ಪ.ಬಂಗಾಳ: ಉಪ ಜಿಲ್ಲಾ ಮ್ಯಾಜಿಸ್ಟ್ರೇಟ್ ಕೊರೋನಕ್ಕೆ ಬಲಿ

0
454

ಸನ್ಮಾರ್ಗ ವಾರ್ತೆ

ಕೊಲ್ಕತಾ,ಜು.14: ಕೊರೊನ ವಿರುದ್ಧ ಹೋರಾಟದಲ್ಲಿ ಮುಂಚೂಣಿಯಲ್ಲಿದ್ದ ಚಾಂದ್ ನಗರದ ಉಪ ಮ್ಯಾಜಿಸ್ಟ್ರೇಟ್, ಉಪ ಜಿಲ್ಲಾಧಿಕಾರಿ ದೇವದತ್ತಾ ರಾಯ್ (38) ಕೊರೋನದಿಂದ ನಿಧನರಾಗಿದ್ದಾರೆ.

ಜುಲೈಯಲ್ಲಿ ಇವರಲ್ಲಿ ಕೊರೋನ ಲಕ್ಷಣಗಳು ಕಾಣಿಸಿಕೊಂಡಿತ್ತು. ನಂತರ ಮನೆಯಲ್ಲಿ ಕ್ವಾರಂಟೈನ್‍ನಲ್ಲಿದ್ದರು. ರವಿವಾರ ಆರೋಗ್ಯ ಸ್ಥಿತಿ ಬಿಗಡಾಯಿಸಿದ್ದು, ಆಸ್ಪತ್ರೆಗೆ ದಾಖಲಿಸಿದರೂ ಅವರು ಬದುಕುಳಿಯಲಿಲ್ಲ.

ಹುಗ್ಲಿ ಜಿಲ್ಲೆಯ ವಲಸೆಗಾರರ ನಡುವೆ ಕರೋನ ಪ್ರತಿರೋಧ ಚಟುವಟಿಕೆಗೆ ನೇತೃತ್ವ ವಹಿಸಿದ್ದರು. ಇವರ ಕೆಲಸಗಳು ವ್ಯಾಪಕ ಪ್ರಶಂಸೆಗೆ ಒಳಗಾಗಿತ್ತು. ಅಧಿಕಾರಿಣಿಯ ಸಾವಿನಲ್ಲಿ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಸಂತಾಪ ಸೂಚಿಸಿದ್ದಾರೆ.

ತನ್ನ ಕೆಲಸದಲ್ಲಿ ನಿಷ್ಠೆ ತೋರಿಸಿದವರಲ್ಲಿ ಒಬ್ಬರು ನಮಗೆ ನಷ್ಟವಾಗಿದ್ದಾರೆ. ಅವರ ಸಾವು ರಾಜ್ಯಕ್ಕೆ ಬಹುದೊಡ್ಡ ನಷ್ಟವಾಗಿದೆ” ಎಂದು ಮಮತಾ ಟ್ವೀಟ್ ಮಾಡಿದ್ದಾರೆ. ದೇವದತ್ತರ ಕುಟುಂಬಕ್ಕೆ ಫೋನ್ ಕರೆ ಮಾಡಿ ಮುಖ್ಯಮಂತ್ರಿ ಸಂತಾಪ ಸೂಚಿಸಿದರು. ಮೃತರು 2010ರ ಪಶ್ಚಿಮಬಂಗಾಳ ಕೇಡರ್‌ನ ಐಎಎಸ್ ಅಧಿಕಾರಿಯಾಗಿದ್ದಾರೆ.

ಓದುಗರೇ, ಸನ್ಮಾರ್ಗ ಫೇಸ್‌ಬುಕ್‌ ಪೇಜ್‌ನ್ನು ಲೈಕ್ ಮಾಡುವ ಮೂಲಕ ನಮ್ಮನ್ನು ಬೆಂಬಲಿಸಿ.