ಮಧ್ಯಪ್ರಾಚ್ಯ ಬಿಕ್ಕಟ್ಟಿನಲ್ಲಿ ದ್ವಿರಾಷ್ಟ್ರ ಸೂತ್ರ ಸ್ವೀಕರಿಸುವೆ: ಬೈಡನ್

0
155

ಸನ್ಮಾರ್ಗ ವಾರ್ತೆ

ವಾಷಿಂಗ್ಟನ್: ಮಧ್ಯಪ್ರಾಚ್ಯದ ಸಮಸ್ಯೆ ಪರಿಹಾರದಲ್ಲಿ ದ್ವಿರಾಷ್ಟ್ರ ಸೂತ್ರ ಅಂಗೀಕರಿಸುವೆ ಎಂದು ಅಮೆರಿಕ ಸರಕಾರ ಹೇಳಿದೆ. ವಿಶ್ವ ಸಂಸ್ಥೆಯ ಅಮೆರಿಕ ಪ್ರತಿನಿಧಿ ರಿಚರ್ಡ್ ಮಿಲ್ಸ್ ತಿಳಿಸಿದ್ದಾರೆ. ಘರ್ಷಣೆ ಕೊನೆಗೊಳಿಸಲು ದ್ವಿರಾಷ್ಟ್ರ ಫಾರ್ಮುಲ ಒಂದೇ ದಾರಿ ಇರುವುದು ಎಂದು ಜೋ ಬೈಡನ್ ಭಾವಿಸಿದ್ದಾರೆ ಎಂಧು ವೈಟ್ ಹೌಸ್ ಮಾಧ್ಯಮ ಕಾರ್ಯದರ್ಶಿ ಜೆನ್ ಸಾಕಿ ಹೇಳಿದರು.

ಫೆಲೆಸ್ತೀನಿನೊಂದಿಗೆ ಉತ್ತಮ ಸಂಬಂಧವನ್ನು ಸ್ಥಾಪಿಸಲು ಬೈಡನ್ ಬಯಸಿದ್ದು, ಅದರ ಭಾಗವಾಗಿ ಟ್ರಂಪ್ ಸರಕಾರ ನಿಲ್ಲಿಸಿದ್ದ ರಾಜತಾಂತ್ರಿಕ ಸಂಬಂಧವನ್ನು ಪುನರಾರಂಭಿಸುವುದಾಗಿ ಅವರು ತಿಳಿಸಿದರು.

ಟ್ರಂಪ್ ಸರಕಾರ ನಿಲ್ಲಿಸಿದ್ದ ಫೆಲೆಸ್ತೀನಿನ ಮಾನವೀಯ ಸಹಾಯ ಆರ್ಥಿಕ ಸಹಕಾರವನ್ನು ಮತ್ತೆ ಅರಂಭಿಸಲಾಗುವುದು. ಡೊನಾಲ್ಡ್ ಟ್ರಂಪ್ ಇಸ್ರೇಲಿನೊಂದಿಗೆ ಸಂಬಂಧವನ್ನು ಉಳಿಸಿಕೊಂಡು ಫೆಲೆಸ್ತೀನನ್ನು ಕಡೆಗಣಿಸಿದರು. ಫೆಲೆಸ್ತೀನಿನ ವಿರೋಧವನ್ನು ಕಡೆಗಣಿಸಿ ಅಮೆರಿಕದ ದೂತವಾಸವನ್ನು ಟೆಲ್‍ಅವೀವ್‍ನಿಂದ ಜರುಸಲೇಂಗೆ ಸ್ಥಳಾಂತರಿಸಿದ್ದರು. ಆದರೆ ಫೆಲೆಸ್ತೀನ್ ವಿಷಯದಲ್ಲಿ ಹಿಂದಿನ ಡೆಮೊಕ್ರಾಟಿಕ್ ಅಧ್ಯಕ್ಷರ ದಾರಿಯಲ್ಲಿ ಸಾಗಲು ಬೈಡನ್ ನಿರ್ಧರಿಸಿದ್ದಾರೆ.

ಇಸ್ರೇಲ್ ಸರಕಾರದೊಂದಿಗೆ ಸೌಹಾರ್ದ ಮುಂದುವರಿಸಲು ಅವರು ಬಯಸಿದ್ದು ಜೆರುಸಲೇಂನಿಂದ ದೂತವಾಸ ಬದಲಿಸುವ ಯೋಜನೆ ಬೈಡನ್‍ಗಿಲ್ಲ. ಇಸ್ರೇಲಿನ ವಿರುದ್ಧ ನಿರಂತರ ಕ್ರಮ ತೆಗೆದುಕೊಳ್ಳಲಾಗುತ್ತಿದೆ . ಇದು ಪಕ್ಷಪಾತ ಎಂದು ಆರೋಪಿಸಿ ಅಮೆರಿಕದ ಮಾನವ ಹಕ್ಕು ಕೌನ್ಸಿಲ್ ನಿಂದ ಟ್ರಂಪ್ ಸರಕಾರ ಹಿಂದೆ ಸರಿದಿತ್ತು. ಈ ತೀರ್ಮಾನವನ್ನು ಬೈಡನ್ ಮರುಪರಿಶೀಲಿಸಲಿದ್ದಾರೆ.