ಒತ್ತಡವನ್ನು ಸಂಭ್ರಮಿಸಿ; ಪರೀಕ್ಷೆಯ ಭಯದಿಂದ ಮುಕ್ತರಾಗಿರಿ: ಫೆ.3 ರಂದು ಎಸ್ ಐ ಓ ದಿಂದ ಸಂವಾದ ಕಾರ್ಯಕ್ರಮ

0
615

ಮಂಗಳೂರು: ಪ್ರತೀ ವರ್ಷ ನಡೆಯುವ ಎಸೆಸೆಲ್ಸಿ ಹಾಗೂ ಪಿಯುಸಿಯ ಪರೀಕ್ಷೆಯಲ್ಲಿ ಹಲವಾರು ವಿದ್ಯಾರ್ಥಿಗಳು ಫಲಿತಾಂಶದಲ್ಲಿ ಹಿಂದೆ ಬೀಳುತ್ತಿರುವುದನ್ನು ಎಸ್ ಐ ಓ ಗಮನಿಸಿದೆ. ಇದನ್ನು ಗಂಭೀರವಾಗಿ ಪರಿಗಣಿಸಿ, ಎಸೆಸೆಲ್ಸಿ ಮತ್ತು ಪಿಯುಸಿ ವಿದ್ಯಾರ್ಥಿಗಳು ಪರೀಕ್ಷೆಯನ್ನು ಎದುರಿಸುವ ಭಯದಿಂದ ಮುಕ್ತರಾಗಲು ಸ್ಟೂಡೆಂಟ್ಸ್ ಇಸ್ಲಾಮಿಕ್ ಆರ್ಗನೈಝೇಶನ್ ಆಫ್ ಇಂಡಿಯಾ (Sio) ಮಂಗಳೂರು ನಗರ ಶಾಖೆಯ ವತಿಯಿಂದ ವಿದ್ಯಾರ್ಥಿಗಳಿಗೆ ‘ಒತ್ತಡವನ್ನು ಸಂಭ್ರಮಿಸಿ; ಪರೀಕ್ಷೆಯ ಭಯದಿಂದ ಮುಕ್ತರಾಗಿರಿ’ ಎಂಬ ಧ್ಯೇಯ ವಾಕ್ಯದೊಂದಿಗೆ ವಿದ್ಯಾರ್ಥಿಗಳೊಂದಿಗೆ ಸಂವಾದ ಕಾರ್ಯಕ್ರಮವನ್ನು ಫೆ.3 ಆದಿತ್ಯವಾರದಂದು ನಗರದ ಕಂದಕ್ ನಲ್ಲಿರುವ ಬದ್ರಿಯಾ ಶಾಲೆಯ ಸಭಾಂಗಣದಲ್ಲಿ ಆಯೋಜಿಸಲಾಗಿದೆ.

ಅಂದು ಬೆಳಗ್ಗೆ 10 ರಿಂದ ನಡೆಯುವ ಕಾರ್ಯಕ್ರಮದ ಮುಖ್ಯ ಅತಿಥಿಗಳಾಗಿ ಮಂಗಳೂರು ಕೆರಿಯರ್ ಗೈಡೆನ್ಸ್ & ಇನ್ರ್ಫಾಮೇಶನ್ ಸೆಂಟರ್ ನ ಸ್ಥಾಪಕಾಧ್ಯಕ್ಷರಾದ ಉಮರ್ ಯು. ಎಚ್ ರವರು ಭಾಗವಹಿಸಲಿದ್ದಾರೆ. ಕಾರ್ಯಕ್ರಮದಲ್ಲಿ ಭಾಗವಹಿಸಲು ಎಲ್ಲಾ ವಿದ್ಯಾರ್ಥಿಗಳಿಗೆ ಮುಕ್ತ ಅವಕಾಶವಿದ್ದು, ಯಾವುದೇ ರಿಜಿಸ್ಟ್ರೇಷನ್ ಶುಲ್ಕವಿಲ್ಲ ಹಾಗೂ ಹೆಸರು ನೋಂದಾಯಿಸಲು ವಿದ್ಯಾರ್ಥಿಗಳು ಮೊಬೈಲ್ ಸಂಖ್ಯೆ: 9844963059 ಅಥವಾ 8123560599 ಗೆ ಎಸ್ ಎಂ ಎಸ್ ಅಥವಾ ವಾಟ್ಸಪ್ ಮೂಲಕ ಮಾಹಿತಿ ನೀಡಬಹುದು ಎಂದು ಕಾರ್ಯಕ್ರಮದ ಸಂಚಾಲಕರಾದ ಸದೀದ್ ಪಕ್ಕಲಡ್ಕ ಹಾಗೂ ಸಲ್ಮಾನ್ ಕುದ್ರೋಳಿ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.