ಚೀನಾದಲ್ಲಿ ಭಾರತೀಯ ವೆಬ್‍ಸೈಟ್‍‌ಗಳು ಬ್ಲಾಕ್

0
265

ಸನ್ಮಾರ್ಗ ವಾರ್ತೆ

ಬೀಜಿಂಗ್,ಜೂ.30: ಚೀನಾದ ಆಪ್‍ಗಳನ್ನು ಭಾರತ ನಿಷೇಧಿಸಿದ್ದಕ್ಕೆ ಪ್ರತ್ಯುತ್ತರವಾಗಿ ಭಾರತದ ಪತ್ರಿಕಾ ಸಂಸ್ಥೆಗಳ ವೆಬ್‍ಸೈಟ್‍ಗಳನ್ನು ಚೀನ್ ತಡೆಹಿಡಿದಿದೆ. ವಿಪಿಎನ್ ನೆಟ್‍ವರ್ಕ್ ಮೂಲ ಚೀನದ ಹಲವು ಕಡೆ ಭಾರತದ ದಿನ ಪತ್ರಿಕೆಗಳ ವೆಬ್‍ಸೈಟುಗಳನ್ನು ಲಭ್ಯಗೊಳಿಸಲಾಗುತ್ತಿತ್ತು. ಇದೇ ವೇಳೆ, ಎಪ್ರೊನ್, ಡೆಸ್ಕ್‌ಟಾಪ್ ಕಂಪ್ಯೂಟರ್‍ಗಳಲ್ಲಿ ವಿಪಿಎನ್ ಸೇವೆ ಲಭ್ಯವಿಲ್ಲ ಎಂಬ ದೂರುಗಳಿವೆ.

ಇಂಟರ್ನೆ‌ಟ್‍ನಲ್ಲಿ ವ್ಯಕ್ತಿಗಳ ಚಲನೆಗಳನ್ನು ರಹಸ್ಯವಾಗಿಡುವ ವ್ಯವಸ್ಥೆ ವಿಪಿಎನ್ ನೆಟ್‍ವರ್ಕ್ ಆಗಿದೆ. ಇಂಟರ್ನೆಟ್‍ನ ನಿಯಂತ್ರಣಗಳಿರುವ ದೇಶಗಳಲ್ಲಿ ವಿವಿಧ ವೆಬ್‍ಸೈಟ್‍ಗಳನ್ನು ಉಪಯೋಗಿಸಲು ವಿಪಿಎನ್ ನೆಟ್‍ವರ್ಕ್ ಉಪಯೋಗಿಸಲಾಗುತ್ತಿದೆ. ವಿಪಿಎನ್ ನೆಟ್‍ವರ್ಕ್ ಕೂಡ ತಡೆಯುವ ತಂತ್ರಜ್ಞಾನ ಚೀನದಲ್ಲಿದೆ. ಈ ತಂತ್ರಜ್ಞಾನ ಉಪಯೋಗಿಸಿ ಐಫೋನ್, ಡೆಸ್ಕ್‌ಟಾಪ್‍ನಲ್ಲಿ ಚೀನ ಭಾರತದ ವೆಬ್‍ಸೈಟ್‍ಗಳನ್ನು ಬ್ಲಾಕ್ ಮಾಡಿದೆ ಎಂದು ವರದಿಯಾಗಿದೆ.

ಓದುಗರೇ, ಸನ್ಮಾರ್ಗ ಫೇಸ್‌ಬುಕ್ ಪೇಜ್‌ನ್ನು ಲೈಕ್ ಮಾಡುವ ಮೂಲಕ ನಮ್ಮನ್ನು ಬೆಂಬಲಿಸಿ.

LEAVE A REPLY

Please enter your comment!
Please enter your name here