ಭಾವನಾತ್ಮಕ ಆಟ ಬಿಡಿ, ಉದ್ಯೋಗ ಕೊಡಿ

0
933

ದೇಶದ ಬಹುದೊಡ್ಡ ಸಮಸ್ಯೆ ಯೆಂದು ನಿರುದ್ಯೋಗವನ್ನು ಪ್ರಾಮಾಣಿಕ ವಾಗಿ ವಿಶ್ಲೇಷಿಸಬೇಕಾಗಿದೆ. ಶಬರಿಮಲೆ ಮಹಿಳಾ ಪ್ರವೇಶ,  ರಾಮಮಂದಿರ, ಬಾಬರಿ ಮಸೀದಿ ವಿವಾದಕ್ಕಿಂತ ಮೇಘಾ ಲಯದ ಗಣಿ ದುರಂತವನ್ನು ಮಾನ ವೀಯ ನೆಲೆಯಲ್ಲಿ ದೇಶದ ಬಹುದೊಡ್ಡ  ಸಮಸ್ಯೆಯೊಂದರ ಅನಾವರಣ ಎಂದು ಹೇಳಬೇಕಾಗುತ್ತದೆ. ಹಸಿರು ನ್ಯಾಯ ಮಂಡಲಿ ಅನಧಿಕೃತ ಗಣಿಗಾರಿಕೆಯನ್ನು ಅನುಮತಿಸಿದ  ಅಪರಾಧಕ್ಕಾಗಿ ಮೇಘಾಲಯ ಸರಕಾರಕ್ಕೆ 100 ಕೋಟಿ ರೂಪಾಯಿ ದಂಡ ವಿಧಿಸಿದ್ದು ಆ ಸಮಸ್ಯೆ ಎಷ್ಟು ಘೋರವೆಂಬುದನ್ನು ದೇಶದ  ಮುಂದೆ ಎತ್ತಿಹಿಡಿಯುತ್ತಿದೆ. ಇವಿಷ್ಟರಿಂದ ದೇಶದಲ್ಲಿನ ಬೃಹತ್ ಸಮಸ್ಯೆ ಯಾವುದೆಂದು ಪ್ರತ್ಯೇಕ ವಿವರಿಸಬೇಕಾಗಿಲ್ಲ. ಆದರೆ ಸರಕಾರಗಳು ಕೇವಲ ನಂಬಿಕೆಗೆ ಸಂಬಂಧಿಸಿದ ವಿಚಾರಗಳನ್ನು ತಲೆಯಲ್ಲಿ ಹೊತ್ತು ತಿರುಗಾಡುತ್ತಿದೆ. ನಂಬಿಕೆ ಅವರ ಹೊಟ್ಟೆ ತುಂಬಿದ ಮೇಲೆ ಜನರಿಗೆ ಮುಖ್ಯವಾಗುತ್ತದೆ. ಅದಕ್ಕೆ  ಉದ್ಯೋಗ ಮುಖ್ಯವಾಗಿದೆ.

ಇತ್ತೀಚೆಗೆ ಕೇಂದ್ರ ಸಚಿವ ಗಡ್ಕರಿಯವರೇ ನಿರುದ್ಯೋಗವನ್ನು ದೇಶದ ಬಹುದೊಡ್ಡ ಸಮಸ್ಯೆ ಎಂದರು. ಹೌದಲ್ಲ, ಇವೆಲ್ಲ ಗೊತ್ತಿದ್ದೂ ಅವರ  ಸರಕಾರ ಪರಿಹಾರ ವೇನು ಮಾಡಿತು ಚಾ-ಪಕೋಡ ಮಾರಿಯೂ ಬದುಕಬಹುದೆನ್ನುವ ಪ್ರಧಾನಿ ಮೋದಿಯವರಲ್ಲಿರುವ ಪರಿಹಾರದ ಸರಕು ಪ್ರಾಯೋಗಿಕಕ್ಕಿಂತ ಅಧಿಕ  ಭಾವನಾತ್ಮಕವಾದದ್ದು. ಇದೇ ಪ್ರಧಾನಿಯವರ ನೋಟು ನಿಷೇಧ ಪಕೋಡದಂತಹ ಸಣ್ಣ ಉದ್ಯೋಗಕ್ಕೂ  ಸಮಸ್ಯೆ ತಂದೊಡ್ಡಿದೆ. ರೈತರು, ಸಣ್ಣ ವ್ಯಾಪಾರಿಗಳು ನೋಟು ರದ್ದತಿ ನೀತಿಯಿಂದ ಸಂಪೂರ್ಣ ಸ್ತಬ್ಧರಾದರು. ಅದರಲ್ಲೂ ನೋಟು ನಿಷೇಧ  ರಕ್ಕಸನ ತೆಕ್ಕೆಯಿಂದ ಗ್ರಾಮೀಣ ಜನರು, ರೈತರು ಇಂದಿಗೂ ಬಿಡಿಸಿಕೊಳ್ಳಲಾಗದೆ ಚಡಪಡಿಸುತ್ತಿದ್ದಾರೆ.

ಕಳೆದ ಆರ್ಥಿಕ ವರ್ಷದಲ್ಲಿ ಒಂದು ಕೋಟಿಗೂ ಹೆಚ್ಚ ಜನ ಕೆಲಸ ಕಳಕೊಂಡರು. 2017ರಲ್ಲಿ 40.8 ಕೋಟಿ ಜನರ ಬಳಿ ಕೆಲಸ ಇತ್ತಾ?  ಕಳೆದ 2018ರಲ್ಲಿ ಅದು 39.7 ಕೋಟಿಗೆ ಇಳಿಕೆಯಾಯಿತು. ಅಂದರೆ ಒಂದು ಕೋಟಿ ಜನರು ಇದ್ದ ಕೆಲಸವನ್ನು ಕಳೆದುಕೊಂಡಿದ್ದಾರೆ ಎಂಬ  ವಿಷಯ ಸೆಂಟರ್ ಫಾರ್ ಮಾನಿಟರಿಂಗ್ ಇಂಡಿಯನ್ ಇಕಾನಮಿ ವರದಿಯಿಂದ ಅರಿವಾಗು ತ್ತದೆ. ಅಂದರೆ ಒಂದು ಕೋಟಿಯಷ್ಟು  ಉದ್ಯೋಗ ವನ್ನು ನೋಟು ನಿಷೇಧದಂತಹ ತಪ್ಪು ನಿರ್ಣಯ ಗಳ ಗಣಿಯಲ್ಲಿ ಹೂತುಹಾಕಿದೆವು. ದೇಶದ ನಾಯಕರು ಕೆಲಸ ಕೊಡುವ  ಮಾತು ಬಿಡಿ ಇದ್ದ ಕೆಲಸವನ್ನಾದರೂ ಉಳಿಸಿ ಪುಣ್ಯ ಕಟ್ಟಿಕೊಳ್ಳ ಬಹುದಿತ್ತು. ಅದೂ ಆಗಲಿಲ್ಲ. ಇಂದು ಮಾಧ್ಯಮ ಗಳು ಕೂಡ ಉದ್ಯೋಗ  ಕಸಿದು ಪ್ರಜೆಗಳನ್ನು ಜೀವಂತ ಸಾಯಿಸುವ ವಿಷಯವನ್ನು ಚರ್ಚಿಸುವು ದಿಲ್ಲ. ಕೊಲೆ, ಹಲ್ಲೆ, ಲೂಟಿ, ಮತ್ತು ನಂಬಿಕೆ ಸಂಬಂಧಿಸಿದ್ದ ನ್ನೆಲ್ಲ  ಗಂಭೀರವಾಗಿ ಚರ್ಚಿಸುತ್ತಿವೆ.
ನಿರುದ್ಯೋಗ ಎಷ್ಟು ಗಂಭೀರವಾದುದು ಎಂದರೆ ತಿಂಗಳ ವೇತನದ 37 ಲಕ್ಷ ಮಂದಿ ಕೆಲಸಕಳಕೊಂಡಿದ್ದಾರೆ. ಇವರಲ್ಲಿ 88 ಲಕ್ಷ ಮಹಿಳೆಯರು (ಗ್ರಾಮದ ಮಹಿಳೆಯರು 65 ಲಕ್ಷ) ಮತ್ತು 22 ಲಕ್ಷ ಪುರುಷರು ಸೇರಿದ್ದಾರೆ. ವರದಿ ತಿಳಿಸಿದ ಪ್ರಕಾರ ನೋಟು ನಿಷೇಧ ದಿಂದಾಗಿ  ಕೂಲಿಕಾರ್ಮಿಕರು, ಕೃಷಿ ಕಾರ್ಮಿಕರು ಕೆಲಸ ಕಳಕೊಂಡಿದ್ದಾರೆ.

ಈಗ ಹೇಳಿ, ದೇಶದ ಗಂಭೀರ ಸಮಸ್ಯೆ ಯಾವುದು? ನಿರುದ್ಯೋಗ ವೆಂದು ಮಾನ್ಯ ಸಚಿವ ಗಡ್ಕರಿ ಯಾದರೂ ಗುರುತಿಸಿದ್ದಾರಲ್ಲ ಎಂದು  ಸಮಾಧಾನಿಸಿಕೊಳ್ಳುವುದಾದರೂ ಹೇಗೆ? ಅದರಿಂದ ನಮ್ಮ ದೇಶದ ಆರ್ಥಿಕತೆ ಯಾಗಲಿ, ಜನರ ಜೀವನ ಮಟ್ಟ ವಾಗಲಿ, ಕೆಲಸದಲ್ಲಾದರೂ  ಸುಧಾರಣೆ ಯಾಗುತ್ತದೆಯೇ? ಇಲ್ಲ, ನಿರುದ್ಯೋಗ ಎಂಥ ಸಮಸ್ಯೆಯೆಂದರೆ ಹೆಚ್ಚು ಕಲಿತವರಿಗೂ ಕೆಲಸವಿಲ್ಲ. ಕಡಿಮೆ ಕಲಿತವರ ಕೆಲಸಕ್ಕೆ  ಅವರು ಹೊಂಚು ಹಾಕುವ ಸ್ಥಿತಿ ದೇಶದಲ್ಲಿದೆ.

ನಾಲ್ಕನೆ ದರ್ಜೆ ಕೆಲಸಕ್ಕೆ ಉನ್ನತ ವಿದ್ಯಾಭ್ಯಾಸ ಪಡೆದವರೇ ಅರ್ಜಿ ಹಾಕುತ್ತಿದ್ದಾರೆ. ನೋಡಿ, ಇತ್ತೀ ಚೆಗೆ ದಿಲ್ಲಿಯಲ್ಲಿ 707 ಮಲ್ಟಿ ಟಾಸ್ಕಿಂಗ್  ಸ್ಟಾಫ್ ಹುದ್ದೆಗೆ ಅರ್ಜಿ ಕರೆಯಲಾಗಿತ್ತು. ಕೆಲಸ ಎಂದರೆ ಎಂತಹದ್ದು- ಧೋಬಿ, ಮಾಲಿ, ಊಟ ತಯಾರಿ, ನೀರು ಸರಬರಾಜು, ಶುಚೀಕರಣ, ಟೈಲರಿಂಗ್ ಸಹಿತ ನಾಲ್ಕನೆ ದರ್ಜೆಯ ಉದ್ಯೋಗ. ಇದಕ್ಕೆ ಏಳು ಲಕ್ಷ ಅರ್ಜಿಗಳು ಬಂದವು. ಅರ್ಜಿಹಾಕಿದವರು ಎಂಥ  ವರು- ಎಂಬಿಎ, ಎಮ್‍ಸಿಎ ಹಾಗೂ ಬಿಟೆಕ್-ಇಂಜಿನಿಯರ್‍ಗಳು… ದೇಶ ವನ್ನು ಮುನ್ನಡೆಸುವವರಿಗೆ ಪ್ರಜೆಗಳ ಯೋಗ್ಯತೆಗೆ ತಕ್ಕ ಕೆಲಸವನ್ನು ಕೊಡುವ ತಾಕತ್ತಿಲ್ಲ ಅಂತ ಎಂಬುದಿಲ್ಲಿ ಬಯಲಾಗುವುದಿಲ್ಲವೇ? ಇಷ್ಟು ಮಾತ್ರವೇ..? ಇಂದಿನ ಯುವಜನತೆ ಸಿಕ್ಕ ಕೆಲಸ ಮಾಡಿ  ಹೊಟ್ಟೆ ತುಂಬಿಸುತ್ತೇವೆಂಬಲ್ಲಿಗೆ  ಬಂದು ತಲುಪಿದ್ದು ಬಟಾ ಬಯಲಾ ಗಿದೆ. ಲಕ್ಷಾಂತರ ಸುರಿದು ಇಂಜಿನಿಯರ್ ಕಲಿತದ್ದು.. ಎಂಬಿಎ, ಎಂಸಿಜೆ ಕಲಿತದ್ದು ಇದಕ್ಕೇನಾ…?

ಛತ್ತೀಸ್‍ಗಡದ ವಿಚಾರ ತೆಗೆದು ಕೊಳ್ಳಿ. ಒಂದು ವರದಿಪ್ರಕಾರ ಅಲ್ಲಿ ಸರಕಾರ ಚಪ್ರಾಸಿ ಕೆಲಸಕ್ಕೆ ಅರ್ಜಿ ಆಹ್ವಾನಿಸಿದಾಗ 75,000 ಮಂದಿ  ಅರ್ಜಿ ಹಾಕಿದರು. ಸ್ನಾತಕೋತ್ತರ ಪದವೀಧರರು, ಇಂಜಿನಿಯರ್‍ಗಳು, ಹೀಗೆ ಉನ್ನತ ವ್ಯಾಸಂಗ ಮಾಡಿದವರು ಇದ್ದರು. ಈ ಕೆಲಸಕ್ಕಿರುವ  ತಿಂಗಳ ಸಂಬಳವಾದರೂ ಎಷ್ಟು? ಬರೇ ಹದಿನಾಲ್ಕು ಸಾವಿರ… ಅದರಂತೆ ಉತ್ತರ ಪ್ರದೇಶದಲ್ಲಿ ಚಪ್ರಾಸಿಯ 268 ಕೆಲಸ ಗಳಿಗೆ ಅರ್ಜಿ  ಆಹ್ವಾನಿಸಿದಾಗ 23 ಲಕ್ಷ ಅರ್ಜಿಗಳು ಬಂದವು. ಈ ದೇಶದಲ್ಲಿ ನಿರುದ್ಯೋಗ ಎಂತಹ ಸಮಸ್ಯೆ ಎಂಬುದನ್ನು ಇವೆಲ್ಲ ಬಟಾಬಯಲು ಗೊಳಿಸುತ್ತಿವೆ.

ಜನರು ಈಗ ಬದುಕಿ ಉಳಿಯುವು ದಕ್ಕಾಗಿ ಹೋರಾಡುತ್ತಿದ್ದಾರೆ. ತಮ್ಮ ಅಸ್ತಿತ್ವಕ್ಕಾಗಿ ಅವರ ಹೋರಾಟ-ಸಂಘರ್ಷ ನಡೆಯುತ್ತಿದೆ.  ಮೇಘಾಲಯ ದಲ್ಲಿ ಬಡಮಂದಿ ಜೀವದ ಹಂಗು ತೊರೆದು ದುಡಿದದ್ದು ಹೀಗೆ ತಮ್ಮ ಅಸ್ತಿತ್ವ ಉಳಿಸುವುದಕ್ಕಾಗಿ. ಆದರೆ ಇಂತಹ ಹದಿ ನೈದು ಮಂದಿ ಗಣಿ ಯೊಳಗೆ ಎಂತಹ ಸ್ಥಿತಿಯಲ್ಲಿದ್ದಾರೆಂದು ಅರಿತುಕೊಳ್ಳುವುದಕ್ಕೂ ಕಳೆದ ಮೂರು ವಾರಗಳಲ್ಲಿ ಸಾಧ್ಯವಾಗಿಲ್ಲವಲ್ಲವೇ.

ಇನ್ನೊಮ್ಮೆ ಮೇಘಾಲಯವನ್ನೇ ತೆಗೆದುಕೊಳ್ಳಿ. ಅಲ್ಲಿ 2014ರಲ್ಲಿ ಕಲ್ಲಿದ್ದಲ ಗಣಿಯನ್ನು ನಿಷೇಧಿಸಿ ಆಜ್ಞೆ ಹೊರಡಿಸ ಲಾಯಿತು. ಅದನ್ನು  ಮುಚ್ಚಿಸಬೇಕಾದ ಸರಕಾರ ಮಾತೇ ಆಡಲಿಲ್ಲ. ಕಲ್ಲಿದ್ದಲ ವರಮಾನ, ಒಂದಿಷ್ಟು ಉದ್ಯೋಗ ಎಂಬ ನೀತಿ ಈಗ 100 ಕೋಟಿ ರೂಪಾಯಿ  ದಂಡ ಕಟ್ಟಬೇಕಾದ ಸ್ಥಿತಿಗೆ ಬಂದು ಮುಟ್ಟಿಸಿತು. ಹೌದು  ಈಗಲೂ ಹಲವಾರು ಗಣಿಗಳು ಅಲ್ಲಿ ಕಾರ್ಯಾ ಚರಿಸುತ್ತಿವೆಯಾದ್ದರಿಂದ ಹಸಿರು  ಮಂಡಲಿ ಸರಕಾರದ ವಿರುದ್ಧ ಇಷ್ಟು ದುಬಾರಿ ಮೊತ್ತಕ್ಕೆ ದಂಡಿಸಿದೆ ಎನ್ನುವು ದನ್ನು ಗಮನಿಸಬೇಕಾಗುತ್ತದೆ. 15 ಗಣಿಕಾರ್ಮಿಕರು ಇಲ್ಲಿನ  ಈಸ್ಟ್ ಜಯಂತಿಯ ಹಿಲ್ಸ್‍ನ 370 ಅಡಿ ಆಳದ ಅನಧಿಕೃತ ಗಣಿಯಲ್ಲಿ ಈಗ ಸಿಕ್ಕಿಬಿದ್ದಿದ್ದಾರೆ. ಆದರೆ ಇದ್ಯಾವುದು ಇಂದು ಮಾಧ್ಯಮಗಳಲ್ಲಿ ಕೂಡ ಚರ್ಚೆಯಾಗು ತ್ತಿಲ್ಲ. ಚರ್ಚೆಯಾಗುತ್ತಿರುವುದೆಲ್ಲ ಭಾವನಾತ್ಮಕ ವಿಷಯಗಳು…  ನಂಬಿಕೆಗಳಿಗೆ ಸಂಬಂಧಿಸಿದ್ದು. ಜನರು ಬದುಕಿ ಉಳಿದ ಮೇಲಷ್ಟೇ ಈ ಭಾವನೆಗಳೆಲ್ಲ ಅಂತ ಸರಕಾರ ಯಾಕೆ ಯೋಚಿಸುವುದಿಲ್ಲವೋ  ಅರ್ಥವೂ ಆಗುವುದಿಲ್ಲ.

ಮೊದಲು ಬದುಕಿ ಉಳಿಯಲು ನೋಡೋಣ, ಮತ್ತೆ ನಂಬಿಕೆ ವಿಶ್ವಾಸ ಇತ್ಯಾದಿ ಚರ್ಚೆಗಿಂತ ಈಗ ಜನರಿಗೆ ಕೆಲಸದ ಬಗ್ಗೆ ಉದ್ಯೋಗ ಕೊಡುವ ಬಗ್ಗೆ ಮತ್ತು ಉದ್ಯೋಗ ಸಾಧ್ಯತೆಯ ಬಗ್ಗೆ ಪರಿಹಾರ ಆಗಬೇಕು. ಹೌದು ಸುಮಾರು 250 ವರ್ಷ ಹಿಂದೆ  ಭಾರತ ವಿಶ್ವ ವ್ಯಾಪಾರ ದಲ್ಲಿ ಭಾರತ ಶೇ. 27ರಷ್ಟು ನಿಯಂತ್ರಣ ಸಾಧಿಸಿತ್ತು. ಇದನ್ನೆಲ್ಲ ದಾದಾ ಭಾಯಿ ನವರೋಜಿಯವರ ಪಾವರ್ಟಿ  ಬ್ರಿಟಿಷ್ ರೂಲ್ ಇನ್ ಇಂಡಿಯ ಪುಸ್ತಕದಲ್ಲಿ ದಾಖಲಿಸುತ್ತಾರೆ. ದೇಶದ ಸುಭಿಕ್ಷೆಗೆ ಉದ್ಯೋಗ ಮುಖ್ಯವಾಗುತ್ತದೆ. ಗತ ವೈಭವ ಅಂತ ಬಾಯಿಯಲ್ಲಿ ಹೇಳಿ ಕೂತರಾಗುತ್ತಾ? ಸರಕಾರದ ಕೆಲವು ನಿರ್ಧಾರಗಳು ಜನರಿಂದ ಉದ್ಯೋಗ ವನ್ನೇ ಕಸಿದು ಹಾಕುತ್ತದೆ. ದೇಶದ ಅಭಿವೃದ್ಧಿ  ಜನರ ಶ್ರಮದಲ್ಲಿದೆ, ನಂಬಿಕೆಯಲ್ಲಲ್ಲ. ಅದರೊಂದಿಗೆ ಆಟವಾಡುವು ದರಲ್ಲ ಎಂದು ಸರಕಾರಗಳು ತಿಳಿಯಬೇಕು. ಈ ಸತ್ಯ ಪ್ರಜೆಗಳಿಗೂ ತ್ವರಿತವಾಗಿ ಮನದಟ್ಟಾಗಬೇಕಿದೆ.