ಬಿಜೆಪಿಗೆ ಪ್ರವೇಶವಿಲ್ಲ ಎಂದು ಪೋಸ್ಟರ್ ಹಾಕಿದ ರೈತರು: ಸಾಮಾಜಿಕ ಜಾಲತಾಣಗಳಲ್ಲಿ ವೈರಲ್

0
353

2019ರ ಲೋಕಸಭಾ ಚುನಾವಣೆಯು ಬಿಜೆಪಿಯ ಪಾಲಿಗೆ ಕಠಿಣ ಪರೀಕ್ಷೆಯಾಗುವ ಸಾಧ್ಯತೆಯನ್ನು ಈ ಪೋಸ್ಟರ್ ಸೂಚಿಸುವಂತಿದೆ. ಉತ್ತರಪ್ರದೇಶದ ಅಂರೊಹ್ ಜಿಲ್ಲೆಯ ರಸುಲ್ಪುರ್ ಗ್ರಾಮದ ರೈತರು ಈ ಪೋಸ್ಟರನ್ನು ಹಾಕಿದ್ದಾರೆ. “ಗ್ರಾಮಕ್ಕೆ ಬಿಜೆಪಿಗರಿಗೆ ಪ್ರವೇಶವಿಲ್ಲ” ಎಂದು ಸಾರುವ ಈ ಪೋಸ್ಟರ್ ನ ಬಗ್ಗೆ ಹಿಂದಿ ಪತ್ರಿಕೆಗಳು ಸುದ್ದಿ ಮಾಡಿವೆ.

ಇತ್ತೀಚೆಗೆ ಹರಿದ್ವಾರದಿಂದ ದೆಹಲಿಗೆಂದು ಹೊರಟ ರೈತರ ಬೃಹತ್ ರಾಲಿಯನ್ನು ದಿಲ್ಲಿಗೆ ಹೋಗಗೊಡದೆ, ಗಾಜಿಯಾಬಾದ್ ನಲ್ಲೆ ತಡೆದ ಬಿಜೆಪಿ ಸರಕಾರವು, ರೈತರ ಮೇಲೆ ಲಾಠಿಚಾರ್ಜ್ ಮತ್ತು ಜಲಫಿರಂಗಿಯನ್ನು ಬಳಸಿ ಬಲವಂತದಿಂದ ಮಟ್ಟ ಹಾಕಲು ಪ್ರಯತ್ನಿಸಿತ್ತು. ಇದು ರೈತ ಸಮುದಾಯವನ್ನು ತೀವ್ರವಾಗಿ ಕೆರಳಿಸಿತ್ತು.

ಸರಕಾರದ ಈ ರೈತವಿರೋಧಿ ನೀತಿಯನ್ನು ಖಂಡಿಸಿ ರೈತರು ಈ ಪೋಸ್ಟರನ್ನು ಹಾಕಿದ್ದಾರೆ.
ಕಿಸಾನ್ ಏಕ್ತಾ ಜಿಂದಾಬಾದ್. ಬಿಜೆಪಿ ವಾಲೊಂಕೋ ಇಸ್ ಗಾಂವ್ ಮೆ ಆನಾ ಸಖ್ತ್ ಮನಾ ಹೆ. ಜಾನ್ ಮಾಲ್ ಕಿ ರಕ್ಷಾ ಸ್ವಯಂ ಕರೇ. ಕಿಸಾನ್ ಏಕ್ತಾ ಜಿಂದಾಬಾದ್ ಎಂದು ಪೋಸ್ಟರ್ ನಲ್ಲಿ ಬರೆಯಲಾಗಿದೆ.
ಇದು ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕ ಹಂಚಿಕೆಯಾಗಿದ್ದು, ವೈರಲ್ ಆಗಿದೆ. ಅಲ್ಲದೆ,

ಇದರಿಂದ ಪ್ರೇರಣೆಗೊಂಡು ಬೇರೆ ಬೇರೆ ಗ್ರಾಮಗಳಲ್ಲಿ ರೈತರು ಇಂಥ ಪೋಸ್ಟರುಗಳನ್ನು ಹಾಕುತ್ತಿದ್ದಾರೆ ಎಂದೂ ಹಿಂದಿ ಮಾಧ್ಯಮಗಳು ವರದಿ ಮಾಡಿವೆ.