ಬಿಹಾರದಲ್ಲಿ ಪಾಸ್ವಾನ್‍ರ ಲೋಕ್‍ ಜನಶಕ್ತಿ ಪಾರ್ಟಿ ಇಬ್ಭಾಗ: ಆರು ಸಂಸದರಲ್ಲಿ ಮೂವರೂ ಪಾಸ್ವಾನ್ ಕುಟುಂಬಸ್ಥರು

0
192

ಪಾಟ್ನ, ಜೂ.14: ಕೇಂದ್ರ ಸಚಿವ ರಾಮ್ ವಿಲಾಸ್ ಪಾಸ್ವಾನ್ ಅಧ್ಯಕ್ಷರಾಗಿರುವ ಲೋಕ್‍ ಜನಶಕ್ತಿ ಪಾರ್ಟಿ ಬಿಹಾರದಲ್ಲಿ ಇಬ್ಭಾಗವಾಗಿದೆ. ಹಿರಿಯ ನಾಯಕಿ ಹಾಗೂ ಪ್ರಧಾನ ಕಾರ್ಯದರ್ಶಿ ಸತ್ಯನಾಥ್ ಶರ್ಮ ಅವರ ಬೆಂಬಲಿಗರಾದ ಪಾರ್ಟಿಯ ಪದಾಧಿಕಾರಿಗಳು ರಾಜೀನಾಮೆ ನೀಡಿ ಲೋಕ್ ಜನಶಕ್ತಿ ಸೆಕ್ಯುಲರ್ ಪಾರ್ಟಿ ಸ್ಥಾಪಿಸಿದ್ದಾರೆ. ಪಾಸ್ವಾನ್ ಸ್ವಜನ ಪಕ್ಷಪಾತಿ. ಅವರು ತಮ್ಮ ಕುಟುಂಬ ಸದಸ್ಯರನ್ನು ಬೆಳೆಸುತ್ತಿದ್ದಾರೆ ಎಂದು ಆರೋಪಿಸಿ ಶರ್ಮ ಪಾರ್ಟಿ ತೊರೆದಿದ್ದಾರೆ. ಎನ್‍ಡಿಎಯ ಸಖ್ಯ ಪಕ್ಷವಾಗಿ ಲೋಕಸಭಾ ಚುನಾವಣೆಯಲ್ಲಿ ಎಲ್‍ಜೆಪಿ ಬಿಹಾರದಲ್ಲಿ ಸ್ಪರ್ಧಿಸಿದ ಆರು ಲೋಕಸಭಾ ಕ್ಷೇತ್ರಗಳಲ್ಲಿ ಜಯಭೇರಿ ಬಾರಿಸಿತ್ತು. ಇವರಲ್ಲಿ ಇಬ್ಬರು ಪಾಸ್ವಾನ್ ಸಹೋದರರು ಮತ್ತು ಓರ್ವ ಪಾಸ್ವಾನ್‍ರ ಪುತ್ರ. ಒಟ್ಟು ಮೂರು ಮಂದಿ ಪಾಸ್ವಾನ್ ಕುಟುಂಬ ಸದಸ್ಯರು ಸಂಸದರಾಗಿ ಆಯ್ಕೆಯಾಗಿದ್ದಾರೆ.

LEAVE A REPLY

Please enter your comment!
Please enter your name here