ಛತ್ತೀಸ್ಗಡದಲ್ಲಿ ಕಾಂಗ್ರೆಸ್‍ಗೆ ಗೆಲುವು

0
471

ಸನ್ಮಾರ್ಗ ವಾರ್ತೆ

ರಾಯ್‍ಪುರ,ನ.11: ಛತ್ತೀಸ್ಗಡದಲ್ಲಿ ಕಾಂಗ್ರೆಸ್‍ಗೆ ಗೆಲುವು ಲಭಿಸಿದೆ. ಮಾಜಿ ಮುಖ್ಯಮಂತ್ರಿ ಒಂದು ಕಾಲದ ಕಾಂಗ್ರೆಸ್ ನಾಯಕ ಅಜಿತ್ ಜೋಗಿಯವರ ಕುಟುಂಬದ 2001ರಿಂದ ಗೆಲ್ಲುತ್ತಾ ಬಂದ ಮರ್‍ವಾಹಿ ಸೀಟಿನಲ್ಲಿ ಕಾಂಗ್ರೆಸ್ಸಿನ ಕೆ.ಕೆ.ಧ್ರುವ್ ಬಿಜೆಪಿ ಅಭ್ಯರ್ಥಿಗಿಂತ 38,000 ಮತಗಳ ಅಂತರದಲ್ಲಿ ಗೆಲುವು ಸಾಧಿಸಿದ್ದಾರೆ.

ಎಸ್‍ಟಿ ಮೀಸಲಾತಿ ಸೀಟು ಇದಾಗಿದ್ದು ಜನತಾ ಕಾಂಗ್ರೆಸ್ ನಾಯಕ ಅಜಿತ್ ಜೋಗಿ ನಿಧನದಿಂದ ಮರ್‍ವಾಹಿ ವಿಧಾನಸಭಾ ಸ್ಥಾನ ತೆರವಾಗಿತ್ತು. ಅಜಿತ್‍ ಜೋಗಿಯ ಮಗ ಅಮಿತ್ ಜೋಗಿ ಮತ್ತು ಪತ್ನಿ ರಿಚಾ ಜೋಗಿ ನಾಮಪತ್ರ ಸಲ್ಲಿಸಿದ್ದರೂ ಜಾತಿ ಸರ್ಟಿಫಿಕೇಟು ನೀಡಲು ವಿಫಲರಾಗಿದ್ದರಿಂದ ಅವರಿಬ್ಬರ ನಾಮಪತ್ರ ತಿರಸ್ಕೃತಗೊಂಡಿತ್ತು. ನಂತರ ಅವರು ಬಿಜೆಪಿಗೆ ಬೆಂಬಲ ನೀಡಿದ್ದರು.

ಕಾಂಗ್ರೆಸ್ ಅಭ್ಯರ್ಥಿ ಧ್ರುವ್ 83,561 ಮತಗಳಿಸಿದರೆ ಬಿಜೆಪಿ ಅಭ್ಯರ್ಥಿ ಗಂಭೀರ್ ಸಿಂಗ್ 45,364 ಮತಗಳನ್ನು ಪಡೆದರು. ಛತ್ತೀಸ್‍ಗಡ ಮುಖ್ಯಮಂತ್ರಿ ಭೂಪೇಶ್ ಬಾಗಲ್ ನೇರವಾಗಿ ಚುನಾವಣಾ ಪ್ರಚಾರಕ್ಕೆ ನೇತೃತ್ವ ನೀಡಿದ್ದರು. 90 ಸದಸ್ಯರ ವಿಧಾನಸಭೆಯಲ್ಲಿ ಕಾಂಗ್ರೆಸ್‍ಗೆ 70 ಸೀಟುಗಳಿವೆ.