30 ವರ್ಷಗಳಲ್ಲಿ 3 ಕಿ.ಮೀ ಕಾಲುವೆ ತೋಡಿದ ರೈತನಿಗೆ ಟ್ರಾಕ್ಟರ್ ಉಡುಗೊರೆ

0
313

ಸನ್ಮಾರ್ಗ ವಾರ್ತೆ

ಗಯ(ಬಿಹಾರ),ಸೆ.20: ಕೃಷಿ ನೀರಾವರಿಗಾಗಿ ಗುಡ್ಡದ ಮೇಲಿನಿಂದ ಮಳೆ ನೀರು ಗ್ರಾಮಕ್ಕೆ ತರುವ ಉದ್ದೇಶದಲ್ಲಿ ಒಬ್ಬರೇ 30 ವರ್ಷ ಅಗೆದು ಮೂರು ಕಿಲೊಮೀಟರ್ ಕಾಲುವೆ ನಿರ್ಮಿಸಿದ ರೈತರೊಬ್ಬರಿಗೆ ಟ್ರಾಕ್ಟರ್ ಉಡುಗೊರೆಯಾಗಿ ನೀಡಲಾಗಿದೆ. ಈ ಸಾಹಸದ ಮೆರೆದ ರೈತನ ಹೆಸರು ಬಿಹಾರದ ಗಯ ಜಿಲ್ಲೆಯ ಲೊಂಕಿ ಭುಯಾನ್. ಟ್ರಾಕ್ಟರ್ ಉಡುಗೊರೆಯನ್ನು ಆನಂದ್ ಮಹೀಂದ್ರ ಕಂಪೆನಿ ಕೊಟ್ಟಿದೆ.

ಲೋಂಕಿ ಭುಯಾನ್‍ರ ಸಾಹಸದ ಕುರಿತ ಟ್ವೀಟ್‌ಅನ್ನು ಆನಂದ ಮಹೀಂದ್ರ ನೋಡಿದರು. ಅವರ ಸಾಹಸಕ್ಕೆ ತಲೆದೂಗಿ ಆನಂದ ಮಹೀಂದ್ರರು ಈ ಉಡುಗೊರೆ ನೀಡಿದರು.

ಭುಯಾನ್‍ರ ಸಾಹಸಿಕ ಕಾರ್ಯವನ್ನು ನೋಡಲು ಸಾಧ್ಯವಾಗಿದ್ದು ಮತ್ತು ಅವರಿಗೆ ಟ್ರಾಕ್ಟರ್ ಕೊಡಲು ಸಾಧ್ಯವಾಗಿದ್ದು ಭಾಗ್ಯವೆಂದು ತಿಳಿದಿದ್ದೇನೆ ಎಂದು ಆನಂದ ಮಹೀಂದ್ರ ಹೇಳಿದ್ದಾರೆ ಎಂದು ಸ್ಥಳೀಯ ಆನಂದ ಮಹೀಂದ್ರ ಕಂಪೆನಿಯ ಡೀಲರ್ ಸಿದ್ಧಾರ್ಥ ವಿಶ್ವಕರ್ಮ ಹೇಳಿದ್ದಾರೆ.

ಲೋಂಕಿ ಭುಯಾನ್ ಟ್ರಾಕ್ಟರ್‌ನೊಂದಿಗೆ ನಿಂತಿರುವ ಫೋಟೊದೊಂದಿಗಿನ ಮೇಲ್ ತನಗೆ ಲಭಿಸಿದೆ. ಈ ಕ್ಷಣದ ಭಾಗವಾಗಲು ತನಗೆ ಭಾಗ್ಯ ಲಭಿಸಿತು. ಲೋಂಕಿ ಭುಯಾನ್‍ರಂತಹ ಜನರು ಬದುಕುತ್ತಿರುವ ಗಯದ ಊರಿನವ ಎನ್ನಲು ನನಗೆ ಸಂತೋಷವಾಗುತ್ತಿದೆ ಎಂದು ಸಿದ್ಧಾರ್ಥ ವಿಶ್ವಕರ್ಮ ಹೇಳಿದರು.

ತಾನು ಇಂದಿನವರೆಗೂ ಸಂತೋಷವಾಗಿಯೇ ಇದ್ದೇನೆ. ಇಂತಹದೊಂದು ಟ್ರಾಕ್ಟರ್ ನನಗೆ ಸಿಗುತ್ತದೆ ಎಂದು ಕನಸ್ಸಿನಲ್ಲಿಯೂ ಊಹಿಸಿರಲಿಲ್ಲ ಎಂದು ಲೋಂಕಿ ಭಯಾನ್ ಹೇಳಿದರು.

ಓದುಗರೇ, ಸನ್ಮಾರ್ಗ ಫೇಸ್‌ಬುಕ್ ಪೇಜ್‌ನ್ನು ಲೈಕ್ ಮಾಡುವ ಮೂಲಕ ನಮ್ಮನ್ನು ಬೆಂಬಲಿಸಿ.