ಭಾರತದ ಜನಸಂಖ್ಯಾ ದರವನ್ನು ಅಗತ್ಯಕ್ಕಿಂತ ಉಬ್ಬಿಸಿ ಹೇಳಲಾಗಿದೆ: ವರದಿ

0
392

ಪ್ರಸ್ತುತ ಪರಿಸ್ಥಿತಿಯನ್ನು ಆಧಾರವಾಗಿಸಿಕೊಂಡು ಭಾರತೀಯ ಜನಸಂಖ್ಯಾ ಬೆಳವಣಿಗೆಯ ಕುರಿತು ಅತಿಯಾದ ಭವಿಷ್ಯ ಸೂಚಕಾಂಶಗಳನ್ನು ಉಲ್ಲೇಖಿಸಲಾಗಿದೆ ಎಂದು ವಿಜ್ಞಾನಿಗಳ ಅಧ್ಯಯನವೊಂದು ಬಹಿರಂಗ ಪಡಿಸಿದೆ.
ಈ ಹಿಂದೆ “2025ರಲ್ಲಿ ಭಾರತದ ಜನಸಂಖ್ಯೆಯ ಚೀನಾವನ್ನು ಮೀರಿ ಪ್ರಥಮ ಸ್ಥಾನ ಪಡೆಯುವುದು ಮತ್ತು ಇದಕ್ಕೆ ಪ್ರಸ್ತುತವಿರುವ ಯುವ ಜನಸಂಖ್ಯೆಯ ಪ್ರಮಾಣ ಹಾಗೂ ಜನನ ದರದ ಹೆಚ್ಚಳವು ಕಾರಣವಾಗಿದೆ” ಎಂಬ ವಿಚಾರವು ಕೇಳಿ ಬರುತ್ತಿತ್ತು.
“ಹೆಚ್ಚಿನ ನಿವ್ವಳ ದರ ಹಾಗೂ ತಲಾ ಆದಾಯದ ಮೂಲಕ ಗಮನಿಸುವುದಾದಲ್ಲಿ ಏಷ್ಯಾ ಖಂಡದ ರಾಜ್ಯಗಳಲ್ಲಿ ಭಾರತವು ವೈವಿಧ್ಯಪೂರ್ಣ ದೇಶವೆಂಬುದನ್ನು ಮನಗಾಣಬಹುದು. ಇದು ಯುರೋಪಿನ ರಾಷ್ಟ್ರಗಳಂತೆ ಏಕ ಸಂಸ್ಕೃತಿಯನ್ನು ಹೊಂದಿಲ್ಲವಾದುದರಿಂದ ಬೇರೆ ದೇಶಗಳು ಅಳವಡಿಸುವ ಭವಿಷ್ಯಸೂಚಕ ಕ್ರಮಗಳು ಭಾರತಕ್ಕೆ ಸೂಕ್ತವಲ್ಲ” ಎಂದು ವಲ್ರ್ಡ್ ಪಾಪ್ಯುಲೇಷನ್ ಪ್ರೋಗ್ರಾಮ್  ಡೈರೆಕ್ಟರ್ ಆದ ವುಲ್ಫ್ ಗ್ಯಾಂಗ್ ಲುಟ್ಜ್, ಇಂಟರ್ ನ್ಯಾಷನಲ್ ಇನ್ಸ್ಟಿಟ್ಯೂಟ್ ಫಾರ್ ಎಪ್ಲೈಡ್ ಸಿಸ್ಟಮ್ ಅನಾಲಿಸಿಸ್ ಇನ್ ಆಸ್ಟ್ರೀಯ ತಿಳಿಸಿದ್ದಾರೆ.
2011ರ ಅವಧಿಯಲ್ಲಿಯೇ ಜನನ ದರ, ಮರಣ ದರ, ಶಿಕ್ಷಣ ಹಾಗೂ ವಲಸೆಗಳು ಸ್ಥಗಿತಗೊಂಡಿರುವಾಗ ಶೈಕ್ಷಣಿಕ ಬೆಳವಣಿಗೆಗಳಿಂದಾಗಿ ಜನನ ದರದ ಪ್ರಮಾಣವು ಕಡಿಮೆಯಾಗಿದೆ. ಆದುದರಿಂದ ಜನಸಂಖ್ಯಾ ಪ್ರಮಾಣವು 1.6 ಬಿಲಿಯನ್‍ನಿಂದ 1.8 ಬಿಲಿಯನ್‍ಗೆ ತಲುಪಬಹುದು ಎಂದು ಅಂದಾಜಿಸಲಾಗಿದೆ.