ಬಿಹಾರ: 1204 ಅಭ್ಯರ್ಥಿಗಳ ಭವಿಷ್ಯ ನಿರ್ಧಾರ ಇಂದು

0
429

ಸನ್ಮಾರ್ಗ ವಾರ್ತೆ

ಪಾಟ್ನ,ನ.7: ಬಿಹಾರದ ವಿಧಾನಸಭೆ ಚುನಾವಣೆಯ ಕೊನೆಯ ಮತ್ತು ಮೂರನೇ ಹಂತದ ಮತದಾನ ಆರಂಭವಾಗಿದೆ. ಕೊಸಿ-ಸೀಮಾಂಚಲ ವಲಯ ಎಂದು ಕರೆಯುವ ಉತ್ತರ ಬಿಹಾರದ 19 ಜಿಲ್ಲೆಗಳಲ್ಲಿ 78 ಕ್ಷೇತ್ರಗಳಲ್ಲಿ ಶನಿವಾರ ಬೆಳಗ್ಗಿನಿಂದ ಮತದಾನ ಶುರುವಾಗಿದೆ.

ಸ್ಪೀಕರ್ ವಿಜಯ ಕುಮಾರ ಚೌಧರಿ, 12 ಸಚಿವರು ಸಹಿತ 1204 ಅಭ್ಯರ್ಥಿಗಳು ಇಂದು ಜನರ ತೀರ್ಪು ಯಾಚಿಸುತ್ತಿದ್ದಾರೆ. 2.35 ಕೋಟಿ ಮತದಾರರು ಮತಗಟ್ಟೆಗೆ ಬರಲಿದ್ದಾರೆ. ಮೂರನೇ ಹಂತದಲ್ಲಿ ಅತೀ ಹೆಚ್ಚು ಆರ್‍ಜೆಡಿಯ 46 ಅಭ್ಯರ್ಥಿಗಳು ಕಣದಲ್ಲಿದ್ದಾರೆ.

ಈ ತಿಂಗಳು 10 ತಾರೀಕಿಗೆ ಮತ ಎಣಿಕೆ ನಡೆಯಲಿದೆ. ಆಡಳಿತ ವಿರೋಧಿ ಅಲೆಯನ್ನು ಮೀರಿ ನಿಲ್ಲಲು ಹದಿನೈದು ವರ್ಷಗಳಿಂದ ಅಧಿಕಾರದಲ್ಲಿರುವ ನಿತೀಶ್ ಕುಮಾರ್ ಸಚಿವ ಸಂಪುಟಕ್ಕೆ ಸಾಧ್ಯವಾಗಬಹುದೇ ಎಂಬುದನ್ನು ಚುನಾವಣೆ ನಿರ್ಧರಿಸಲಿದೆ. ನಿತೀಶ್‍ರನ್ನು ಸೋಲಿಸಲು ಆರ್‍ಜೆಡಿ ಮಹಾಸಖ್ಯ ಪಣತೊಟ್ಟಿದೆ.