ಹೆದರಬೇಡಿ, ಕೊರೋನಕ್ಕೂ ಔಷಧಿ ಲಭ್ಯ; ಆಗಸ್ಟಿನೊಳಗೆ ವ್ಯಾಕ್ಸಿನ್

0
651

ಸನ್ಮಾರ್ಗ ವಾರ್ತೆ

ಹೊಸದಿಲ್ಲಿ,ಜು.2: ಭಾರತದಲ್ಲಿ ಅಭಿವೃದ್ಧಿಪಡಿಸಿದ ಕೊರೋನ ವ್ಯಾಕ್ಸಿನ್ ಅಗಸ್ಟಿನೊಳಗೆ ಲಭ್ಯಗೊಳಿಸುತ್ತೇವೆ ಎಂದು ಇಂಡಿಯನ್ ಕೌನ್ಸಿಲ್ ಆಫ್ ಮೆಡಿಕಲ್ ರಿಸರ್ಚ್ ಹೇಳಿಕೊಂಡಿದೆ. ಹೈದರಾಬಾದಿನಲ್ಲಿರುವ ಭಾರತ್ ಬಯೊಟೆಕ್‍ನೊಂದಿಗೆ ಸಹಕರಿಸಿ ಮಧ್ಯ ಲಭ್ಯವಾಗಲಿದೆ.

ಆಗಸ್ಟ್ ಹದಿನೈದರ ಒಳಗೆ ಮದ್ದು ಸಿಗುವಂತೆ ಮಾಡಿ ಎಂದು ಭಾರತ್ ಬಯೊಟೆಕ್‍ಗೆ ಸೂಚಿಸಿದ್ದೇವೆಂದು ಐಸಿಎಂಆರ್ ಪ್ರಧಾನ ನಿರ್ದೇಶಕ ಬಲ್‌ರಾಮ್ ಭಾರ್ಗವ್ ಹೇಳಿದರು. ಎಲ್ಲ ಗುಣಮಟ್ಟದ ಪರೀಕ್ಷೆಯ ನಂತರ ಮದ್ದು ಒದಗಿಸಲಾಗುತ್ತದೆ. ಆದ್ದರಿಂದ ಹನ್ನೆರಡು ಕೇಂದ್ರಗಳನ್ನು ಆಯ್ಕೆಮಾಡಿಕೊಂಡಿದ್ದೇವೆ ಎಂದು ಅವರು ಹೇಳಿದರು.

ಓದುಗರೇ, ಸನ್ಮಾರ್ಗ ಫೇಸ್‌ಬುಕ್ ಪೇಜ್‌ನ್ನು ಲೈಕ್ ಮಾಡುವ ಮೂಲಕ ನಮ್ಮನ್ನು ಬೆಂಬಲಿಸಿ.