ಟ್ರಂಪ್‌ರ 28 ಮಂದಿ ನಂಬಿಗಸ್ಥರಿಗೆ ನಿಷೇಧ ಹೇರಿದ ಚೀನ

0
128

ಸನ್ಮಾರ್ಗ ವಾರ್ತೆ

ಬೀಜಿಂಗ್: ಸ್ವಂತ ನಾಡಲ್ಲಿ ಅಪಮಾನಿತರಾದ ಟ್ರಂಪ್‍ರಿಗೆ ವಿದೇಶದಲ್ಲಿಯೂ ಅಪಮಾನವೇ ಕಾದಿದೆ. ಮಾಜಿ ವಿದೇಶ ಕಾರ್ಯದರ್ಶಿ ಮೈಕ್ ಪೊಂಪಿಯೊ ಸಹಿತ ಟ್ರಂಪ್‍ರ 28 ಮಂದಿ ನಂಬಿಗಸ್ಥರಿಗೆ ಚೀನ ನಿಷೇಧ ಹೇರಿದೆ. ದೇಶದ ಸಾರ್ವಭೌಮಾಧಿಕಾರದ ಮೇಲೆ ಹಸ್ತಕ್ಷೇಪ ಎಸಗಿದವರ ಮೇಲೆ ಈ ಕ್ರಮ ಎಂಬುದಾಗಿ ಚೀನ ಸ್ಪಷ್ಟಪಡಿಸಿದ್ದು ಇವರಿಗೆ ಚೀನಾ ಮಾತ್ರವಲ್ಲ ಹಾಂಕಾಂಗ್, ಮಕ್ಕಾವ್‍ಗಳಿಗೂ ಪ್ರವೇಶಿಸಲು ಆಗದು ಎಂದು ಬೈಡನ್ ಅಧಿಕಾರ ವಹಿಸಿಕೊಂಡ ಕೂಡಲೇ ಬೀಜಿಂಗ್ ಪತ್ರಿಕಾ ಹೇಳಿಕೆಯಲ್ಲಿ ತಿಳಿಸಿದೆ.

ಬೈಡನ್ ಅಧಿಕಾರಕ್ಕೆ ಏರಿ 15 ನಿಮಿಷದೊಳಗೆ ಚೀನ ಈ ಕ್ರಮವನ್ನು ಘೋಷಿಸಿತು ಎಂದು ಬ್ಲೂ ಬರ್ಗ್ ವರದಿ ಮಾಡಿದೆ. ಟ್ರಂಪ್‍ರ ಆರ್ಥಿಕ ಸಲಹೆಗಾರ ಪೀಟರ್ ನವಾರೊ, ರಾಷ್ಟ್ರೀಯ ಸುರಕ್ಷಾ ಸಲಹೆಗಾರ ರಾಬರ್ಟ್ ಒಬ್ರಿಯನ್, ಹಿರಿಯ ಮಧ್ಯಪ್ರಾಚ್ಯ ರಾಜತಾಂತ್ರಿಕ ಡೇವಿಡ್ ಸ್ಟಿಲ್ವೆಲ್, ರಾಷ್ಟ್ರೀಯ ಸುರಕ್ಷ ಉಪಸಲಹೆಗಾರ ಮ್ಯಾಥ್ಯೂ ಪೊಟಿಂಗರ್, ಆರೋಗ್ಯ ಆವಶ್ಯಕ ಸೇವಾ ಸಚಿವಾಲಯದ ಅಲೆಕ್ಸ್ ಅಸರ್, ಆರ್ಥಿಕ ಪ್ರಗತಿ ಕಾರ್ಯದರ್ಶಿ ಕೀತ್ ಕ್ರಾಚ್, ವಿಶ್ವಸಂಸ್ಥೆ ರಾಯಭಾರಿ ಕೆಲ್ಲಿಕ್ರಾಫ್ಟ್, ರಾಷ್ಟ್ರೀಯ ಸುರಕ್ಷಾ ಸಲಹೆಗಾರ ಆಗಿದ್ದ ಜಾನ್ ಬಲ್ಟನ್, ಚೀಫ್ ಸ್ಟ್ರಾಟಜಿಸ್ಟ್ ಸ್ಟಿವ್ ಬ್ಯಾನರ್ ಮುಂತಾದವರಿಗೂ ಚೀನ ನಿಷೇಧ ಹೇರಿದೆ.