ಮಸೂದ್ ಅಝರ್ ಚಿಕಿತ್ಸೆ ಪಡೆಯುತ್ತಿರುವ ಪಾಕಿಸ್ತಾನದ ಸೈನಿಕ ಆಸ್ಪತ್ರೆಯಲ್ಲಿ ಭಾರೀ ಸ್ಫೋಟ-ವೀಡಿಯೊ

0
814

ರಾವಲ್ಪಿಂಡಿ, ಜೂ. 24: ಪಾಕಿಸ್ತಾನದ ರಾವಲ್ಪಿಂಡಿಯ ಸೈನಿಕ ಆಸ್ಪತ್ರೆಯಲ್ಲಿ ಸ್ಫೋಟ ನಡೆದಿದ್ದು ಹತ್ತಕ್ಕೂ ಹೆಚ್ಚು ಮಂದಿ ಗಾಯಗೊಂಡಿದ್ದಾರೆ. ಆಸ್ಪತ್ರೆಯ ಹಾರ್ಡಿಯೋಲಜಿ ವಿಭಾಗದ ಸಮೀಪ ಸ್ಫೋಟ ನಡೆಯಿತು ಎಂದು ವರದಿ ತಿಳಿಸಿದೆ.

ಜೈಷೆ ಮುಹಮ್ಮದ್ ಸಂಘಟನೆಯ ಮುಖಂಡ ಮಸೂದ್ ಅಝರ್ ಇಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾನೆ ಎನ್ನಲಾಗಿದೆ. ಆಸ್ಪತ್ರೆಯ ಕಟ್ಟಡದಿಂದ ಭಾರೀ ಹೊಗೆ ಏಳುತ್ತಿರುವುದನ್ನು ವೀಡಿಯೊದಲ್ಲಿ ನೋಡಬಹುದು. ಸ್ಫೋಟದಲ್ಲಿ ಗಂಭೀರ ಗಾಯಗೊಂಡವರನ್ನು ಆಸ್ಪತ್ರೆಯ ತುರ್ತು ಚಿಕಿತ್ಸಾ ಘಟಕಕ್ಕೆ ಸ್ಥಳಾಂತರಿಸಲಾಗಿದೆ. ಸ್ಫೋಟದ ಹೊಣೆಯನ್ನು ಯಾರೂ ವಹಿಸಿಕೊಂಡಿಲ್ಲ. ಸ್ಫೋಟ ಸುದ್ದಿ ವರದಿ ಮಾಡದಂತೆ ಸೈನ್ಯ ಮಾಧ್ಯಮಗಳನ್ನು ತಡೆದಿದೆ. ಇದೇ ವೇಳೇ, ಆಸ್ಪತ್ರೆಯಿಂದ ಹೊಗೆ ಬರುವ ದೃಶ್ಯಗಳನ್ನು ಸ್ಥಳೀಯರು ವೀಡಿಯೊ ಮಾಡಿ ಬಹಿರಂಗಗೊಳಿಸಿದ್ದು ನಂತರ ಸ್ಫೋಟದ ಕುರಿತ ವಿವರ ಹೊರಜಗತ್ತಿನ ಮುಂದೆ ಬಯಲಾಯಿತು.