ಬಿಹಾರ ಚುನಾವಣೆ: ಜೆಡಿಯುವನ್ನು ಹಿಂದಕ್ಕಿ ಮುನ್ನಡೆ ಸಾಧಿಸಿದ ಬಿಜೆಪಿ

0
360

ಸನ್ಮಾರ್ಗ ವಾರ್ತೆ

ಪಾಟ್ನ,ನ.11: ಬಿಹಾರದ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿ ಮಿತ್ರಪಕ್ಷ ಜೆಡಿಯುವನ್ನು ಹಿಂತಳ್ಳಿ ಮುನ್ನಡೆ ಸಾಧಿಸಿದೆ. ಆದರೂ ಮುಖ್ಯಮಂತ್ರಿ ಸ್ಥಾನವನ್ನು ನಿತೀಶ್ ಕುಮಾರ್‌ಗೆ ಕೊಡಲೇ ಬೇಕಾದ ಅನಿವಾರ್ಯತೆ ಬಿಜೆಪಿಯ ಮುಂದಿದೆ. ಜೆಡಿಯು ಮತ್ತು ಬಿಜೆಪಿ ಒಟ್ಟು 225 ಸ್ಥಾನ ಪಡೆದು ಸ್ಪಷ್ಟ ಬಹುಮತ ಗಳಿಸಿದೆ. ಬಿಜೆಪಿ 74 ಸ್ಥಾನಗಳಿಸಿದರೆ ಜೆಡಿಯು 43 ಸ್ಥಾನಕ್ಕೆ ಕುಸಿದಿದೆ. ಜೆಡಿಯುವನ್ನು ತೀವ್ರವಾಗಿ ವಿರೋಧಿಸಿದ ಚಿರಾಗ್ ಪಾಸ್ವಾನ್ ಒಂದು ಸ್ಥಾನವನ್ನು ಮಾತ್ರ ಗೆದ್ದುಕೊಂಡಿದ್ದಾರೆ. ಆದರೆ ಇದು ಬಿಜೆಪಿಯ ಮುನ್ನಡೆಗೆ ಕಾರಣವೂ ಆಗಿದೆ. ಜೆಡಿಯು ವಿರುದ್ಧ ಅವರು ಸ್ಪರ್ಧಿಸಿದ್ದು ಕೂಡ ಜೆಡಿಯು ಗೆಲುವಿನ ಸಂಖ್ಯೆ ಕಡಿಮೆಯಾಗಲು ಕಾರಣವೆನ್ನಲಾಗುತ್ತಿದೆ. ಈ ನಿಟ್ಟಿನಲ್ಲಿ ಚಿರಾಗ್‍ಗೆ ಕೇಂದ್ರದಲ್ಲಿ ಅವರ ತಂದೆಯ ನಿಧನದಿಂದಾಗಿ ತೆರವಾದ ಸಚಿವ ಸ್ಥಾನ ಸಿಗಬಹುದು ಎಂದೂ ಹೇಳಲಾಗುತ್ತಿದೆ.

ಆರ್‌ಜೆಡಿ, ಕಾಂಗ್ರೆಸ್ ಎಡಪಕ್ಷಗಳು ಸಖ್ಯ ಕೇವಲ 110 ಸೀಟುಗಳಿಗೆ ಸೀಮಿತವಾಗಿದೆ. ಹದಿನೈದು ಗಂಟೆಗಳ ಕಾಲ ಮತ ಎಣಿಕೆ ಪ್ರಕ್ರಿಯೆ ನಡೆದಿತ್ತು. ಬುಧವಾರ ಬೆಳಗ್ಗಿನವರೆಗೆ ಸುದೀರ್ಘಗೊಂಡ ಮತ ಎಣಿಕೆಯ ವಿರುದ್ಧ ಆರ್‌ಜೆಡಿ ನೇತೃತ್ವದ ಮಹಾ ಸಖ್ಯ ದೂರು ನೀಡಿದೆ. ಆರ್‌ಜೆಡಿ 75 ಸ್ಥಾನಗಳಲ್ಲಿ ಗೆದ್ದಿದೆ. ಬಿಜೆಪಿಗಿಂತ ಒಂದು ಸ್ಥಾನ ಹೆಚ್ಚು ಪಡೆದುಕೊಂಡಿದೆ. ಇದೇ ವೇಳೆ ಜೆಡಿಯು ಚುನಾವಣಾ ಅಕ್ರಮ ನಡೆದಿದೆ ಎಂದು ಚುನಾವಣಾ ಆಯೋಗಕ್ಕೆ ದೂರು ನೀಡಿದೆ.
ಆರ್‌ಜೆಡಿ, ಜೆಡಿಯು ಅಧಿಕಾರ ಹಿಡಿಯುತ್ತಿದ್ದ ಕೇಂದ್ರದಲ್ಲಿ ಬಿಜೆಪಿಗೆ ಅರಳಲು ಸಾಧ್ಯವಾಗಿದ್ದು ದೊಡ್ಡ ವಿಷಯವಾಗಿ ಪರಿಗಣಿಸಲಾಗಿದೆ.

ಘಟಕ ಪಕ್ಷಗಳ ಆಧಾರದಿಂದ ಮುಕ್ತವಾಗಿ ಏಕ ಪಕ್ಷವಾಗಿ ಸರಕಾರ ರಚಿಸಲು ಬಯಸುವ ಬಿಜೆಪಿ ಎಷ್ಟು ಕಾಲ ನಿತೀಶ್‍ರನ್ನು ಸಹಿಸೀತು ಎನ್ನುವುದು ಕುತೂಹಲದ ವಿಷಯವಾಗಿದೆ. ಶಿರೋಮಣಿ ಅಕಾಲಿದಳ ಮತ್ತು ಶಿವಸೇನೆ ಬಿಜೆಪಿಯ ಉದ್ದೇಶವನ್ನು ಅರಿತೇ ಬಿಜೆಪಿಯಿಂದ ದೂರವಾಗಿತ್ತು. ತಮಿಳ್ನಾಡಿನಲ್ಲಿ ಬಿಜಪಿಯೊಂದಿಗಿರುವ ಅಣ್ಣಾಡಿಎಂಕೆ ಬಿಜೆಪಿಯ ಕೆಲವು ನಿಲುಗಳಿಗೆ ಬಹಿರಂಗವಾಗಿ ಅತೃಪ್ತಿ ವ್ಯಕ್ತಪಡಿಸಿತ್ತು. ಬಿಜೆಪಿ ತಮ್ಮ ಪಾರ್ಟಿಯ ಸ್ಥಾಪಕ ನಾಯಕ ಎಂಜಿ ಆರ್‌ರ ಚಿತ್ರವನ್ನು ಪ್ರಚಾರಕ್ಕೆ ಬಳಸಿದ್ದನ್ನು ಅದು ವಿರೋಧಿಸಿತ್ತು.