ಬ್ರೈನ್ ವಾಶ್ ಮಾಡುತ್ತಿರುವ ಚೀನಾ

0
1023

ಮುಸ್ಲಿಮರ ಮನಸ್ಸಿಂದ ಇಸ್ಲಾಮನ್ನು ಸಂಪೂರ್ಣವಾಗಿ ತೊಡೆದು ಹಾಕಲು ಚೀನಾ ಶತ ಪ್ರಯತ್ನ ಮಾಡುತ್ತಿದೆ. ವಸಾಹತುಶಾಹಿ ದಕ್ಷಿಣ ಕಿರ್ಗಿಸ್ತಾನದಲ್ಲಿ ಮುಸ್ಲಿಮರ ಮೇಲೆ ಸುಳ್ಳಾರೋಪ ಹೊರಿಸಿ ತೀವ್ರ ದೌರ್ಜನ್ಯ ವೆಸಗಲಾಗುತ್ತಿದೆ. ಅಲ್ಲಾಹನು ಕಡ್ಡಾಯಗೊಳಿಸಿದ ಧರ್ಮದ ಕಾರ್ಯಗಳನ್ನು ನಿರ್ವಹಿಸುವುದರಿಂದ ದೂರ ನಿಂತರೆ ಸಾಲದು. ಜೊತೆಗೆ ತಾವು ವಿಶ್ವಾಸವಿರಿಸಿದ ಧರ್ಮವನ್ನೇ ತೊರೆದು ನಾಸ್ತಿಕವಾದಕ್ಕೆ ಅಂಟಿಕೊಂಡಿರುವ ಕಮ್ಯೂನಿಝಂನಲ್ಲಿ ವಿಶ್ವಾಸವಿರಿಸು ವಂತೆ ಒತ್ತಡ, ಮಾನಸಿಕ ಕಿರುಕುಳವನ್ನು ನೀಡಲಾಗುತ್ತಿದೆ.

ಚೀನಾದ ಆಡಳಿತದಿಂದ ಈ ದೌರ್ಜನ್ಯ, ಕಿರುಕುಳಗಳು ಬಹಿ ರಂಗವಾಗಿ ನಡೆಯುತ್ತಿದೆ. ಇದನ್ನು ಆಡಳಿತ ವರ್ಗವು ತಳ್ಳಿಹಾಕುತ್ತಿಲ್ಲ. ಜನರ ನಡುವೆ ಅದು ಬಹಿರಂಗ ಪಡಿಸುತ್ತಿದೆ. ಈ ವಿಚಾರದಲ್ಲಿ ಅಂತಾರಾಷ್ಟ್ರೀಯ ಒಕ್ಕೂಟಗಳು ನಿರ್ಲಕ್ಷತೆಯಿಂದ ವರ್ತಿಸಿ ಕಠಿಣ ಕ್ರಮಕೈಗೊಳ್ಳದಿ ರುವುದರ ಪ್ರಯೋಜನವನ್ನು ಚೀನಿಯವರು ಪಡೆಯು ತ್ತಿದ್ದಾರೆ. ಚೀನಾದ ಆಡಳಿತವು ಮುಸ್ಲಿಮರನ್ನು ಸೆರೆಮನೆಯ ವಲಯ ದಲ್ಲಿ ಜೀವಿಸುವಂತೆ ಮಾಡಿವೆ. ಹತ್ತು ಲಕ್ಷಕ್ಕಿಂತಲೂ ಅಧಿಕವಿರುವ ಉಯಿಗೂರ್ ವಂಶಸ್ಥರು ಚೀನಾದ ಮಹಾ ಜೈಲುಗಳಲ್ಲಿ ಬಂಧಿಸಲ್ಪಟ್ಟ ರೀತಿಯಲ್ಲಿದ್ದಾರೆಂದು ವ್ಯಕ್ತವಾಗುವಂತಹ ಅನೇಕ ವರದಿಗಳು ನಮಗೆ ದೊರೆತಿವೆಯೆಂದು ವಿಶ್ವಸಂಸ್ಥೆಯ ಅಧೀನವಿರುವ ಮಾನವ ಹಕ್ಕುಗಳ ವೇದಿಕೆ ಹೇಳುತ್ತಿದೆ.

ಇಪ್ಪತ್ತು ಲಕ್ಷದಷ್ಟಿರುವ ಮುಸ್ಲಿಮ್ ಅಲ್ಪಸಂಖ್ಯಾತರು ದಕ್ಷಿಣ ತುರ್ಕಿಸ್ತಾನದ ಶಿನ್ ಜಿಯಾಂಗ್ ಪ್ರದೇಶದ ರಾಜಕೀಯವಾದ ಜೈಲುಗಳಲ್ಲಿ ಪ್ರವೇಶಿಸಲು ನಿರ್ಬಂಧಿತರಾಗಿದ್ದಾರೆಂದು ವಿಶ್ವಸಂಸ್ಥೆಯ ವಂಶೀಯ ನಿರ್ಮೂಲನ ವಿವೇಚನಾ ಸಮಿತಿಯ ಸದಸ್ಯ ಜೋಮೆಕಡೋಲ್ ಸ್ಪಷ್ಟಪಡಿಸಿದ್ದಾರೆ. ಅವರು ಹೇಳುತ್ತಾರೆ, “ಉಯ್‍ಗೂರ್ ವಂಶಸ್ಥರ ವಾಸ ಕೇಂದ್ರಗಳು ಒಂದು ಮಹಾ ಸೆರೆಮನೆಯ ವಲಯಗಳಾಗಿ ಮಾರ್ಪಟ್ಟಿದೆಯೆಂಬುದನ್ನು ಸ್ಪಷ್ಟಪಡಿಸು ವಂತಹ ನಂಬಲರ್ಹವಾದ ಅನೇಕ ವರದಿಗಳು ನಮ್ಮನ್ನು ಆತಂಕಿತರನ್ನಾಗಿ ಮಾಡಿದೆ. ಧಾರ್ಮಿಕ ಉಗ್ರವಾದವನ್ನು ದಮನಿಸುವ ಸಮಾಜದಲ್ಲಿ ಶಾಂತಿ ಕಾಪಾಡುವಂತಹ ಸಮಾಜದ ಭದ್ರತೆಯನ್ನು ಮರೆಯಾಗಿಸಿದ ನ್ಯಾಯ ಮತ್ತು ಹಕ್ಕು ವಂಚಿತರ ವಲಯಗಳಾಗಿ ಇದನ್ನು ನಾವು ಗಣನೆಗೆ ತೆಗೆದುಕೊಂಡಿದ್ದೇವೆ.

ಇದರ ಜೊತೆಗೆ ಚೀನಾದ ಆಡಳಿತ ಪಕ್ಷವಾದ ಕಮ್ಯೂನಿಸ್ಟ್ ಪಕ್ಷದ ನಿಯಂತ್ರಣದಲ್ಲಿರುವ ಪತ್ರಿಕೆಯೊಂದರ ಪ್ರಕಾರ ಮಸೀದಿಯನ್ನು ಧ್ವಂಸಗೊಳಿಸುವ ಕಾನೂನು ಜಾರಿಗೆ ತರುವಂತಹ ಪ್ರಕ್ರಿಯೆಗಳಲ್ಲಿ ಚೀನಾದ ಆಡಳಿತವು ತೊಡಗಿಸಿಕೊಂಡಿದೆ. ದೇಶದ ಉತ್ತರದ ಭಾಗದಲ್ಲಿ ಮುಸ್ಲಿಮ್ ಬಾಹುಳ್ಯ ಪ್ರದೇಶಗಳ ಇತಿಹಾಸ ಪ್ರಸಿದ್ಧ ಮಸೀದಿಗಳನ್ನು ಧ್ವಂಸಗೊಳಿಸುವ ಯೋಜನೆಯಲ್ಲಿ ಚೀನಾದ ಆಡಳಿತವು ಅಚಲವಾಗಿ ನಿಂತಿದೆ. “ಕಾನೂನು ಮತ್ತು ಅಧಿಕಾರದ ಮುಂದೆ ಯಾವ ಧರ್ಮವೂ ಇಲ್ಲ” ಎಂಬುದನ್ನು ಅವರು ಸಾರಿ ಹೇಳುತ್ತಿದ್ದಾರೆ.

ಗ್ಲೋಬಸ್ ಟೈಂಸ್ ಅವರ ಸಂಪಾದಕೀಯದಲ್ಲಿ ದೇಶದ ಎಲ್ಲಾ ಧರ್ಮದ ಜನರ ನಂಬಿಕೆಯು ದೇಶದ ಕಾನೂನಿಗಿಂತ ಮೇಲಲ್ಲ ಎಂಬ ಸಂದೇಶವನ್ನು ನೀಡಿದ್ದಾರೆ. ಮಸೀದಿಗಳನ್ನು ನಿರ್ಮೂಲನ ಮಾಡುವುದು ಖಂಡಿತವಾಗಿಯೂ ಇದು ದೇಶದ ಧಾರ್ಮಿಕ ವಿಶ್ವಾಸಿಗಳ ಕೆರಳಿಸುವಿಕೆಗೆ ಕಾರಣವಾಗಬಹುದು. ಇದೇ ವೇಳೆ, ಪ್ರಾದೇಶಿಕ ಆಡಳಿತವು ಈ ಕುರಿತು ತೋರುವ ನಿರ್ಲಕ್ಷ್ಯವು ಚೀನಾದಲ್ಲಿ ಕಾನೂನಿಗಿಂತ ಧರ್ಮದ ಪ್ರಭಾವ ಹೆಚ್ಚಿದೆಯೆಂಬುದಕ್ಕೆ ಪ್ರೋತ್ಸಾಹ ನೀಡುವಂತಿದೆ” ಎಂದು ಹೇಳಲಾಗಿದೆ.

ಚೀನಾದ ಉತ್ತರ ಭಾಗದ ಮುಸ್ಲಿಮ್ ಬಾಹುಳ್ಯ ಪ್ರದೇಶದ ವಾದನಿಂಗ್‍ಸಿಯಾದಲ್ಲಿ ಇತ್ತೀಚೆಗೆ ನಿರ್ಮಿಸಿದ ಪೌರಾಣಿಕ ಮಸೀದಿ ಯೊಂದನ್ನು ಧ್ವಂಸಗೊಳಿಸುವ ಆಡಳಿತದ ತೀರ್ಮಾನವನ್ನು ಪ್ರತಿಭಟಿಸಿ ನೂರಾರು ಜನರು ಬೀದಿಗಿಳಿದಿದ್ದಾರೆ. ಚೈನೀಸ್ ನಿರ್ಮಾಣದ ರೀತಿಯಲ್ಲಿ 600 ವರ್ಷಗಳಿಗಿಂತ ಹಿಂದೆ ನಿರ್ಮಿಸಲಾದ ಫಾಕ್ಲಾ ನಗರದ ಫಾಕ್ಲಾ ಮಸೀದಿಯ ಮುಂದೆ ನೂರಾರು ಖಾಯ್ ವಂಶಸ್ಥ ಮುಸ್ಲಿಮರು ಪ್ರತಿಭಟನೆ ನಡೆಸಿದ್ದರು ಎಂದು ಚೀನಾದ ಪ್ರಾದೇಶಿಕ ಪತ್ರಿಕೆ ಸೌತ್ ಚೀನಾ ಮೋರ್ನಿಂಗ್ ಟೈಮ್ಸ್ ವರದಿ ಮಾಡಿತ್ತು. ಈ ಹಿಂದೆ ಚೈನೀಸ್‍ನ ಸಾಂಸ್ಕೃತಿಕ ಕ್ರಾಂತಿಯ ಹೆಸರಲ್ಲಿ ಅದನ್ನು ಉರುಳಿಸಲಾಗಿತ್ತು. ಆಡಳಿತ ಗಾರರ ನಿರ್ಧಾರದ ವಿರುದ್ಧ ಜನರು ಪ್ರತಿಭಟಿಸಿದ್ದರು. ಒಂದು ವರ್ಷದ ಹಿಂದಷ್ಟೇ ಆ ಮಸೀದಿ ನಿರ್ಮಾಣ ಮಾಡಲಾಗಿತ್ತು.

ಇತಿಹಾಸ ಪ್ರಸಿದ್ಧವಾದ ಮಸೀದಿಯನ್ನು ಹೊಡೆದುರುಳಿಸಿದ್ದಕ್ಕೆ ಆಡಳಿತಗಾರರು ಆ ಮಸೀದಿ ನಿರ್ಮಾಣಕ್ಕೆ ಸರಕಾರದಿಂದ ಅನುಮತಿ ಪಡೆದಿಲ್ಲವೆಂಬ ಸಮರ್ಥನೆ ನೀಡುತ್ತಾರೆ. ಈ ಪ್ರದೇಶದಲ್ಲಿ ಇಷ್ಟೊಂದು ದೊಡ್ಡ ರೀತಿಯ ಪ್ರತಿಭಟನೆಗಳು ನಡೆದ ಉದಾಹರಣೆಗಳಿಲ್ಲವೆಂದು ಸೌತ್ ಚೀನಾ ಮಾರ್ನಿಂಗ್ ಟೈಮ್ಸ್ ವರದಿ ಮಾಡಿದೆ. ಎಲ್ಲಾ ರೀತಿಯ ಅಂತಾರಾಷ್ಟ್ರೀಯ ಮಾನದಂಡಗಳಿಗೆ ವ್ಯವಸ್ಥೆಗಳಿಗೆ ವಿರುದ್ಧವಾದ ಕ್ರಮಗಳನ್ನು ಚೈನೀಸ್ ಆಡಳಿತವು ಅಲ್ಲಿನ ಮುಸ್ಲಿಮರ ವಿರುದ್ಧ ಪ್ರಯೋಗಿಸಿದೆ. ಮುಸ್ಲಿಮ್ ರಾಷ್ಟ್ರಗಳು, ಆಡಳಿತಗಾರರು ಚೀನಾದ ಈ ಮುನ್ನುಗ್ಗುವಿಕೆಗೆ ತಡೆ ಹಾಕಬೇಕಾದ ಅಗತ್ಯವಿದೆ.

ಖಾಲಿದ್ ಮುಸ್ತಫಾ