 50,000ಕ್ಕೂ ಹೆಚ್ಚು ಬ್ಯಾಂಕ್ ಸಾಲ ವಂಚನೆಗಳು !

0
1072

ಹೊಸದಿಲ್ಲಿ, ಜೂ. 13: ಕಳೆದ ಹನ್ನೊಂದು ವರ್ಷಗಳಲ್ಲಿ ಭಾರತದಲ್ಲಿ 50,000ಕ್ಕೂ ಹೆಚ್ಚು ಬ್ಯಾಂಕ್ ಸಾಲ ವಂಚನೆಗಳು ನಡೆದಿವೆ. ಇದರಲ್ಲಿ ಐಸಿಐಸಿಐ ಬ್ಯಾಂಕ್, ಸ್ಟೇಟ್ ಬ್ಯಾಂಕ್ ಆಫ್ ಇಂಡಿಯ (ಎಸ್‍ಬಿಐ), ಎಚ್‍ಡಿಎಫ್‍ಸಿ ಬ್ಯಾಂಕುಗಳಲ್ಲಿ ಹೆಚ್ಚು ವಂಚನೆಗಳು ನಡೆದಿವೆ ಎಂದು ರಿಸರ್ವ್ ಬ್ಯಾಂಕಿನ (ಆರ್‍ಬಿಐ) ಲೆಕ್ಕಗಳು ಬಹಿರಂಗಪಡಿಸಿವೆ. 2008-09ರಿಂದ 2018-19ರ ನಡುವೆ 53,334 ವಂಚನೆ ಪ್ರಕರಣಗಳು ಆಗಿವೆ. ಒಟ್ಟು2.05 ಲಕ್ಷ ಕೋಟಿ ನಷ್ಟ. ಐಸಿಐಸಿಐ ಬ್ಯಾಂಕಿನಲ್ಲಿ 6,811 ಘಟನೆಗಳು ನಡೆದಿದ್ದು 5,033.81 ನಷ್ಟ ಆಗಿದೆ. ಎಸ್‍ಬಿಐಯ 6,793 ವಂಚನೆ ಪ್ರಕರಣಗಳಲ್ಲಿ 23,734.74 ಕೋಟಿ ರೂಪಾಯಿ ವಂಚನೆ ನಡೆಯಿತು. ಎಚ್‍ಡಿಎಫ್‍ಸಿಯಲ್ಲಿ 2, 497 ಕೇಸುಗಳಲ್ಲಿ 1, 20.79 ಕೋಟಿ ರೂಪಾಯಿ ವಂಚನೆ ನಡೆದಿದೆ ಎಂದು ವರದಿಯಾಗಿದೆ. ಈ ವಿವರಗಳನ್ನು ಮಾಹಿತಿ ಹಕ್ಕು ಅರ್ಜಿಯಲ್ಲಿ ಪಡೆಯಲಾಗಿದೆ.