ಅಮೆರಿಕದೊಂದಿಗೆ ನಿಲ್ಲಬೇಕು; ಇರಾನ್‍ನ ಕೋಪಕ್ಕೂ ಕಾರಣವಾಗಬಾರದು…

0
494

ಅಮೆರಿಕದೊಂದಿಗೆ ನಿಲ್ಲಬೇಕು; ಇರಾನ್‍ನ ಕೋಪಕ್ಕೂ ಕಾರಣವಾಗಬಾರದು. ಇದು ಭಾರತದ ಸದ್ಯದ ಸ್ಥಿತಿ. ಶೀತಲ ಸಮರ ಬಲಗೊಂಡ ಕಾಲದಲ್ಲಿ ಒಂದು ಆಲಿಪ್ತ ತತ್ವವನ್ನು ದಿಟ್ಟೆದೆಯಿಂದ ಘೋಷಿಸಿ ವಿದೇಶ ನೀತಿಯನ್ನು ರೂಪಿಸಲು ಆಗದ ಪರಿಸ್ಥಿತಿ ಸರಕಾರದ ಮುಂದಿದೆ. 2015ರಲ್ಲಿ ಬರಾಕ್ ಒಬಾಮ ಸರಕಾರ ಇರಾನಿನೊಂದಿಗೆ ಅಣು ಒಪ್ಪಂದ ಮಾಡಿಕೊಂಡಿದ್ದನ್ನು ರದ್ದು ಪಡಿಸಿದ ಇಂದಿನ ಅಧ್ಯಕ್ಷ ಟ್ರಂಪ್‍ರ ನಡೆ ಭಾರತವನ್ನು ಕಂಗೆಡುವಂತೆ ಮಾಡಿದೆ. ಮೇ ತಿಂಗಳಲ್ಲಿ ಅಮೆರಿಕವು ಇರಾನ್ ವಿರುದ್ಧ ನಿರ್ಬಂಧವನ್ನು ಘೋಷಿಸಿತು. ಅಮೆರಿಕದೊಂದಿಗೆ ಸೌಹಾರ್ದದಿಂದಿರಲು ಎಲ್ಲ ದೇಶಗಳು ಇದನ್ನು ಒಪ್ಪಬೇಕೆಂದು ಟ್ರಂಪ್ ಅಣತಿ. ಇದರೊಂದಿಗೆ ಇರಾನ್ ಮಾತ್ರವಲ್ಲ ಭಾರತ ಸಹಿತ ವಲಯದಲ್ಲಿ ಬಲಿಷ್ಠಗೊಳ್ಳುವ ದೇಶಗಳನ್ನು ನಿಯಂತ್ರಿಸುವುದು ಅಮೆರಿಕ ಉದ್ದೇಶವಾಗಿದೆ. ಜೂನ್ 28ಕ್ಕೆ ಭಾರತ ಸಂದರ್ಶಿಸಿದ ವಿಶ್ವಸಂಸ್ಥೆಯ ಅಮೆರಿಕದ ರಾಯಭಾರಿ ನಿಕ್ಕಿಹ್ಯಾಲಿ ಈ ವಿಷಯವನ್ನು ಬಹಿರಂವಾಗಿ ಹೇಳಿದರು. ಇರಾನ್ ಮುಂದಿನ ಉತ್ತರಕೊರಿಯ. ಇರಾನ್‍ನೊಂದಿಗೆ ಸಂಬಂಧ ಮುಂದುವರಿಸಬೇಕೆ ಎಂದು ಭಾರತ ನಿರ್ಧರಿಸ ಬೇಕು. ಇರಾನ್‍ನಿಂದ ತೈಲ ಖರೀದಿಸುವುದು ನವೆಂಬರ್ ನಾಲ್ಕರೊಳಗೆ ಸಂಪೂರ್ಣ ಸ್ಥಗಿತ ಗೊಳಿಸಬೇಕು, ಇಲ್ಲದಿದ್ದರೆ ತಮ್ಮ ನಿರ್ಬಂಧ ಎದುರಿಸಬೇಕಾಗಿದೆ ಎಂದು ಟ್ರಂಪ್‍ರ ಬೆದರಿಕೆಯನ್ನು ನಿಕ್ಕಿ ಹ್ಯಾಲಿ ಪುನರುಚ್ಚರಿಸಿದರು. ಅಮೆರಿಕದ ಈ ಹಠ ತೈಲ ರಫ್ತು ಮಾತ್ರವಲ್ಲ ವಲಯದಲ್ಲಿ ತಂತ್ರ ಪ್ರಧಾನವಾಗಿ ಮೇಲೇರುವ ಯತ್ನಕ್ಕೆ ಕಡಿವಾಣ ತೊಡಿಸುವುದಾಗಿದೆ.

ಸೌದಿ ಅರೇಬಿಯ ಮತ್ತು ಇರಾಕ್ ಬಿಟ್ಟರೆ ಭಾರತ ಹೆಚ್ಚು ತೈಲ ತರಿಸಿಕೊಳ್ಳುವುದು ಇರಾನ್‍ನಿಂದ. ಶಿಪ್ಪಿಂಗ್ ವೆಚ್ಚ ಕಡಿಮೆ, ಎಲ್ಲ ವಿತರಕರಿಗಿಂತ ಹೆಚ್ಚು ಸಮಯ ಸಾಲಕೊಡುವುದು ಇರಾನ್. ಇದು ಆಮದು ಮಾಡಿಕೊಳ್ಳುವುದಕ್ಕೆ ಉಪಯುಕ್ತ ಘಟಕಗಳಾಗಿವೆ. ಅಮೆರಿಕದಿಂದ ಆಮದು ಮಾಡುವುದರೊಂದಿಗೆ ಖರ್ಚುಗಳು ಹೆಚ್ಚುತ್ತವೆ. ಸೌದಿ, ಇರಾಕ್ ಮೊದಲಾದಲ್ಲಿಗಿಂತ ದೊಡ್ಡ ಖರ್ಚು ಇರಾನ್‍ನಿಂದ ಕ್ರೂಡ್ ಆಯಿಲ್ ತರಿಸುವಾಗ ಆಗುತ್ತದೆ. ಹೊಸ ವಾಗ್ದಾನ ಗಳೊಂದಿಗೆ ಅಮೆರಿಕ ಮುಂದೆ ಬಂದಿದೆ. ಆದರೆ ಅವೆಲ್ಲವೂ ಅಮೆರಿಕದ ವ್ಯಾಪಾರ ವಹಿವಾಟು ಹೆಚ್ಚಿಸುವುದಕ್ಕೆ ಇರುವುದಾಗಿದೆ. ಇದನ್ನು ಬಿಟ್ಟು ಅಮೆರಿಕಕ್ಕೆ ಬೇರೆ ಯಾವ ಗುರಿಯೂ ಇಲ್ಲ. ಅಮೆರಿಕದ ಒತ್ತಡಕ್ಕೆ ಮಣಿದು ಅವರ ಪ್ರೀತಿಗಾಗಿ ಉಭಯ ರಾಷ್ಟ್ರಗಳು ಮೈತ್ರಿ ಕಡಿದುಕೊಂಡರೆ ಹೇಗೆ? ಭಾರತ ಅಮೆರಿಕದ ಪ್ರೀತಿಗೆ ಈ ತ್ಯಾಗ ಸಾಧ್ಯ ಎಂಬ ನಿಲುವಿನೆಡೆಗೆ ಬಂದಿದೆ. ಇದು ಇರಾನ್‍ನ ಲೆಕ್ಕವಾದರೆ ಮುಂದಿನವಾರ ಅಮೆರಿಕದಲ್ಲಿ ಅಧಿಕಾರಿಗಳ ಮಟ್ಟದಲ್ಲಿ ನಡೆಯುವ ಚರ್ಚೆಯಲ್ಲಿ ಸ್ಪಷ್ಟವಾಗಲಿದೆ.

ತೈಲ ಆಮದು ಮಾತ್ರವಲ್ಲ, ಭಾರತ ಇರಾನ್ ಜಂಟಿಯಾಗಿ ಆರಂಭಿಸಿದ ಫರ್ಸಾದ್ ಬಿ ಗ್ಯಾಸ್ ಅಭಿವೃದ್ದಿ ಯೋಜನೆ ಮತ್ತು ಶಾಬಹಾರ್ ಬಂದರಿನ ಮೂಲ ಸೌಕರ್ಯಗಳ ಅಭಿವೃದ್ಧಿ ವಿಚಾರದಲ್ಲಿ ಟೆಹ್ರಾನ್‍ನಿಂದ ಭಾರತ ಹಿಂದೆ ಸರಿಯಬೇಕಾಗುತ್ತದೆ. ಹೀಗಾದಾಗ ಈ ಯೋಜನೆಗಳು ನೆನೆಗುದಿಗೆ ಬೀಳಲಿದೆ. ಕಳೆದ ವಾರ ಉಭಯ ದೇಶಗಳ ವಿದೇಶಾಂಗ ಮಟ್ಟದ ಅಧಿಕಾರಿಗಳು ಪರಸ್ಪರ ಹದಿನೈದನೆ ಸಮಾ ಲೋಚನಾ ಸಭೆಯಲ್ಲಿ ಭಾರತ ಭಾರೀ ಪ್ರಮಾಣದ ಹೂಡಿಕೆ ಮಾಡಿದ ಶಾಬಹಾರ್ ಬಂದರು ದೊಡ್ಡ ಚರ್ಚೆಯಾಗಿತ್ತು. ಆದರೆ, ವಿತರಣೆ, ಆಮದು, ಖರ್ಚುಗಳಲ್ಲಿ ಭಾರತಕ್ಕೆ ವಿಶೇಷ ರಿಯಾಯಿತಿಯನ್ನು ಇರಾನ್ ಘೊಷಿಸಿತ್ತು. ಭಾರತ ತೈಲ ತರಿಸಿಕೊಳ್ಳುವುದು ನಿಲ್ಲಿಸಿದರೆ ಭಾರತದ ಹೂಡಿಕೆಗಳು ಮತ್ತು ಮೂಲ ಸೌರ್ಕಯ ಅಭಿವೃದ್ದಿ ಯೋಜನೆಗಳನ್ನು ಇರಾನ್ ತಡೆಯು ತ್ತೇನೆಂದು ಸ್ಪಷ್ಟಪಡಿಸಿದೆ. ಪಾಕಿಸ್ಥಾನದ ನೆಲಮಾರ್ಗ ಬಿಟ್ಟು ಅಪಘಾನಿಸ್ಥಾನಕ್ಕೆ ಹೋಗಲು ಸುಲಭದಲ್ಲಿ ಹತ್ತಿರವಿರುವ ಜಲಮಾರ್ಗ ಶಾಬಹಾರ್ ಬಂದರು ಆಗಿದೆ. ಪಾಕಿಸ್ತಾನ ಗಡಿಯ ಹೊರಗೆ ನಡೆಸು ತ್ತಿರುವ ಭಯೋತ್ಪಾದನೆ ಮತ್ತು ಭಾರತವನ್ನು ಅಸ್ಥಿರಗೊಳಿಸುವ ಅದರ ಯತ್ನಗಳಿಗೆ ಉತ್ತರವಾಗಿ ಶಾಬಹಾರ್ ಬಂದರನ್ನು ಭಾರತ ಆಶ್ರಯಿಸಿ ಕೊಂಡಿತ್ತು. ಮಾತ್ರವಲ್ಲ ಈ ಬಂದರಿನ ಮೂಲಕ ಮಧ್ಯೇಶ್ಯಕ್ಕೆ ಹೋಗುವ ದಾರಿ ಸುಲಭವಾಗಿಯೂ ಸಿಗುತ್ತದೆ. ಅಂತಾರಾಷ್ಟ್ರೀಯ ಉತ್ತರ ದಕ್ಷಿಣ ಸಾರಿಗೆಗೆ ಭಾರತ ಯತ್ನಿಸುತ್ತಿದೆ. ತೈಲ ಮತ್ತು ಭೂ ವೈಜ್ಞಾನಿಕವಾಗಿ ಎರಡು ದೇಶಗಳಿಗೆ ಉಪಯುಕ್ತವಾಗುವಂತಹ ಯೋಜನೆ ಶಬಹಾರ್ ಬಂದರು ಯೋಜನೆಯಾಗಿದೆ.

ಇವೆಲ್ಲವನ್ನೂ ರದ್ದುಪಡಿಸಬೇಕೆಂಬುದು ಟ್ರಂಪ್ ಅಣತಿಯಾಗಿದೆ. ಇದನ್ನು ತಳ್ಳಿಹಾಕಲು ಅಥವಾ ಸ್ವೀಕರಿಸಲು ಭಾರತಕ್ಕೆ ಆಗದಾಗಿದೆ. ಈ ಧರ್ಮ ಸಂಕಟ ಈಗಿನದು. ಭಾರತ ಇರಾನ್‍ನೊಂದಿಗಿನ ಸಂಬಂಧ ಬಹಿರಂಗವಾಗಿ ಮುಂದೆ ಸಾಗುತ್ತಿದೆ. ಮಾತ್ರವಲ್ಲ ಅಮೆರಿಕದ ನೀತಿ ನಮಗೆ ಬೇಕಿಲ್ಲ. ವಿಶ್ವಸಂಸ್ಥೆ ಅಂಗೀಕಾರ ನೀಡಿದ ನೀತಿ ನಮ್ಮದು ಎಂಬ ನಿಲುವು ಹಿಂದೆ ಭಾರತದ್ದಾಗಿತ್ತು. ಆದರೆ ಈಗ ಯಾವ ನಿಶ್ಚಿತತೆ ಇಲ್ಲ. ಯಾಕೆಂದರೆ ಅಮೆರಿಕದಲ್ಲಿ ಟ್ರಂಪ್ ಅಧ್ಯಕ್ಷರು. ವಿದೇಶ ನೀತಿಯಲ್ಲಿ ಸರಿಯಾದೊಂದು ನಿರ್ಧಾರ ತಳೆಯಲು ಭಾರತಕ್ಕೆ ಆಗಿಲ್ಲ. ಭಾರತ ಎದುರಿಸುತ್ತಿರುವ ಸವಾಲು ಇರಾನಿಗೆ ಅರ್ಥವಾಗು ತ್ತಿದೆ ಎಂದು ಇರಾನ್ ಉಪ ರಾಯಭಾರಿ ಹೇಳಿದ್ದಾರೆ. ಆದರೆ ಭಾರತ ವಿವಿಧ ವಿಷಯಗಳಲ್ಲಿ ದೃಢವಾದ ನಿಲುವು ತಾಳಿದ್ದ ಸಾರ್ವಭೌಮ ದೇಶ ಎಂದು ಕೂಡ ಹೇಳಿದ್ದಾರೆ.

ದೇಶದ ವಾಣಿಜ್ಯ ವಹಿವಾಟುಗಳು, ವಿಶ್ವಾಸದ ಉಭಯರ ಸಂಬಂಧಗಳು, ಮಾರುಕಟ್ಟೆಯ ವಿಷಯ ಗಳು, ವಲಯದ ಭೂವೈಜ್ಞಾನಿಕತೆ, ಆರ್ಥಿಕತೆ, ರಾಜಕೀಯ ಸಮಾನಾಂಶಗಳು ಇವೆಲ್ಲವನ್ನು ಮುಂದಿಟ್ಟು ವಿದೇಶ ನೀತಿ ರೂಪಿಸುವುದು ಅಗತ್ಯ ವಿದೆ. ಸರಿಯಾದ ನಿಲುವಿನಲ್ಲಿ ನಿಲ್ಲದಿದ್ದರೆ ಸಮಸ್ಯೆ ನಮಗೆ. ಸಮತೋಲನ ಕಡಿದು ಹೋಗಬಹುದು. ಇದು ದೇಶವನ್ನಾಳುವ ಮಂದಿ ಅರಿಯಬೇಕಾಗಿದೆ.