ಫೆಲೆಸ್ತೀನಿನೊಂದಿಗೆ ಉತ್ತಮ ಸಂಬಂಧ ಬಯಸಿದ ಜೋ ಬೈಡನ್

0
376

ಸನ್ಮಾರ್ಗ ವಾರ್ತೆ

ವಾಷಿಂಗ್ಟನ್: ಇಸ್ರೇಲ್ ಹಾಗೂ ಫೆಲೆಸ್ತೀನಿನೊಂದಿಗೂ ಉತ್ತಮ ಸಂಬಂಧವನ್ನು ಹೊಂದಲು ಅಮೆರಿಕ ಬಯಸುತ್ತಿದೆ ಎಂದು ಅಮೆರಿಕದ ನೂತನ ಅಧ್ಯಕ್ಷ ಜೋ ಬೈಡನ್ ಸರಕಾರ ಹೇಳಿದೆ.

ಈ ವಿಷಯವನ್ನು ವಿಶ್ವಸಂಸ್ಥೆಯಲ್ಲಿ ಅಮೆರಿಕದ ಪ್ರತಿನಿಧಿಯಾಗಿರುವ ರಿಚರ್ಡ್ ಮಿಲ್ಸ್ ಹೇಳಿದ್ದಾರೆ.

ಫೆಲೆಸ್ತೀನಿನಲ್ಲಿ ರಾಜತಾಂತ್ರಿಕ ಕಚೇರಿ ಸ್ಥಾಪಿಸಲು ಸಿದ್ಧ. ಫೆಲೆಸ್ತೀನಿ ಜನರ ಆರ್ಥಿಕ ಅಭಿವೃದ್ಧಿ, ಮಾನಸಿಕ ಸಹಾಯಕ್ಕೆ ಬೇಕಾದ ಯೋಜನೆಗಳ ಮರು ಸ್ಥಾಪನೆ ಬಯಸುವುದಾಗಿ ರಿಚರ್ಡ್ ತಿಳಿಸಿದರು.

ಟ್ರಂಪ್ ಸರಕಾರ ಕೊನೆಗೊಳಿಸಿದ್ದ ಫೆಲೆಸ್ತೀನಿನೊಂದಿಗಿನ ರಾಜತಾಂತ್ರಿಕ ಕಾರ್ಯಕ್ರಮಗಳನ್ನು ಪುನರಾರಂಭಿಸಲು ಬೈಡನ್ ಸರಕಾರ ಕ್ರಮ ಕೈಗೊಳ್ಳುತ್ತಿದೆ. ಜೊತೆಗೆ ಫೆಲೆಸ್ತೀನಿಗೆ ಆರ್ಥಿಕ ಸಹಾಯ ನೀಡುವುದನ್ನು ಮರು ಆರಂಭಿಸುವುದಕ್ಕೂ ಅಮೆರಿಕ ಯೋಜನೆ ರೂಪಿಸುತ್ತಿದೆ.

2018ರಲ್ಲಿ ಫೆಲೆಸ್ತೀನಿಗೆ 200 ಮಿಲಿಯನ್ ಡಾಲರ್ ಸಹಾಯವನ್ನು ಟ್ರಂಪ್ ಸರಕಾರ ಕಡಿತಗೊಳಿಸಿತ್ತು. ಟ್ರಂಪ್‍ರ ವಿವಾದಿತ ಶತಮಾನದ ಒಪ್ಪಂದವನ್ನು ಒಪ್ಪಿಕೊಳ್ಳುವಂತೆ ಮಾಡಲು ಆರ್ಥಿಕ ಸಹಾಯವನ್ನು ಅವರು ಕಡಿತಗೊಳಿಸಿ ಒತ್ತಡ ಹಾಕಲು ಯತ್ನಿಸಿದ್ದರು.