ಬಿಜೆಪಿಯ ವೆಬ್‍ಸೈಟ್ ಹ್ಯಾಕ್

0
640

ಹೊಸದಿಲ್ಲಿ, ಮಾ.5: ಬಿಜೆಪಿಯ ಅಧಿಕೃತ ವೆಬ್‍ಸೈಟ್ ((http://www.bjp.org/) ಹ್ಯಾಕ್ ಮಾಡಲಾಗಿದೆ ಎಂದು ವರದಿಯಾಗಿದೆ. ತದನಂತರ ವೆಬ್‍ಸೈಟ್ ಚಟುವಟಿಕೆ ಸ್ಥಗಿತಗೊಂಡಿತು. ಹ್ಯಾಕ್ ಯಾರು ಮಾಡಿದ್ದೆಂದು ಸ್ಪಷ್ಟವಾಗಿಲ್ಲ. ಮೋದಿ ಜೊತೆ ಜರ್ಮನ್ ಚಾನ್ಸೆಲರ್ ನಿಂತ ಫೋಟೊ ಸೈಟ್‍ನಲ್ಲಿತ್ತು. ಇದಲ್ಲದೆ ಬೊಹಿಮಿಯನ್ ರಾಪ್ಸಡಿ ಎಂಬ ಮ್ಯೂಸಿಕ್ ವೀಡಿಯೊದ ಯುಟ್ಯೂಬ್ ಕೂಡ ಸೈಟಿನಲ್ಲಿತ್ತು.

ಈಗ ಸೈಟ್‍ಗೆ ಭೇಟಿ ನೀಡಿದರೆ ಎರರ್ ಎಂದು ಕಂಡು ಬರುತ್ತಿದೆ. ಹ್ಯಾಕ್ ಮಾಡಿದ ವೆಬ್‍ಸೈಟ್ ಸ್ಕ್ರೀನ್‍ನಲ್ಲಿ ಶಾರ್ಟ್ ಟ್ವಿಟರ್ ಕಾಣಿಸುತ್ತಿದೆ.