ಮೇಕ್ ಇನ್ ಇಂಡಿಯ ಅಲ್ಲ, ರೇಪ್ ಇನ್ ಇಂಡಿಯ; ರಾಹುಲ್ ಗಾಂಧಿ ಹೇಳಿಕೆಗೆ ಬಿಜೆಪಿ ಪ್ರತಿಭಟನೆ

0
1049

ಸನ್ಮಾರ್ಗ ವಾರ್ತೆ

ಹೊಸದಿಲ್ಲಿ, ಡಿ. 13: ಮಹಿಳೆಯರ ಮೇಲಿನ ಅಕ್ರಮಗಳನ್ನು ಉದ್ಧರಿಸಿದ ರಾಹುಲ್ ಗಾಂಧಿ ಲೋಕಸಭೆಯಲ್ಲಿ ಬಿಜೆಪಿ ಸಂಸದರ ಪ್ರತಿಭಟನೆಗೆ ತುತ್ತಾದರು. ಮೇಕ್ ಇನ್ ಇಂಡಿಯ ಅಲ್ಲ ರೇಪ್ ಇನ್ ಇಂಡಿಯ ಎಂದು ರಾಹುಲ್ ಲೋಕಸಭೆಯಲ್ಲಿ ಹೇಳಿದರು. ಕಳೆದ ದಿವಸ ಝಾರ್ಕಂಡಿನ ಚುನವಣೆಯ ಭಾಷಣದಲ್ಲಿ ರಾಹುಲ್ ಹೀಗೆ ಹೇಳಿದ್ದರು. ಗದ್ದಲದಿಂದ ಹನ್ನೆರಡು ಗಂಟೆಯವರೆಗೆ ಸದನವನ್ನು ಸ್ಥಗಿತಗೊಳಿಸಲಾಯಿತು.

ರಾಹುಲ್ ಗಾಂಧಿ ಹೇಳಿಕೆ ಭಾರತದ ಎಲ್ಲ ಮಹಿಳೆಯರನ್ನು ಅಪಮಾನಿಸುತ್ತದೆ ಎಂದು ಕೇಂದ್ರ ಸಚಿವೆ ಸ್ಮೃತಿ ಇರಾನಿ ಅರೋಪಿಸಿದ್ದಾರೆ. ರಾಹುಲ್ ಕ್ಷಮೆ ಯಾಚಿಸಬೇಕೆಂದು ಇರಾನಿ ಹೇಳಿದ್ದಾರೆ. ಮಹಿಳೆಯರ ವಿರುದ್ಧ ಅಕ್ರಮಗಳು ಹೆಚ್ಚುತ್ತಿರುವುದನ್ನು ಸೂಚಿಸಿ ರಾಹುಲ್ ಗಾಂಧಿ ಈ ಹೇಳಿಕೆ ನೀಡಿದ್ದರು. ಎಲ್ಲಿ ನೋಡಿದರೂ ರೇಪ್ ಇನ್ ಇಂಡಿಯವನ್ನು ಇಂದು ನೋಡಲು ಸಾಧ್ಯವಿದೆ. ಉತ್ತರಪ್ರದೇಶದಲ್ಲಿ ಬಿಜೆಪಿ ಶಾಸಕ ಅತ್ಯಾಚಾರ ಮಾಡಿದ್ದು, ನಂತರ ಸಂತ್ರಸ್ತೆಯ ಮೇಲೆ ವಾಹನ ಅಪಘಾತ ನಡೆಯಿತು. ನರೇಂದ್ರ ಮೋದಿ ಈ ವಿಷಯದಲ್ಲಿ ಒಂದು ಮಾತನ್ನೂ ಆಡಿಲ್ಲ ಎಂದು ರಾಹುಲ್ ಗಾಂಧಿ ಹೇಳಿದರು. ಆದರೆ ಇದೇ ಮೊದಲ ಸಲ ಒಬ್ಬ ನಾಯಕ ಅತ್ಯಾಚಾರಕ್ಕೆ ಕರೆ ನೀಡಿದ್ದೆಂದು ಸ್ಮೃತಿ ಇರಾನಿ ಆರೋಪಿಸಿದರು. ಇದು ದೇಶದ ಜನರಿಗೆ ರಾಹುಲ್ ನೀಡುವ ಸಂದೇಶವೇ ಎಂದು ಅವರು ಪ್ರಶ್ನಿಸಿದರು. ಇದೇ ವೇಳೆ ಹೇಳಿಕೆಯನ್ನು ಅವರು ಸಭೆಯಲ್ಲಿ ನೀಡಿಲ್ಲ. ನಿಜಕ್ಕೂ ರೇಪ್ ಇನ್ ಇಂಡಿಯ ನಡೆಯುತ್ತಿದೆ ಎಂದು ಡಿಎಂಕೆ ಕನಿಮೊಳಿ ಹೇಳಿದರು. ಅಲ್ಲದೆ, ರಾಹುಲ್ ಕ್ಷಮೆ ಯಾಚಿಸಲು ನಿರಾಕರಿಸಲಿದರು.