ಮೋದಿ ನೇತೃತ್ವದ ರ್ಯಾಲಿಯಲ್ಲಿ ಭಾಗಿಯಾಗಲು ಸೌರವ್ ಗಂಗೂಲಿಯನ್ನು ಸ್ವಾಗತಿಸಿದ ಬಿಜೆಪಿ

0
141

ಸನ್ಮಾರ್ಗ ವಾರ್ತೆ

ಕೊಲ್ಕತಾ: ಪಶ್ಚಿಮ ಬಂಗಾಳದಲ್ಲಿ ಪ್ರಧಾನಿ ನರೇಂದ್ರ ಮೋದಿಯವರ ನೇತೃತ್ವದ ರ್ಯಾಲಿಯಲ್ಲಿ ಭಾರತೀಯ ಕ್ರಿಕೆಟ್‌ನ ಮಾಜಿ ನಾಯಕ ಹಾಗೂ ಬಿಸಿಸಿಐ ಅಧ್ಯಕ್ಷ ಸೌರವ್ ಗಂಗೂಲಿ ಭಾಗವಹಿಸುವ ವದಂತಿ ಹರಡಿದ್ದು ಬಿಜೆಪಿ ಮಾರ್ಚ್ ಏಳಕ್ಕೆ ನಡೆಯುವ ರ್ಯಾಲಿಯಲ್ಲಿ ಗಂಗೂಲಿಯವರನ್ನು ಸ್ವಾಗತಿಸಿದೆ. ಆದರೆ ಭಾಗವಹಿಸಬೇಕೆ ಬೇಡವೇ ಎಂಬುದನ್ನು ಅವರೇ ನಿರ್ಧರಿಸಬೇಕಾಗಿದೆ ಎಂದು ಬಿಜೆಪಿ ಹೇಳಿದೆ.

ಸಧ್ಯಕ್ಕೆ ಗಂಗೂಲಿಯವರು ಮನೆಯಲ್ಲಿ ವಿಶ್ರಾಂತಿಯಲ್ಲಿದ್ದಾರೆ. ಆರೋಗ್ಯ ಮತ್ತು ಹವಮಾನ ಅನುಕೂಲಕರವಾದರೆ ಅವರು ಭಾಗವಹಿಸಬಹುದು. ಅವರನ್ನು ನಾವು ಸ್ವಾಗತಿಸುತ್ತೇವೆ. ಅವರು ಬಂದರೆ ಅವರಿಗೂ ಜನರಿಗೂ ಸಂತೋಷ ಆಗಬಹುದು. ಆದರೆ, ಅದರ ಬಗ್ಗೆ ನಮಗೆ ಏನೂ ಗೊತ್ತಿಲ್ಲ. ಅವರೇ ತೀರ್ಮಾನಿಸಬೇಕಾಗುತ್ತದೆ ಎಂದು ಬಿಜೆಪಿ ವಕ್ತಾರ ಶಮಿಕ್ ಭಟ್ಟಾಚಾರ್ಯ ಹೇಳಿದರು. ಹೃದಯಾಘಾತದಿಂದ ಅಂಜಿಯೊಪ್ಲಾಸ್ಟಿ ಮಾಡಿಸಿಕೊಂಡು ಗಂಗೂಲಿ ವಿಶ್ರಾಂತಿ ಪಡೆಯುತ್ತಿದ್ದಾರೆ.

ಆದರೆ, ಈ ಬಗ್ಗೆ ಗಂಗೂಲಿ ಈವರೆಗೂ ಪ್ರತಿಕ್ರಿಯೆ ನೀಡಿಲ್ಲ. ಗಂಗೂಲಿಗೆ ಪ.ಬಂಗಾಳದಲ್ಲಿರುವ ಜನಪ್ರಿಯತೆಯ ಆಧಾರದಲ್ಲಿ ಅವರನ್ನು ಬಿಜೆಪಿಗೆ ಸೇರಿಸುವ ಯತ್ನವನ್ನು ಆರಂಭಿಸಲಾಗಿತ್ತು. ವಿಧಾನಸಭಾ ಚುನಾವಣೆಯ ಮೊದಲು ಅವರು ಬಿಜೆಪಿಗೆ ಸೇರ್ಪಡೆಯಾಗುತ್ತಾರೆ ಎಂದು ವದಂತಿಗಳಿವೆ.