ಅಡುಗೆ ತಜ್ಞ, ಬಾಂಬೆ ಕ್ಯಾಂಟಿನ್ ಮಾಲಕ ಕೊರೊನಾಕ್ಕೆ ಬಲಿ

0
752

ಸನ್ಮಾರ್ಗ ವಾರ್ತೆ

ನ್ಯೂಯಾರ್ಕ್, ಮಾ. 26: ಪ್ರಮುಖ ಅಡುಗೆ ತಜ್ಞ ಬಾಂಬೆ ಕ್ಯಾಂಠೀನ್, ಚೆಸ್‍ಪ್ಲೊಯ್ಡ್, ಒ ಪೆಡ್ರೊ ರೆಸ್ಟೊರೆಂಟ್‍ಗಳ ಮಾಲಕ ಪ್ಲೊಯ್ಡ್ ಕಾರ್ಡೊಸ್ ಕೊರೊನಾದಿಂದ ಮೃತಪಟ್ಟಿದ್ದಾರೆ. ನ್ಯೂಜೆರ್ಸಿಯಲ್ಲಿ 59 ವರ್ಷದ ಅವರು ಮೃತರಾದರು. ಕಳೆದ 19 ನೇ ತಾರೀಕಿಗೆ ಕಾರ್ಡೊಸ್‍ರಿಗೆ ಕೊರೊನಾ ದೃಢವಾಗಿತ್ತು. ಮುಂಬೈ ಕ್ಯಾಂಟಿನ್ ವಾರ್ಷಿಕೋತ್ಸವಾಚರಣೆಯಲ್ಲಿಭಾಗಿಯಾಗಲು ಅವರು ಹುಟ್ಟೂರು ಮುಂಬೈಗೆ ಬಂದಿದ್ದರು.

ಮಾರ್ಚ್ ಒಂದರಂದು ವರ್ಷ ಆಚರಣೆ ನಡೆದಿತ್ತು. ಮಾರ್ಚ್ ಎಂಟರವರೆಗೆ ಇವರು ಮುಂಬೈಯಲ್ಲಿ ಇದ್ದರು. ಹೊಸ ಸಿಹಿ ಉಪಹಾರ ಅಂಗಡಿ ಉದ್ಘಾಟನೆ ಕಾರ್ಯಕ್ರಮದಲ್ಲಿ ಅವರು ಭಾಗವಹಿಸಿದ್ದರು.

ನಂತರ ಅಮೆರಿಕಕ್ಕೆ ತೆರಳಿದ ಅವರು ಅಲ್ಲಿ ಚಿಕಿತ್ಸೆ ಪಡೆದರು. ತಾನು ಆಸ್ಪತ್ರೆಯಲ್ಲಿರುವ ವಿಷಯವನ್ನು ಅವರೇ ಇನ್ಸ್ಟಾ ಗ್ರಾಂನಲ್ಲಿ ತಿಳಿಸಿದ್ದರು. ಆಸ್ಪತ್ರೆಯಲ್ಲಿ ಚಿಕಿತ್ಸೆಯಲ್ಲಿರುವಾಗಿನ ದೃಶ್ಯವನ್ನು ಅವರು ಹಂಚಿಕೊಂಡಿದ್ದರು.

LEAVE A REPLY

Please enter your comment!
Please enter your name here