ಮೈಕ್ರೊಸಾಫ್ಟ್ ಸಂಸ್ಥಾಪಕ ಬಿಲ್‌ಗೇಟ್ಸ್‌ರ ತಂದೆ, ಬಿಲ್‌ಗೇಟ್ಸ್ ಸೀನಿಯರ್ ನಿಧನ

0
319

ಸನ್ಮಾರ್ಗ ವಾರ್ತೆ

ವಾಷಿಂಗ್ಟನ್,ಸೆ.16: ಮೈಕ್ರೊಸಾಫ್ಟ್ ಸಂಸ್ಥಾಪಕ ಬಿಲ್‌ಗೇಟ್ಸ್‌ರ ತಂದೆ ವಕೀಲರಾದ ವಿಲಿಯಂ ಎಚ್.ಗೇಟ್ಸ್ (ಬಿಲ್‍ಗೇಟ್ಸ್ ಸೀನಿಯರ್) ನಿಧನರಾದರು ಅವರಿಗೆ 94 ವರ್ಷ ವಯಸ್ಸಾಗಿತ್ತು. ಸೋಮವಾರ ಸಿಯಾಟ್ ಹುಡ್ ಕನಾಲ್‍ನ ಸ್ವಗೃಹದಲ್ಲಿ ಅವರು ನಿಧನರಾಗಿದ್ದಾರೆ.

ಅವರು ಅಲ್ಜೇಮರ್ಸ್ ರೋಗ ಪೀಡಿತರಾಗಿ ಚಿಕಿತ್ಸೆ ಪಡೆಯುತ್ತಿದ್ದರು ಎಂದು ಕುಟುಂಬ ಪತ್ರಿಕಾ ಹೇಳಿಕೆ ನೀಡಿದೆ.
‘ನನ್ನ ತಂದೆ ನಿಜವಾದ ಬಿಲ್ ಗೇಟ್ಸ್. ನಾನು ಏನಾಗಬೇಕೆಂದು ಪ್ರಯತ್ನಿಸಿದೆನೋ ಅದು ಅವರಾಗಿದ್ದರು. ಪ್ರತಿದಿವಸವೂ ನಾನು ಅವರನ್ನು ಮಿಸ್ ಮಾಡಿಕೊಳ್ಳಲಿದ್ದೇನೆ’- ಎಂದು ಬಿಲ್‍ಗೇಟ್ಸ್ ಟ್ವೀಟ್ ಮಾಡಿದ್ದಾರೆ. ತಂದೆಯ ಜ್ಞಾನ, ಔದಾರ್ಯ, ಸಮಾನುಭಾವ, ವಿನಯ ಜಗತ್ತಿನಾದ್ಯಂತ ಹೆಚ್ಚು ಪ್ರಭಾವ ಬೀರಿದೆ ಎಂದು ಬಿಲ್ ಗೇಟ್ಸ್ ಹೇಳಿದರು.

ಬಿಲ್‌ಗೇಟ್ಸ್ ಸೀನಿಯರ್ 1925 ನವೆಂಬರ್ 30ರಂದು ವಾಷಿಂಗ್ಟನ್‍ನಲ್ಲಿ ಜನಿಸಿದರು. ಬಿಲ್‌ಗೇಟ್ಸ್ ಚಾರಿಟಿ ಕಾರ್ಯಕ್ಕೆ ತಂದೆ ಬುನಾದಿ ಹಾಕಿದರು ಎಂದು ಬಿಲ್‍ಗೇಟ್ಸ್ ಜೂನಿಯರ್ ಸ್ಮರಿಸಿಕೊಂಡರು. 1994ರಲ್ಲಿ ಬಿಲ್‍ಗೇಟ್ಸ್ ಸೀನಿಯರ್ ಪುತ್ರ, ಸೊಸೆ ಮೆಲಿಂಡ ಜಂಟಿಯಾಗಿ ಚಾರಿಟಿ ಕೆಲಸವನ್ನು ಆರಂಭಿಸಿದ್ದರು.

ತಂದೆಯವರಿಂದಲೇ ಬಿಲ್ ಆಂಡ್ ಮೆಲಿಂಡ ಫೌಂಡೇಶನ್ ಇಂದಿನ ಸ್ಥಿತಿಗೆ ತಲುಪಿದೆ. ಇತರೆಲ್ಲರಿಗಿಂತಲೂ ಫೌಂಡೇಶನ್‍ನ ಮೌಲ್ಯಗಳನ್ನು ಅವರು ರೂಪಿಸಿದರು. ಅಂತಸ್ತಿನ ವ್ಯಕ್ತಿ ಅವರು. ಕಪಟ ಕಾರ್ಯಗಳನ್ನು ವಿರೋಧಿಸುತ್ತಿದ್ದರು ಎಂದು ಬಿಲ್‍ಗೇಟ್ಸ್ ಜೂನಿಯರ್ ಹೇಳಿದರು. ಕ್ರಿಸ್ಟಿಯನ್ ಬ್ಲಾ, ಎಲಿಝಬೆತ್ ಮಕ್ಫಿ ಇತರ ಮಕ್ಕಳು. ಹಾಗೂ ಎಂಟು ಮೊಮ್ಮಕ್ಕಳಿದ್ದಾರೆ.

ಓದುಗರೇ, ಸನ್ಮಾರ್ಗ ಫೇಸ್‌ಬುಕ್ ಪೇಜ್‌ನ್ನು ಲೈಕ್ ಮಾಡುವ ಮೂಲಕ ನಮ್ಮನ್ನು ಬೆಂಬಲಿಸಿ.