ಉತ್ತರಪ್ರದೇಶ ಬಿಜೆಪಿ ರಾಜ್ಯಾಧ್ಯಕ್ಷರಿಗೆ ಕೊರೋನ

0
275

ಸನ್ಮಾರ್ಗ ವಾರ್ತೆ

ಲಕ್ನೊ,ಆ.3: ಉತ್ತರ ಪ್ರದೇಶ ಬಿಜೆಪಿ ರಾಜ್ಯಾಧ್ಯಕ್ಷ ಸ್ವತಂತ್ರ ದೇವ್ ಸಿಂಗ್‍ರಿಗೆ ಕೊರೋನ ದೃಢಪಟ್ಟಿದ್ದು ಇದನ್ನು ಅವರೇ ಸ್ವತಃ ಟ್ವೀಟ್ ಮಾಡಿ ತಿಳಿಸಿದ್ದಾರೆ.

ತನ್ನೊಂದಿಗೆ ಸಂಪರ್ಕದಲ್ಲಿದ್ದವರು ಕ್ವಾರಂಟೈನ್‍ನಲ್ಲಿ ಇರಬೇಕೆಂದು ಕೊರೋನ ಟೆಸ್ಟ್ ಮಾಡಿಸಿ ಕೊಳ್ಳಬೇಕೆಂದು ಸ್ವತಂತ್ರ ದೇವ್ ಟ್ವೀಟ್ ಮಾಡಿದ್ದಾರೆ.

ಪ್ರಾಥಮಿಕ ಲಕ್ಷಣಗಳು ಕಂಡು ಬಂದದ್ದರಿಂದ ಅವರು ಪರೀಕ್ಷೆ ಮಾಡಿಸಿಕೊಂಡಿದ್ದರು. ಅವರು ಶೀಘ್ರ ಗುಣಮುಖರಾಗಲೆಂದು ಉತ್ತರ ಪ್ರದೇಶ ಮುಖ್ಯಮಂತ್ರಿಯೋಗಿ ಆದಿತ್ಯನಾಥ್ ಟ್ವೀಟ್ ಮಾಡಿದ್ದಾರೆ.

ಉತ್ತರ ಪ್ರದೇಶದಲ್ಲಿ ಕೊರೋನಕ್ಕೆ ಶಿಕ್ಷಣ ಖಾತೆಯ ಕ್ಯಾಬಿನೆಟ್ ಸಚಿವೆ ಕಮಲಾ ರಾಣಿ ವರುಣ್(62) ನಿನ್ನೆ ಮೃತರಾಗಿದ್ದರು. ಕೊರೋನ ಪಾಸಿಟಿವ್ ಆದ ಬಳಿಕ ಅವರು ಲಕ್ನೊದ ಆಸ್ಪತ್ರೆಯೊಂದರಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು.

ಓದುಗರೇ, ಸನ್ಮಾರ್ಗ ಫೇಸ್‌ಬುಕ್ ಪೇಜ್‌ನ್ನು ಲೈಕ್ ಮಾಡುವ ಮೂಲಕ ನಮ್ಮನ್ನು ಬೆಂಬಲಿಸಿ.