ಮೈಸೂರಿನ ಉದ್ಯಮಿಯ ಆತ್ಮಹತ್ಯೆ: ಇದು ಮತ್ತೊಂದು ಸಿದ್ಧಾರ್ಥ್ ಪ್ರಕರಣವೇ? ಹಣಕಾಸು ಮುಗ್ಗಟ್ಟು ಆತ್ಮಹತ್ಯೆಗೆ ಕಾರಣವೇ?

0
1019

ಸನ್ಮಾರ್ಗ ವಾರ್ತೆ-

ಚಾಮರಾಜನಗರ, ಆ. 16 : ಇಲ್ಲಿನ ಗುಂಡ್ಲುಪೇಟೆಯಲ್ಲಿ ಅತಿ ಧಾರುಣ ಸಾವು ಸಸಂಭವಿಸಿದ್ದು ಇದನ್ನು ಮತ್ತೊಂದು ಸಿದ್ಧಾರ್ಥ ಪ್ರಕರಣವಾಗಿ ಪರಿಗಣಿಸಬಹುದಾಗಿದೆ. ಇಲ್ಲಿ ಒಂದೇ ಕುಟುಂಬ ನಾಲ್ವರು ಹತ್ಯೆಗೀಡಾಗಿಸದ್ದು, ಹತ್ಯೆಗೈದ ಮನೆ ಯಜಮಾನ ಸ್ವಯಂ ಆತ್ಮಹತ್ಯೆಗೈದಿದ್ದಾರೆ. ಅನಿಮೇಷನ್ ಸಂಸ್ಥೆಯನ್ನು ನಡೆಸುತ್ತಿದ್ದ ಓಂಪ್ರಕಾಶ್ ಎಂಬವರು (36) ಅದರಲ್ಲಿ ತೀವ್ರ ನಷ್ಟಕ್ಕೆ ಗುರಿಯಾಗಿ ಆ ಚಿಂತೆಯಿಂದ ತಾನು ಆತ್ಮಹತ್ಯೆಗೈಯುವ ಮೊದಲು ಪತ್ನಿ ನಿಖಿತಾ (30), ಮಗ ಆರ್ಯ ಕೃಷ್ಣ (4) , ತಾಯಿ ಹೇಮಲತಾ (60), ತಂದೆ ನಾಗರಾಜು ಭಟ್ಟಾಚಾರ್ಯ (65) ಅವರನ್ನು ಗುಂಡಿಟ್ಟು ಹತ್ಯೆಗೈದಿದ್ದಾರೆ. ಈ ಘಟನೆ ಬುಧವಾರ ತಡರಾತ್ರಿ ನಡೆದಿದ್ದು, ಇಂದು ಮುಂಜಾನೆ ಬೆಳಕಿಗೆ ಬಂದಿದೆ ಎಂದು ವರದಿಯಾಗಿದೆ. ಇವರೆಲ್ಲರೂ ಮೈಸೂರಿನ ದಟ್ಟಗಳ್ಳಿ ನಿವಾಸಿಗಳಾಗಿದ್ದಾರೆ ಎಂದು ಗುರುತಿಸಲಾಗಿದೆ.

ತುಮಕೂರು ಮೂಲದ, ಓಂ ಪ್ರಕಾಶ್ ಮೈಸೂರಿನ ದಟ್ಟಗಳ್ಳಿಯಲ್ಲಿ‌ ಮನೆ ಮಾಡಿಕೊಂಡು ಅನಿಮೇಶನ್‌ ಸಂಸ್ಥೆ ನಡೆಸುತ್ತಿದ್ದರು ಎಂಬ ಮಾಹಿತಿಯಿದ್ದು, ಪತ್ನಿ ನಿಖಿತಾ 8 ತಿಂಗಳ ಗರ್ಭಿಣಿಯಾಗಿದ್ದರು, ತಂದೆ, ತಾಯಿ ಹಾಗೂ ಮಗನ ಜೊತೆ ಮೈಸೂರಿನಿಂದ ಗುಂಡ್ಲಪೇಟೆಗೆ ಬಂದಿದ್ದು, ನಂತರ ನಂದಿ ಲಾಡ್ಜ್ ನಲ್ಲಿ ರೂಂ ಬುಕ್ ಮಾಡಿ ರಾತ್ರೀ ಅಲ್ಲಿಯೇ ವಾಸ್ತವ ಹೂಡಿದ್ದರು ಮತ್ತು ರಾತ್ರಿ ತಂದೆ ಹಾಗೂ ಮಗನಿಗೆ ಮೊದಲು ಗುಂಡು ಹೊಡೆದ ಓಂ ಪ್ರಕಾಶ್, ನಂತರ ತಾಯಿ, ಬಳಿಕ ೮ ತಿಂಗಳ ಗರ್ಭಿಣಿ ಹೆಂಡತಿಗೆ ಗುಂಡಿಕ್ಕಿ ಕೊನೆಗೆ ಊಟಿ ರಸ್ತೆಯ ಮಹೇಶ್ ಚಂದ್ರ ಗುರು ಅವರಿಗೆ ಸೇರಿದ ಜಮೀನಿಗೆ ಬಂದು ಪಿಸ್ತೂಲ್ ನಿಂದ ತನಗೆ ತಾನೇ ಬಾಯಿಗೆ ಪಿಸ್ತೂಲ್ ಇಟ್ಟು ಗುಂಡು ಹಾರಿಸಿಕೊಂಡು ಆತ್ಮಹತ್ಯೆಗೆ ಶರಣಾಗಿದ್ದಾರೆ ಎಂದು ವರದಿಯಾಗಿದೆ.

ವ್ಯವಹಾರದಲ್ಲಿ ನಷ್ಟ ಉಂಟಾಗಿರುವುದರಿಂದ ಆತ್ಮಹತ್ಯೆ ಮಾಡಿಕೊಂಡಿರಬಹುದು ಎಂದು ಶಂಕಿಸಲಾಗಿದೆ. ಇತ್ತೀಚೆಗಷ್ಟೇ ಕೆಫೆ ಕಾಫಿ ಡೇಯ ಮಾಲಕ ಸಿದ್ಧಾರ್ಥ್ ಅವರು ನೇತ್ರಾವತಿ ನದಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿರುವುದನ್ನು ಇಲ್ಲಿ ಸ್ಮರಿಸಬಹುದು.