‘ಇದು ಭಾರತೀಯ ಹಸು ಅಲ್ಲ’; ಗೋಮಾಂಸ ಸೇವಿಸಿದ ವಾಜಪೇಯಿಯವರ ನೆನಪುಗಳನ್ನು ಪತ್ರಕರ್ತ ಬಿ.ಆರ್.ಪಿ ಭಾಸ್ಕರ್ ತಮ್ಮ ಆತ್ಮಕಥನದಲ್ಲಿ ಹಂಚಿಕೊಂಡಿದ್ದು ಹೀಗೆ..

0
1546

ಸನ್ಮಾರ್ಗ ವಾರ್ತೆ

ತಿರುವನಂತಪುರಂ,ಜೂ.12: ಶ್ರೀಲಂಕಾದಲ್ಲಿ ನಡೆದ ಶೃಂಗ ದೇಶಗಳ ವಿದೇಶಾಂಗ ಸಚಿವರ ಸಭೆಯಲ್ಲಿ ನಡೆದ ಔತಣ ಕೂಟದಲ್ಲಿ ಅಟಲ್ ಬಿಹಾರಿ ವಾಜಪೇಯಿಯವರು ದನದ ಮಾಂಸದ ಬಗ್ಗೆ ವಿರೋಧ ವ್ಯಕ್ತಪಡಿಸಿದ್ದರೇ? ಆಗ ಕೊಲಂಬೋದಲ್ಲಿ ವರದಿಗಾರನಾಗಿ ಹೋಗಿದ್ದ ಪತ್ರಕರ್ತ ಬಿ.ಆರ್.ಪಿ. ಭಾಸ್ಕರ್  ಸಾಪ್ತಾಹಿಕವೊಂದರಲ್ಲಿ ಬರೆಯುತ್ತಿರುವ ತನ್ನ ಆತ್ಮ ಕಥನದಲ್ಲಿ ಈ ವಿಚಾರಗಳನ್ನು ಹಂಚಿಕೊಂಡಿದ್ದಾರೆ.

“1977-79ರ ಸಮಯ. ಆಗ ಕೇಂದ್ರದಲ್ಲಿ ಜನತಾ ಸರಕಾರವಿತ್ತು.ಕೊಲೊಂಬೋದಲ್ಲಿ ನೆರೆಯ ದೇಶಗಳ ವಿದೇಶಾಂಗ ಸಚಿವರ ಸಮ್ಮೇಳನವೊಂದು ಜರುಗಿತ್ತು. ಆಗ ದೃಢವಾದ ನಿರ್ಧಾರವನ್ನು ತಳೆಯಲು ವಾಜಪೇಯಿಯವರಿಂದ ಸಾಧ್ಯವಾಗಿಲ್ಲ” ಎಂದು ಬಾಸ್ಕರ್ ಬರೆಯುತ್ತಾರೆ, ಆಗ ಈಜಿಪ್ಟ್ ತನ್ನ ನಿಲುವನ್ನು ಬದಲಿಸಿ ಇಸ್ರೇಲ್‌ನೊಂದಿಗೆ ಒಪ್ಪಂದ ಮಾಡಿಕೊಂಡದ್ದು ಪ್ರಮುಖ ಚರ್ಚಾ ವಿಷಯವಾಗಿತ್ತು.

ಆಗ ಒಂದು ದಿನ ಭಾರತದ ಪತ್ರಕರ್ತರಿಗೆ ವಾಜಪೇಯಿಯವರು ಮದ್ಯಾಹ್ನದ ಭೋಜನದ ವ್ಯವಸ್ಥೆ ಮಾಡಿದ್ದರು. ಒಂದು ದಶಕದ ಹಿಂದೆ ವಡೋದರದಲ್ಲಿ ಜನಸಂಘದ ರಾಷ್ಟ್ರೀಯ ಕೌನ್ಸಿಲ್ ಸಭೆಯಲ್ಲಿ ಅವರೊಂದಿಗೆ ಊಟ ಮಾಡಿದ್ದೆ. ಅಂದು ತಮ್ಮ ಮುಂದೆ ಇರಿಸಿದ್ದ ಆಹಾರವನ್ನು ಗಾಯಿತ್ರಿ ಮಂತ್ರ ಪಠಿಸಿದ ಬಳಿಕ ವಾಜಪೇಯಿ ಸಹಿತ ಎಲ್ಲರೂ ಸೇವಿಸಿದ್ದರು.

ಆದರೆ, ಕೊಲಂಬೋದ ಪಂಚತಾರಾ ಹೋಟೇಲಲ್ಲಿ ನಾವು ಅಲ್ಲಿನ ರೀತಿ ರಿವಾಜುಗಳಂತೆ ಆಹಾರ ಸೇವಿಸಿದೆವು.ಮುಂದೆ ಇದ್ದ ಆಹಾರದ ಪಾತ್ರೆಯಿಂದ ವಾಜಪೇಯಿಯವರು ತನ್ನ ಬಟ್ಟಲಿಗೆ ಹಾಕಿದಾಗ ಪಕ್ಕದಲ್ಲಿ ಕುಳಿತಿದ್ದ ಲೇಖಕ “ಪಂಡಿತ್ ಜೀ ಅದು ಬೀಫ್ ಆಗಿದೆ” ಎಂದು ಹೇಳಿದರು.
ಆಗ ಮುಗುಳ್ನಕ್ಕ ವಾಜಪೇಯಿಯವರು ‘ಇದು ಭಾರತದ ಹಸುವಲ್ಲ” ಎಂದಿದ್ದರು ಎಂದು ಆರ್.ಪಿ. ಭಾಸ್ಕರ್ ಬರೆದುಕೊಂಡಿದ್ದಾರೆ.

ಓದುಗರೇ, ಸನ್ಮಾರ್ಗ ಫೇಸ್‌ಬುಕ್ ಪೇಜ್‌ನ್ನು ಲೈಕ್ ಮಾಡುವ ಮೂಲಕ ನಮ್ಮನ್ನು ಬೆಂಬಲಿಸಿ.