ಅಧಿಕಾರ ಹಸ್ತಾಂತರಕ್ಕೆ ಟ್ರಂಪ್ ಅಡ್ಡಿಪಡಿಸುತ್ತಿದ್ದಾರೆ- ಜೊ ಬೈಡನ್

0
219

ಸನ್ಮಾರ್ಗ ವಾರ್ತೆ

ವಾಷಿಂಗ್ಟನ್,ಡಿ.30: ಅಧ್ಯಕ್ಷ ಸ್ಥಾನ ವಹಿಸಿಕೊಳ್ಳಲು ದಿನಗಳಷ್ಟೇ ಇರುವಾಗಲೂ ಅಧಿಕಾರ ಹಸ್ತಾಂತರಿಸಲು ಟ್ರಂಪ್ ತಂಡ ಅಡೆತಡೆಗಳನ್ನೊಡ್ಡುತ್ತಿದೆ. ಸುಗಮ ಅಧಿಕಾರ ಹಸ್ತಾಂತರಕ್ಕೆ ಅನುವು ಮಾಡಿಕೊಡುವುದಿಲ್ಲ ಎಂದು ನಿಯೋಜಿತ ಅಮೆರಿಕ ಅಧ್ಯಕ್ಷ ಜೊ ಬೈಡನ್ ಹೇಳಿದ್ದಾರೆ. ನ್ಯಾಶನಲ್ ಸೆಕ್ಯೂರಿಟಿ ಆಂಡ್ ಫಾರಿನ್ ಪಾಲಿಸಿ ಏಜೆನ್ಸಿ ಟೀಮ್ ಸದಸ್ಯರೊಂದಿಗೆ ಬೈಡನ್ ನಡೆಸಿದ ವಚ್ರ್ಯುವಲ್ ಮೀಟಿಂಗ್‍ನಲ್ಲಿ ತನ್ನ ದೂರನ್ನು ಅವರು ಹೇಳಿಕೊಂಡಿದ್ದಾರೆ.

ಕಳೆದ ನವೆಂಬರ್ 23ಕ್ಕೆ ಅಧಿಕಾರ ಹಸ್ತಾಂತರಕ್ಕೆ ಟ್ರಂಪ್ ಸರಕಾರ ಅನುಮತಿ ನೀಡಿತ್ತು. ಚುನಾವಣೆಯಲ್ಲಿ ಮೋಸ ನಡೆದಿದೆಯೆಂದು ಆರೋಪಿಸಿ ಅಧಿಕಾರ ಹಸ್ತಾಂತರಕ್ಕೆ ಅವರು ನಿರಾಕರಿಸಿದ್ದರು. ಈಗಲೂ ಅಧಿಕಾರ ಹಸ್ತಾಂತರ ಪ್ರಕ್ರಿಯೆ ತಡವಾಗುತ್ತಿದೆ ಎಂದು ಬೈಡನ್ ಬೆಟ್ಟು ಮಾಡಿದ್ದಾರೆ.

ಎಲ್ಲ ಕೋರ್ಟುಗಳು ಟ್ರಂಪ್‍ರ ಚುನಾವಣಾ ತಕರಾರು ಕೇಸುಗಳಿಗೆ ಮುಖ ತಿರುಗಿಸಿವೆ. ಜನವರಿ ಆರಕ್ಕೆ ನಡೆಯುವ ಇಲೆಕ್ಟ್ರಾಲ್ ಮತಗಳನ್ನು ಎಣಿಸಿ ಬೈಡನ್ ವಿಜಯವನ್ನು ಅಧಿಕೃತವಾಗಿ ಘೋಷಿಸುವ ಅಮೆರಿಕ ಕಾಂಗ್ರೆಸ್‍ನ ಮೀಟಿಂಗ್‌ನಲ್ಲಿ ಪ್ರಜಾಪ್ರಭುತ್ವ ಶಿಷ್ಟಾಚಾರಗಳನ್ನು ಉಲ್ಲಂಘಿಸುವುದಕ್ಕೆ ಟ್ರಂಪ್ ಶ್ರಮಿಸುತ್ತಿದ್ದಾರೆ ಎಂದು ಬೈಡನ್ ಹೇಳಿದರು. ಜನವರಿ 20ಕ್ಕೆ ನಡೆಯುವ ಅಧಿಕಾರ ಹಸ್ತಾಂತರ ಕಾರ್ಯಕ್ರಮಕ್ಕೆ ಮೊದಲೇ ಯುಎಸ್ ಹೌಸ್, ಸೆನೆಟ್ ಜಂಟಿಯಾಗಿ ವಿಜಯಿಯನ್ನು ಘೋಷಿಸಬೇಕಾಗಿದೆ. ಇದುವರೆಗೆ ಟ್ರಂಪ್ ಸೋಲನ್ನು ಬಹಿರಂಗವಾಗಿ ಒಪ್ಪಿಕೊಳ್ಳದ ಹಿನ್ನೆಲೆಯಲ್ಲಿ ಜನವರಿ ಆರಕ್ಕೆ ಏನು ಸಂಭವಿಸುತ್ತದೆ ಎಂದು ಕಾದು ನೋಡಬೇಕಾಗಿದೆ.