ಸಚಿನ್ ಪೈಲಟ್‍‌ಗೆ ಬಿಜೆಪಿ ನಾಯಕನಿಂದ ಪಕ್ಷಕ್ಕೆ ಆಹ್ವಾನ

0
208

ಸನ್ಮಾರ್ಗ ವಾರ್ತೆ

ಜೈಪುರ,ಜು.14: ರಾಜಸ್ಥಾನದಲ್ಲಿ ರಾಜಕೀಯ ಕದನವನ್ನು ಪರಿಗಣಿಸಿ ಉಪಮುಖ್ಯಮಂತ್ರಿ ಸಚಿನ್ ಪೈಲಟ್‍ರನ್ನು ಬಿಜೆಪಿಗೆ ರಾಜಸ್ಥಾನ ಬಿಜೆಪಿ ನಾಯಕ ಓಂ ಮಾಥುರ್ ಸ್ವಾಗತಿಸಿದ್ದಾರೆ.

ಮುಖ್ಯಮಂತ್ರಿ ಅಶೋಕ್ ಗೆಹ್ಲೋಟ್ ಮತ್ತು ಪೈಲಟ್ ನಡುವೆ ನಡೆಯುತ್ತಿದ್ದ ಮುಸುಕಿನ ಗುದ್ದಾಟ ಇದೀಗ ಬಹಿರಂಗವಾಗಿದೆ. ಇದೇ ವೇಳೆ, ಬಿಜೆಪಿ ಪ್ರಥಮ ಬಾರಿಗೆ ಪ್ರತಿಕ್ರಿಯೆ ನೀಡಿದೆ.

200 ಸದಸ್ಯ ವಿಧಾನಸಭೆಯಲ್ಲಿ ನೂರಕ್ಕೂ ಹೆಚ್ಚು ಸದಸ್ಯರ ಬೆಂಬಲ ಸರಕಾರಕ್ಕಿದೆ ಎಂದು ಗೆಹ್ಲೋಟ್ ಹೇಳುತ್ತಿದ್ದಾರೆ. ಆದರೆ, 30 ಶಾಸಕರು ತನ್ನ ಜೊತೆಗಿದ್ದಾರೆ ಎಂದು ಸಚಿನ್ ಪೈಲಟ್ ಹೇಳುತ್ತಿದ್ದಾರೆ. ಸಚಿನ್ ಮುಖ್ಯಮಂತ್ರಿ ಸ್ಥಾನವನ್ನು ಕೇಳುತ್ತಿದ್ದಾರೆ. ಇದೇ ವೇಳೆ ತಾನು ಬಿಜೆಪಿಗೆ ಹೋಗುವುದಿಲ್ಲ ಎಂದೂ ಅವರು ಹೇಳಿದ್ದಾರೆ.

ರಾಹುಲ್ ಗಾಂಧಿಯೂ ಎಐಸಿಸಿ ಪ್ರಧಾನ ಕಾರ್ಯದರ್ಶಿ ಪ್ರಿಯಾಂಕಾ ಗಾಂಧಿಯೂ ಹಲವು ಬಾರಿ ಸಚಿನ್ ಪೈಲೆಟ್‍ರೊಂದಿಗೆ ಫೋನ್‍ನಲ್ಲಿ ಮಾತಾಡಿದ್ದರು. ಆದರೆ ಸಚಿನ್ ಒಪ್ಪಿಕೊಂಡಿಲ್ಲ. ಈ ನಡುವೆ ಅಶೋಕ್ ಗೆಹ್ಲೋಟ್‍ರನ್ನು ಬೆಂಬಲಿಸಿ ಕಾಂಗ್ರೆಸ್ ಪ್ರಸ್ತಾವ ಪಾಸು ಮಾಡಿದೆ.

ಪ್ರಜಾಪ್ರಭುತ್ವವನ್ನು ನಾಶಪಡಿಸುವ ಬಿಜೆಪಿಯ ಶ್ರಮವು ರಾಜಸ್ಥಾನದ ಎಂಟು ಕೋಟಿ ಜನರನ್ನು ಅಪಮಾನಿಸಿದ್ದಕ್ಕೆ ಸಮ ಎಂದು ಪ್ರಸ್ತಾವದಲ್ಲಿ ಅದು ತಿಳಿಸಿದೆ.

ಓದುಗರೇ, ಸನ್ಮಾರ್ಗ ಫೇಸ್‌ಬುಕ್‌ ಪೇಜ್‌ನ್ನು ಲೈಕ್ ಮಾಡುವ ಮೂಲಕ ನಮ್ಮನ್ನು ಬೆಂಬಲಿಸಿ.

LEAVE A REPLY

Please enter your comment!
Please enter your name here