2022 ರ ವಿಶ್ವಕಪ್ ಫುಟ್ ಬಾಲ್ ಹಿನ್ನೆಲೆ: ಬಿಯರ್‌ ದರ ಅಗ್ಗಗೊಳಿಸಿದ ಕತಾರ್

0
617

ದುಬೈ: ವಿಶ್ವ ಕಪ್ ಫುಟ್ ಬಾಲ್ ಗೆ ಭರ್ಜರಿ ತಯಾರಿ ನಡೆಸುತ್ತಿರುವ ಕತಾರ್, ಆಲ್ಕೋಹಾಲ್ ಬೆಲೆಯನ್ನು 30% ಕಡಿತಗೊಳಿಸಿದೆ.

ದೇಶದ ಏಕೈಕ ಮದ್ಯದಂಗಡಿ ಈಗ ಸುಮಾರು $ 64 ಗೆ ಬೀರ್ ಕೇಸ್‌ಗಳನ್ನು ಮಾರಾಟ ಮಾಡುತ್ತಿದ್ದು ಬೆಲೆಯು ಸುಮಾರು 30% ನಷ್ಟು ಕುಸಿತವಾಗಿದೆ. 2022 ರ ವಿಶ್ವಕಪ್‌ನಲ್ಲಿ ಪಾಲ್ಗೊಳ್ಳುವಾಗ ಸ್ಥಳೀಯರು ಮತ್ತು ಸಾಕರ್ ಅಭಿಮಾನಿಗಳ ಆಲ್ಕೊಹಾಲ್‌ನ ಅಧಿಕ ದರ ಹಾಗೂ ತೆರಿಗೆಗಳ ಬಗ್ಗೆ ಬೇಸರ ವ್ಯಕ್ತಪಡಿಸಿದ ಹಿನ್ನೆಲೆಯಲ್ಲೇ ಬೀರ್‌ನ ಬೆಲೆಯನ್ನು‌ ಇಳಿಸಲಾಗಿದೆ.

ತೈಲ ಸಮೃದ್ಧ ಪರ್ಷಿಯನ್ ಕೊಲ್ಲಿಯ ಇತರ ದೇಶಗಳಂತೆ, ಕತಾರ್ ಮುಸ್ಲಿಮರಲ್ಲದ ವಿದೇಶಿಯರಿಗೆ ಮದ್ಯ ಮಾರಾಟವನ್ನು ನಿರ್ಬಂಧಿಸುತ್ತದೆ. ದೇಶದ ಮುಖ್ಯ ಸ್ಮಶಾನ ಮತ್ತು ಚರ್ಚ್ ಸಂಕೀರ್ಣದ ಸಮೀಪ ದೋಹಾದ ಹೊರವಲಯದಲ್ಲಿರುವ ಮದ್ಯ ಮತ್ತು ಹಂದಿ ಮಾಂಸವನ್ನು ಮಾರಾಟ ಮಾಡುವ ಅಂಗಡಿಗೆ ಪ್ರವೇಶಿಸಲು ಅನುಮತಿಸುವ ಪರವಾನಗಿ ಪಡೆಯಲು ವಲಸಿಗರಿಗೆ ಅವರ ಉದ್ಯೋಗದಾತರಿಂದ ಅನುಮತಿ ಪಡೆಯುವಿಕೆಯು ಕಡ್ಡಾಯವಾಗಿದೆ.

ಕತಾರ್ ಡಿಸ್ಟ್ರಿಬ್ಯೂಷನ್.ಕಂ ಎಂದು ಕರೆಯಲ್ಪಡುವ ಅಧಿಕೃತ ಮದ್ಯದಂಗಡಿಯು ತನ್ನ ಗ್ರಾಹಕರಿಗೆ ಬೆಲೆ ಪಟ್ಟಿಯನ್ನು ಬಿಡುಗಡೆ ಮಾಡಿದ್ದು ಬೆಲೆ ಕಡಿತವನ್ನು ತನ್ನ ಪಟ್ಟಿಯಲ್ಲಿ ತೋರಿಸಿದೆ. ಈ ವರ್ಷದ ಆರಂಭದಲ್ಲಿ ಹೆಚ್ಚಳಕ್ಕೆ ಕಾರಣವಾದ 100% ತೆರಿಗೆಯನ್ನು ಇದರಲ್ಲಿ ವರ್ಗೀಕರಿಸಿಲ್ಲ.