ಇಂಧನ ದರ ಏರಿಕೆ, ಜಿಎಸ್‌ಟಿ ವಿರೋಧಿಸಿ ವ್ಯಾಪಾರಿ ಸಂಘಟನೆಗಳಿಂದ ‘ಭಾರತ್ ಬಂದ್’

0
380

ಸನ್ಮಾರ್ಗ ವಾರ್ತೆ

ಹೊಸದಿಲ್ಲಿ,ಫೆ.26: ಇಂಧನ ಬೆಲೆ ಹೆಚ್ಚಳ, ಜಿಎಸ್ಟಿ, ಇವೆಬಿಲ್ ಇತ್ಯಾದಿಗಳನ್ನು ವಿರೋಧಿಸಿ ವ್ಯಾಪಾರಿ ಸಂಘಟನೆಗಳು ಕರೆ ನೀಡಿದ ಭಾರತ ಬಂದ್ ಆರಂಭವಾಗಿದೆ. ಬೆಳಗ್ಗೆ ಆರು ಗಂಟೆಯಿಂದ ರಾತ್ರೆ ಎಂಟು ಗಂಟೆಯವರೆಗೆ ನಡೆಯುವ ಬಂದ್‍ಗೆ ಕಾನ್ಫಡರೇಷನ್ ಆಫ್ ಆಲ್ ಇಂಡಿಯಾ ಟ್ರೇಡರ್ಸ್(ಸಿಎಐಡಿ) ಕರೆ ನೀಡಿದೆ. ಆಲ್ ಇಂಡಿಯಾ ಟ್ರಾನ್ಸ್‌ಪೋರ್ಟ್ ವೆಲ್ಫೇರ್ ಅಸೋಸಿಯೇಶನ್ ಬೆಂಬಲ ನೀಡಿದೆ.

ನಲ್ವತ್ತು ಸಾವಿರ ಸಂಘಟನೆಗಳ ಎಂಟು ಕೋಟಿ ಜನರು ಬಂದ್‍ನಲ್ಲಿ ಭಾಗವಹಿಸುವರು ಎಂದು ಬಂದ್ ಕರೆ ನೀಡಿದವರು ಹೇಳಿಕೊಂಡಿದ್ದಾರೆ. ದೇಶಾದ್ಯಂತ ಮಾರುಕಟ್ಟೆ ಸ್ಥಗಿತವಾಗಲಿದೆ. ದೇಶದಲ್ಲಿ 15,000 ಸ್ಥಳಗಳಲ್ಲಿ ಧರಣಿ ನಡೆಸುವುದಾಗಿ ವ್ಯಾಪಾರಿಗಳು ತೀರ್ಮಾನಿಸಿದ್ದಾರೆ. 40 ಲಕ್ಷ ಸ್ಥಳಗಳಲ್ಲಿ ರಸ್ತೆ ತಡೆ ನಡೆಸುವುದಾಗಿ ಸಂಘಟನೆಗಳು ತಿಳಿಸಿವೆ. ಆನ್‍ಲೈನ್ ಮೂಲಕ ಕೂಡ ಸಾಮಾನು ಖರೀದಿಸುವಂತಿಲ್ಲ.