ಮಹಿಳೆಯರ ವಿರುದ್ಧ ಹೆಚ್ಚಿದ ದೌರ್ಜನ್ಯ: ದೂರು ಸಿಕ್ಕಿದೊಡನೆ ಕೇಸು ದಾಖಲಿಸಿ- ಕೇಂದ್ರ ಸರಕಾರ

0
534

ಸನ್ಮಾರ್ಗ ವಾರ್ತೆ

ಹೊಸದಿಲ್ಲಿ,ಅ.10: ಹಥ್ರಾಸ್ ಘಟನೆಯಲ್ಲಿ ದೇಶವ್ಯಾಪಕವಾಗಿ ಪ್ರತಿಭಟನೆ ನಡೆಯುತ್ತಿದ್ದು ಮಹಿಳೆಯರ ವಿರುದ್ಧ ದೌರ್ಜನ್ಯ ತಡೆಲು ಬಲವಾದ ಕ್ರಮ ಸ್ವೀಕರಿಸಬೇಕೆಂದು ಕೇಂದ್ರ ಸರಕಾರ ಹೇಳಿದೆ. ಮಹಿಳೆಯರ ಮೇಲಾದ ಅಪರಾಧಗಳಲ್ಲಿ ದೂರು ಸಿಕ್ಕಕೂಡಲೇ ಎಫ್‍ಐಆರ್ ದಾಖಲಿಸಬೇಕು. ಪೊಲೀಸ್ ಠಾಣೆಯ ವ್ಯಾಪ್ತಿಗೊಳಪಡದ ಸ್ಥಳದಲ್ಲಿ ಅಪರಾಧ ನಡೆದಿದ್ದರೂ ಝೀರೊ ಎಫ್‍ಐಆರ್ ದಾಖಲಿಸಬೇಕೆಂದು ಕೇಂದ್ರ ಗೃಹ ಸಚಿವಾಲಯ ರಾಜ್ಯ ಸರಕಾರ ಮತ್ತು ಕೇಂದ್ರಾಡಳಿತ ಪ್ರದೇಶಗಳಿಗೆ ಕಳುಹಿಸಿದ ಸುತ್ತೋಲೆಯಲ್ಲಿ ತಿಳಿಸಿದೆ.

ಮಹಿಳೆಯರ ದೂರಿನಲ್ಲಿ ನೋಂದಾಯಿತ ಪ್ರಕರಣ ಎರಡು ತಿಂಗಳೊಳಗೆ ತನಿಖೆ ಮುಗಿದಿರಬೇಕು. ಲೋಪ ಎಸಗುವ ಅಧಿಕಾರಿಗಳ ವಿರುದ್ಧ ಕ್ರಮ ಜರಗಿಸಬೇಕು. ಠಾಣೆಗೆ ತಿಳಿದಿರುವ ಅಪರಾಧ ನಡೆದಿದ್ದರೆ ದೂರು ನೀಡದೆಯೇ ಕೇಸು ಹಾಕಬೇಕೆಂದು ಸೂಚಿಸಲಾಗಿದೆ.

ಮಹಿಳೆಯರ ವಿರುದ್ಧ ದೌರ್ಜನ್ಯ ತಡೆಯ ಕಾನೂನುಗಳನ್ನು ಕ್ರೋಡೀಕರಿಸಿ ಕೇಂದ್ರ ಗೃಹ ಸಚಿವಾಲಯ ರಾಜ್ಯಗಳಿಗೆ ಪತ್ರ ಬರೆದಿದೆ. ಅತ್ಯಾಚಾರ ಯತ್ನ ಸಹಿತ ಮಹಿಳೆಯರಿಂದ ಯಾವುದೇ ದೂರು ಸಿಕ್ಕರೆ ಕೂಡಲೇ ಎಫ್‍ಐಆರ್ ಪ್ರಥಮ ಮಾಹಿತಿ ವರದಿ ದಾಖಲಿಸಬೇಕು. ಇದರಲ್ಲಿ ಯಾವುದೇ ರೀತಿಯ ಲೋಪ ಆಗಬಾರದು. ಯಾವುದೇ ಅಧಿಕಾರಿಯಿಂದ ತಪ್ಪು ನಡೆದರೆ ಆತನ ವಿರುದ್ಧ ಕಾನೂನು ಕ್ರಮ ಕೈಗೊಳ್ಳಬೇಕು.

ಸಂತ್ರಸ್ತೆಯರ ಹೇಳಿಕೆಯ ಆಧಾರದಲ್ಲಿ ಆರೋಪಿಗಳನ್ನು ಬಂಧಿಸಲು ಸಾಧ್ಯವಾಗುವ ರೀತಿಯಲ್ಲಿ ಕೇಸು ದಾಖಲಿಸಿ ತನಿಖೆ ನಡೆಸಬೇಕು. ಇಂತಹ ಪ್ರಕರಣಗಳ ತನಿಖೆಗೆ ರಾಜ್ಯಗಳಿಗೆ ಕೇಂದ್ರದ ಸಹಾಯವನ್ನು ಪಡೆಯಬಹುದು. ಅದಕ್ಕಾಗಿರುವ ಪೋರ್ಟಲ್‍ನ ಮೂಲಕ ಸಹಾಯ ಯಾಚಿಸಬಹುದು. ಬೇರೆ ರಾಜ್ಯಗಳ ಪೊಲೀಸರ ಸಹಾಯವನ್ನು ಪಡೆದುಕೊಳ್ಳಬಹುದು. ಸಾಕ್ಷ್ಯ ಸಂಗ್ರಹದಲ್ಲಿ ಸರಿಯಾಗಿ ಮತ್ತು ವೈಜ್ಞಾನಿಕ ಮಾನದಂಡಗಳನ್ನು ಪಾಲಿಸಬೇಕು.

ತನಿಖಾಧಿಕಾರಿಗಳ ಲೋಪದಿಂದ ಆರೋಪಿಗಳು ಪಾರಾಗುವ ಪರಿಸ್ಥಿತಿ ನಿರ್ಮಾಣವಾಗಬಾರದು ಎಂಬಿತ್ಯಾದಿ ನಿರ್ದೇಶಗಳನ್ನು ಕೇಂದ್ರ ಸರಕಾರ ರಾಜ್ಯಗಳಿಗೆ ನೀಡಿದೆ.