ಬಿಜೆಪಿ ಭಯೋತ್ಪಾದನಾ ಸಂಘಟನೆಯಂತೆ ವರ್ತಿಸುತ್ತಿದೆ; ಮಮತಾ ಬ್ಯಾನರ್ಜಿ

0
874

ಕೊಲ್ಕತಾ, ಜೂ. 24: ಪಶ್ಚಿಮಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಬಿಜೆಪಿಯನ್ನು ಭಯೋತ್ಪಾದನಾ ಸಂಘಟನೆಯಂತಿದೆ ಎಂದು ಹೇಳಿದ್ದಾರೆ. ಪಶ್ಚಿಮ ಬಂಗಾಳದ ಕಾನೂನು ವ್ಯವಸ್ಥೆ ನಾಶಪಡಿಸಲು ಬಿಜೆಪಿ ಗೂಂಡಾಗಳನ್ನು ಇಳಿಸಿದೆ ಎಂದು ಅವರು ಆರೋಪಿಸಿದರು. ತೃಣಮೂಲ ಕಾಂಗ್ರೆಸ್ ಪಶ್ಚಿಮ ಬಂಗಾಳವನ್ನು ಪಾಕಿಸ್ತಾನವನ್ನಾಗಿ ಮಾಡುತ್ತಿದೆ ಎಂಬ ಆರೋಪಕ್ಕೆ ಅವರು ಈ ರೀತಿ ಪ್ರತಿಕ್ರಿಯೆ ನೀಡಿದ್ದಾರೆ.

ಲೋಕಸಭಾ ಚುನಾವಣೆಯ ನಂತರ ಬಿಜೆಪಿ ರಾಜ್ಯದಲ್ಲಿ ಭಯೋತ್ಪಾದನಾ ಸಂಘಟನೆಯಂತೆ ವರ್ತಿಸುತ್ತಿದೆ. ಉತ್ತರ ಪ್ರದೇಶದ, ಬಿಹಾರದಿಂದ ಅವರು ಗೂಂಡಾಗಳನ್ನು ಇಲ್ಲಿಗೆ ತಂದಿದ್ದಾರೆ. ಉತ್ತರ 24 ಪರಗಣ ಜಿಲ್ಲೆಯ ಬಾಟ್‍ಪರದಲ್ಲಿ ನಡೆದ ಘರ್ಷಣೆಯ ನಂತರ ಉತ್ತರ ಪ್ರದೇಶದವರು ಹೊರಟು ಹೋಗಬೇಕಾಧ ಪರಿಸ್ಥಿತಿ ನಿರ್ಮಾಣವಾಗಿದೆ ಎಂದು ತೃಣಮೂಲಕ ಕಾಂಗ್ರೆಸ್ ಸಚಿವ ಫಿರ್‍ಹಾದ್ ಹಕೀಂ ಹೇಳಿದರು. ಆದರೆ ರಾಜ್ಯವನ್ನು ಘರ್ಷಣಾ ಸ್ಥಿತಿಗೆ ತಂದಿಡಲು ಬಿಡುವುದಿಲ್ಲ ಎಂದು ಅವರು ಹೇಳಿದರು. ಬಾಟ್‍ಪರದ ಸಮಸ್ಯೆ ಪರಿಹರಿಸಲು ರಾಜ್ಯಸರಕಾರ ಆಸಕ್ತಿ ವಹಿಸಿಲ್ಲ. ಪಶ್ಚಿಮ ಬಂಗಾಳವನ್ನು ಪಾಕಿಸ್ತಾನ ಮಾಡಲು ಶ್ರಮಿಸುತ್ತಿದೆ. ಜೈಶ್ರೀರಾಂ ಎಂದು ಹೇಳಲು ಕೂಡ ಬಿಡುವುದಿಲ್ಲ ಎಂದು ಬಿಜೆಪಿ ರಾಜ್ಯ ಅಧ್ಯಕ್ಷ ದಿಲೀಪ್ ಘೋಷ್ ಆರೋಪಿಸಿದ್ದರು.